ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು: ಬೈಕರ್ ಸಚಿನ್ ಶೆಟ್ಟಿಯ ಜಮ್ಮು ಕಾಶ್ಮೀರ ಯಾತ್ರೆ ಯಶಸ್ವಿ

|
Google Oneindia Kannada News

ಉಡುಪಿ, ಜುಲೈ 10: ಜಿಲ್ಲೆಯ ಕಾಪುವಿನ ಕೊಂಬಗುಡ್ಡೆ ನಿವಾಸಿ ಸಚಿನ್ ಶೆಟ್ಟಿ ಅವರು ಲೈಟ್ಸ್ ಕ್ಯಾಮರಾ ಲಡಾಕ್ - ಬೈಕ್ ಯಾತ್ರೆ ಕೈಗೊಂಡಿದ್ದು ವಿವಿಧ ರಾಜ್ಯಗಳ ಸಾಂಸ್ಕೃತಿಕ ಜೀವನ, ಆಹಾರ ಪದ್ಧತಿ, ಐತಿಹಾಸಿಕ ಪ್ರದೇಶಗಳ ಕುರಿತಾಗಿ ಸಾಕ್ಷ್ಯಚಿತ್ರ ನಿರ್ಮಾಣ ಗುರಿಯೊಂದಿಗೆ ರಾಷ್ಟ್ರದ 13 ರಾಜ್ಯಗಳು, 11,000 ಕಿಮೀ, ಲೈಟ್ಸ್ ಕ್ಯಾಮರಾ, ರೋಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಕಾಪುವಿನ ಸಚಿನ್ ಶೆಟ್ಟಿ 40 ದಿನಗಳ ಯಾತ್ರೆ ನೆಡಸಿ ಇದೀಗ ತನ್ನ ಈ ಅಭಿಯಾನದಲ್ಲಿ ಕಂಡುಂಡ ವಿವಿಧ ಆಹಾರ ಮತ್ತು ಸಂಸ್ಕೃತಿಯ ಸಾಕ್ಷ್ಯಚಿತ್ರವೊಂದು ನಿರ್ಮಿಸುತ್ತಿದ್ದಾರೆ.

"ಲೈಟ್ಸ್...ಕ್ಯಾಮರಾ...ಲಡಖ್' ಹೆಸರಿನ ಸಾಕ್ಷ್ಯಚಿತ್ರದಲ್ಲಿ ಮೇ 20ರಿಂದ ಮುಂಬೈಯಲ್ಲಿ ಆರಂಭಿಸಲಾಗಿ ಜುಲೈ ಒಂದರಂದು ಕನ್ಯಾಕುಮಾರಿಯಲ್ಲಿ ಪೂರ್ಣಗೊಳಿಸಲಾದ ಬೈಕ್ ಅಭಿಯಾನದ ಅನುಭವ ಅನಾವರಣಗೊಳ್ಳುತ್ತಿದೆ. ಇವರು ಉದಯಪುರ, ಜೈಸಲ್ಮೇರ್, ಬಿಕನೇರ್, ಅಮೃತಸರ, ಜಮ್ಮು, ಶ್ರೀನಗರ, ಕಾರ್ಗಿಲ್, ಲೇಹ್, ಲಡಖ್, ಹಂಡರ್, ಖಾರ್ಡಂಗ್ ಲಾ, ಕರ್ಜೋಕ್, ಮನಾಲಿ, ಬೋಪಾಲ್, ಆಂಧ್ರಪ್ರದೇಶ, ಹೈದರಾಬಾದ್, ಬೆಂಗಳೂರು ಕ್ರಮಿಸಿದ್ದಾರೆ.

Biker Sachin Shetty complets his dream bike ride from Kaup to Jammu Kashmir

"ನಾನು ಈಗಾಗಲೇ ಸಾಕ್ಷ್ಯಚಿತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಪ್ರವಾಸದ ವೇಳೆ ಚಿತ್ರೀಕರಿಸಿರುವ ದೃಶ್ಯಗಳ ಸಂಕಲನ ನಡೆಯುತ್ತಿದೆ. ಇದನ್ನು 20 ನಿಮಿಷಗಳ ಸಾಕ್ಷ್ಯಚಿತ್ರವಾಗಿ ನಿರ್ಮಿಸಲು ಯೋಚಿಸಿದ್ದೇನೆ" ಎಂದು ಕಾಪುವಿನ ನಿವಾಸಿ ಸಚಿನ್ ಶೆಟ್ಟಿ ಹೇಳಿದ್ದಾರೆ.

Biker Sachin Shetty complets his dream bike ride from Kaup to Jammu Kashmir

ಫೇಸ್ಬುಕ್ಕಿನಲ್ಲಿ ತೆರೆಯಲಾಗಿರುವ ಶಟ್ಟರ್ ಬಾಕ್ಸ್ ಫಿಲ್ಮ್ಸ್'ನಲ್ಲಿ ಈ ಸಾಕ್ಷ್ಯಚಿತ್ರ ಬಿಡುಗಡೆಗೊಳ್ಳಲಿದೆ. ಮಂಗಳೂರಿನ ಲೋಕಲ್ ಚಾನೆಲ್ಲುಗಳಲ್ಲಿ ಪ್ರಸಾರಗೊಳ್ಳಲಿದೆ. "ನನ್ನ ಈ ಅಭಿಯಾನಕ್ಕೆ ಗೆಳೆಯರು ಮತ್ತು ಹಿತೈಷಿಗಳು ನೀಡಿರುವ ಬೆಂಬಲ ಮರೆಯಲಾಗದು' ಎಂದರು.

