ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯಲ್ಲೂ ಕಾಡುಕೋಣ ಪ್ರತ್ಯಕ್ಷ; ಆತಂಕ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮೇ 12: ಕೃಷ್ಣನಗರಿ ಉಡುಪಿಯಲ್ಲೂ ಕಾಡುಕೋಣವೊಂದು ಪ್ರತ್ಯಕ್ಷವಾಗಿ ಸ್ಥಳೀಯರಲ್ಲಿ ಕೆಲಕಾಲ ಆತಂಕಕ್ಕೆ ಕಾರಣವಾಯ್ತು. ಇಂದು ಬೆಳ್ಳಂಬೆಳಿಗ್ಗೆಯೇ ಕುಕ್ಕೆಹಳ್ಳಿ ಗ್ರಾಮದಲ್ಲಿ ಕಾಡುಕೋಣ‌ ಪ್ರತ್ಯಕ್ಷವಾಗಿದೆ. ಇದನ್ನು ಕಂಡು ಸ್ಥಳೀಯರು ಒಂದು ಕ್ಷಣ ಅವಾಕ್ಕಾದರು.

Recommended Video

ಕಂಠ ಪೂರ್ತಿ ಕುಡಿದು ಟ್ರಾನ್ಸ್ಫಾರ್ಮರ್ ಜೊತೆ ಜಗಳಕ್ಕೆ ನಿಂತ ಕುಡುಕ | Oneindia Kannada

ಕಾಡಿನಿಂದ ಬಂದು ಗ್ರಾಮದಲ್ಲಿ ಓಡಾಡುತ್ತಿದ್ದ ಕಾಡುಕೋಣ ಕೆಲ ಕ್ಷಣದಲ್ಲೇ ಗ್ರಾಮದಿಂದ ಮರೆಯಾಯಿತು. ಲಾಕ್ ಡೌನ್ ನಿಂದ ಜನಸಂಚಾರ ವಿರಳವಾದ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಪದೇ ಪದೇ ಕಾಡುಕೋಣಗಳು ಕಾಣಿಸುತ್ತಿವೆ ಎನ್ನುತ್ತಾರೆ ಸ್ಥಳೀಯರು. ಇದು ಯಾರಿಗೂ ಹಾನಿ ಮಾಡದೆ ಕಾಡಿನೊಳಗೆ ಹೋದಾಗ ಜನ‌ ನಿಟ್ಟುಸಿರು ಬಿಟ್ಟರು.

ಕಾಡಿಗೆ ಸಾಗಿಸುವ ವೇಳೆ ಕಾಡುಕೋಣ ಸಾವು: ಪೊಲೀಸ್ ದೂರುಕಾಡಿಗೆ ಸಾಗಿಸುವ ವೇಳೆ ಕಾಡುಕೋಣ ಸಾವು: ಪೊಲೀಸ್ ದೂರು

Bison Came To Kukkehalli Village Today Morning

ಮಂಗಳೂರಿನಲ್ಲಿ ಕೆಲವೇ ದಿನಗಳ ಹಿಂದೆ ಕಾಡುಕೋಣವೊಂದು ಪ್ರತ್ಯಕ್ಷಗೊಂಡು, ಬಳಿಕ ಅದನ್ನು ಹಿಡಿದು ಕಾಡಿಗೆ ಸಾಗಿಸುವಾಗ ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು. ಕಾಡುಕೋಣ ಹಿಡಿಯುವಲ್ಲಿ ಅರಣ್ಯ ಇಲಾಖೆ ಬೇಜವಾಬ್ದಾರಿತನದಿಂದ ನಡೆದುಕೊಂಡಿದೆ. ಸೆರೆ ಹಿಡಿಯಲು ಉಪಯೋಗಿಸಿದ ಅವೈಜ್ಞಾನಿಕ ರೀತಿ ಹಾಗೂ ಅರಿವಳಿಕೆ ಮದ್ದು, ಮೈ ಮೇಲಿನ ಗಾಯಗಳು ಕಾಡುಕೋಣ ಅಸುನೀಗಲು ಕಾರಣವಾಗಿವೆ ಎಂದು ಸಾಮಾಜಿಕ ಹೋರಾಟಗಾರ ಜರಾಲ್ಡ್ ಟವರ್ಸ್ ಆರೋಪಿಸಿದ್ದರು.

English summary
Bison came to kukkehalli village today morning from forest,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X