ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ; ಸ್ಫೋಟಕ ತಿರುವು ಪಡೆದ ವಿಶಾಲ ಗಾಣಿಗ ಕೊಲೆ ಕೇಸ್!

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜುಲೈ 20; ತೀವ್ರ ಸಂಚಲನ ಮೂಡಿಸಿದ್ದ ಉಡುಪಿ ಜಿಲ್ಲೆಯ ವಿಶಾಲ ಗಾಣಿಗ ಕೊಲೆ ಪ್ರಕರಣ ತಾರ್ಕಿಕ ಅಂತ್ಯ ಕಾಣುತ್ತಿದೆ. ಉಡುಪಿ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶಾಲ ಗಾಣಿಗ ಪತಿ ರಾಮಕೃಷ್ಣ ಬಂಧಿಸಿದ್ದಾರೆ.

ಜುಲೈ 12ರಂದು ವಿಶಾಲ ಗಾಣಿಗ (45) ಹತ್ಯೆ ನಡೆದಿತ್ತು. ಪತಿ ರಾಮಕೃಷ್ಣ ಪತ್ನಿಯ ಹತ್ಯೆಗೆ ಸುಪಾರಿ ನೀಡಿರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ. ದುಬೈನಲ್ಲಿದ್ದ ರಾಮಕೃಷ್ಣ ಅಲ್ಲಿಂದಲೇ ಪತ್ನಿಯ ಕೊಲೆಗೆ ಸಂಚು ರೂಪಿಸಿದ್ದ.

ಚಿನ್ನದಾಸೆಗಾಗಿ ಮಹಿಳೆಯ ಹತ್ಯೆ; ದುಬೈನಲ್ಲಿದ್ದಾಕೆ ಊರಿಗೆ ಬಂದು ಹೆಣವಾಗಿದ್ದೇ ದುರಂತಚಿನ್ನದಾಸೆಗಾಗಿ ಮಹಿಳೆಯ ಹತ್ಯೆ; ದುಬೈನಲ್ಲಿದ್ದಾಕೆ ಊರಿಗೆ ಬಂದು ಹೆಣವಾಗಿದ್ದೇ ದುರಂತ

ಉತ್ತರ ಭಾರತ ಮೂಲದ ಸುಪಾರಿ ಹಂತಕರ ಮೂಲಕ ಕೊಲೆಗೆ ಸುಪಾರಿ ನೀಡಲಾಗಿತ್ತು. ವಿಶಾಲ ಗಾಣಿಗ ಕೊಲೆಗೆ ರಾಮಕೃಷ್ಣನ ಅಕ್ರಮ ಸಂಬಂಧ, ಆಸ್ತಿ ವ್ಯವಹಾರವೇ ಕಾರಣ‌ವಿರಬಹುದು ಎಂದು ಶಂಕಿಸಲಾಗಿದ್ದು, ತನಿಖೆ ಮುಂದುವರೆದಿದೆ.

ಬ್ಯಾಂಕಿನೊಳಗೆ ನುಗ್ಗಿ ರೌಡಿ ಶೀಟರ್ ಬಬ್ಲಿ ಬರ್ಬರ ಹತ್ಯೆ ಬ್ಯಾಂಕಿನೊಳಗೆ ನುಗ್ಗಿ ರೌಡಿ ಶೀಟರ್ ಬಬ್ಲಿ ಬರ್ಬರ ಹತ್ಯೆ

Big Twist For Vishala Ganiga Murder Case Husband Arrested

ಕೆಲವು ದಿನಗಳ ಹಿಂದೆ ರಾಮಕೃಷ್ಣನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರು ವಾಪಸ್ ಕಳಿಸಿದ್ದರು. ಸೋಮವಾರ ಬಂಧಿಸಿ ವಿಚಾರಣೆಯನ್ನು ನಡೆಸುತ್ತಿದ್ದಾರೆ. ಬೇರೆ ರಾಜ್ಯದಲ್ಲಿ ಅಡಗಿದ್ದ ಸುಪಾರಿ ಹಂತಕರನ್ನು ಬಂಧಿಸಲಾಗಿದ್ದು, ಪೊಲೀಸರು ಶೀಘ್ರವೇ ಈ ಕುರಿತು ಮಾಹಿತಿ ನೀಡಲಿದ್ದಾರೆ.

ದಿ. ಧರ್ಮಸಿಂಗ್ ಸೋದರ ಸಂಬಂಧಿ ಸುಪಾರಿ ಹತ್ಯೆಯ ಸೀಕ್ರೇಟ್ !ದಿ. ಧರ್ಮಸಿಂಗ್ ಸೋದರ ಸಂಬಂಧಿ ಸುಪಾರಿ ಹತ್ಯೆಯ ಸೀಕ್ರೇಟ್ !

ಜುಲೈ 12ರಂದು ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಉಪ್ಪಿಕೋಟೆಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಿಶಾಲ ಗಾಣಿಗ ಕೊಲೆಯಾಗಿತ್ತು. ಈ ಹತ್ಯೆ ಪ್ರಕರಣದ ಜಿಲ್ಲೆಯಲ್ಲಿ ಮಾತ್ರವಲ್ಲದೆ ಇಡೀ ಕರಾವಳಿಯಲ್ಲೇ ತೀವ್ರ ಸಂಚಲನ ಉಂಟು ಮಾಡಿತ್ತು.

Recommended Video

Nalin Kumar audio leak ! ಹೊರಬಿತ್ತು ಸ್ಫೋಟಕ ಸತ್ಯ | Oneindia Kannada

ಗಂಗೊಳ್ಳಿಯ ನಿವಾಸಿಯಾದ ವಿಶಾಲ ಗಾಣಿಗ ದುಬೈನಲ್ಲಿದ್ದರು. ಭಾರತಕ್ಕೆ ಮರಳಿದ ಕೆಲವೇ ದಿನಗಳಲ್ಲಿ ಅವರ ಹತ್ಯೆಯಾಗಿತ್ತು. ಪರಿಚಯಸ್ಥರೇ ಈ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದರು.

English summary
Big twist for the Vishala Ganiga murder case. Police arrested Vishala Ganiga husband for hire supari killers. Vishala Ganiga found murdered on July 12 few days after she returned to India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X