Biker Sachin Shetty complets his dream bike ride from Kaup to Jammu Kashmir

"ಈ ಬೈಕ್ ಪ್ರವಾಸಕ್ಕೆ ಒಟ್ಟು 1.15 ಲಕ್ಷ ರೂ ಕರ್ಚಾಗಿದೆ. ನನ್ನ ಗೆಳೆಯರು ಮತ್ತು ಮಂಗಳೂರು ಜಾವಾ ಯೆಜ್ಡಿ ಮೋಟಾರ್ ಸೈಕಲ್ ಕ್ಲಬ್ ನನಗೆ ಆರ್ಥಿಕ ನೆರವು ನೀಡಿದೆ. ನಗರದ ಸಂಸ್ಥೆಯೊಂದು ಎರಡು ಕ್ಯಾಮರಾ ಪ್ರಾಯೋಜಿಸಿದರೆ, ಎನ್ಫೀಲ್ಡ್ ಕಂಪೆನಿ ಪ್ರವಾಸಕ್ಕೆ ಸಕಲ ನೆರವು ನೀಡಿದೆ' ಎಂದು ಸಚಿನ್ ಒನ್ ಇಂಡಿಯಾ ಕನ್ನಡಕ್ಕೆ ಹೇಳಿದ್ದಾರೆ.

Biker Sachin Shetty complets his dream bike ride from Kaup to Jammu Kashmir

"ಖಾರ್ಡಂಗ್ ಲಾದಲ್ಲಿ ಕೊರೆವ ಚಳಿ ಇದ್ದರೆ, ರಾಜಸ್ತಾನಕ್ಕೆ ಕಾಲಿಡುವಾಗ ಬಿಸಿಲ ಧಗೆ ತಡೆಯಲಾಗಲಿಲ್ಲ. ಒಂದೊಂದು ಕಡೆ ಒಂದೊಂದು ಆಹಾರ ಪದ್ಧತಿ, ಸಂಸ್ಕೃತಿ ಕಂಡಿದ್ದೇನೆ ' ಎಂದರು.

Biker Sachin Shetty complets his dream bike ride from Kaup to Jammu Kashmir

ರೋಯಲ್ ಎನ್‌ಫೀಲ್ಡ್ - ಹಿಮಾಲಯನ್ ಬೈಕ್ ಮೂಲಕ ದೇಶ ಸಂಚರಿಸಲಿರುವ ಇವರು ತನ್ನೊಂದಿಗೆ ಕೊಂಡೊಯ್ಯುವ ಹೆಲ್ಮೆಟ್ ಕ್ಯಾಮೆರಾ, ಡಿಜಿ ಕ್ಯಾಮರಾ, ಗೋಪ್ರೊ ಕ್ಯಾಮರಾಗಳ ಮೂಲಕವಾಗಿ ಯಾತ್ರೆಯ ಸಂಪೂರ್ಣ ಚಿತ್ರೀಕರಣ ನಡೆಸಿದ್ದರೆ. ತಮ್ಮ ಸಂಚಾರಕ್ಕಾಗಿ 2 ಲಕ್ಷ ರೂ. ವೆಚ್ಚದ ಬೈಕ್‌ನ್ನು ವಿನೂತನ ಶೈಲಿಗೆ ಮಾರ್ಪಾಡು ಮಾಡಿಕೊಂಡು ಬೈಕ್‌ನಲ್ಲೇ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಪೆಟ್ರೋಲ್ ಕ್ಯಾನ್, ಜಿ.ಪಿ.ಎಸ್. ನೇವಿಗೇಟರ್, ಮೊಬೈಲ್ ಮತ್ತು ಕ್ಯಾಮರಾ ಚಾರ್ಜಿಂಗ್ ವ್ಯವಸ್ಥೆ, ಟೂಲ್‌ಕಿಟ್, ಪಂಪ್, ವಾಟರ್ ಕಿಟ್‌ನ್ನು ಅಳವಡಿಸಿಕೊಂಡಿದ್ದರು.

Biker Sachin Shetty complets his dream bike ride from Kaup to Jammu Kashmir

ಸಚಿನ್ ಶೆಟ್ಟಿ ಜಾವಾ ಎಜ್ಡಿ ಟೀಮ್ ಜೊತೆಗೆ ಬೆಂಗಳೂರು, ಮಡಿಕೇರಿ, ಊಟಿ, ಹೈದರಾಬಾದ್, ಕನ್ಯಾಕುಮಾರಿ ಇತರ ಪ್ರದೇಶಗಳಲ್ಲಿ ಬೈಕ್ ಯಾತ್ರೆ ನಡೆಸಿದ್ದು, 2015ರಲ್ಲಿ ಬೆಂಗಳೂರಿನ ಜಾವಾ ಎಜ್ಡಿ ಮೋಟಾರ್ ಸೈಕಲ್ ಅಸೋಸಿಯೇಷನ್ ಸಂಯೋಜಿಸಿದ್ದ ಜ್ವಾಲಿ ಬೈಕ್ ರ್ಯಾಲಿಯಲ್ಲಿ ಭಾಗವಹಿಸಿ ಲಿಮ್ಕಾ ಬುಕ್ ಆಫ್ ರೆರ್ಕಾಂಡಿಗ್‌ನಲ್ಲಿ ತಮ್ಮ ಹೆಸರನ್ನು ಸೇರ್ಪಡೆಗೊಳಿಸಿಕೊಂಡಿದ್ದಾರೆ.

English summary
Biker Sachin Shetty Ends 11,200 Km ‘Lights Camera Ladakh’ Ride, which started from Kapu in Dakshin Kannada to Jammu and Kashmir on 28 May 2017. Now all the bikers are back to Kaup.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X