ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ; ತೀರ್ಪು ಮುಂದೂಡಿದ ಕೋರ್ಟ್

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮೇ 31; ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ತೀರ್ಪನ್ನು ಜಿಲ್ಲಾ ನ್ಯಾಯಾಲಯ ಮುಂದೂಡಿ ಆದೇಶ ಹೊರಡಿಸಿದೆ. ಭಾಸ್ಕರ ಶೆಟ್ಟಿ ಪತ್ನಿ, ಪುತ್ರ ಈ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ.

ಭಾಸ್ಕರ ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿ ಪ್ರಿಯಕರ ಮತ್ತು ಪುತ್ರನ ಜೊತೆ ಸೇರಿ ಗಂಡನನ್ನು ಕೊಂದು, ಹೋಮಕುಂಡದಲ್ಲಿ ಹಾಕಿ ಸುಟ್ಟ ಪ್ರಕರಣವಿದು. ರಾಜ್ಯಾದ್ಯಂತ ಈ ಕೊಲೆ ಪ್ರಕರಣ ಭಾರೀ ಸಂಚಲನ ಮೂಡಿಸಿತ್ತು.

 ಭಾಸ್ಕರ ಶೆಟ್ಟಿ ಹತ್ಯೆ : ನಿರಂಜನ್ ಭಟ್ ಜಾಮೀನು ಅರ್ಜಿ ಸುಪ್ರೀಂನಲ್ಲಿ ವಜಾ ಭಾಸ್ಕರ ಶೆಟ್ಟಿ ಹತ್ಯೆ : ನಿರಂಜನ್ ಭಟ್ ಜಾಮೀನು ಅರ್ಜಿ ಸುಪ್ರೀಂನಲ್ಲಿ ವಜಾ

ಪ್ರಕರಣದ ತೀರ್ಪನ್ನು ಮುಂದೂಡಿ‌ ಜಿಲ್ಲಾ ‌ಸತ್ರ‌ ನ್ಯಾಯಾಧೀಶ ಸುಬ್ರಮಣ್ಯ ಸೋಮವಾರ ಆದೇಶ ಹೊರಡಿಸಿದ್ದಾರೆ. ಜೂನ್‌ 8ರಂದು ಪ್ರಮುಖ ಆರೋಪಿ ರಾಜೇಶ್ವರಿ ‌ಶೆಟ್ಟಿ ಹಾಗೂ ಸಾಕ್ಷ್ಯ ‌ನಾಶದ ಆರೋಪಿ ರಾಘವೇಂದ್ರ ‌ಹಾಜರಾಗಲು ಆದೇಶ ನೀಡಲಾಗಿದೆ.

ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ : ಸಾಕ್ಷಿಗಳ ವಿಚಾರಣೆ ಆರಂಭಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ : ಸಾಕ್ಷಿಗಳ ವಿಚಾರಣೆ ಆರಂಭ

Bhaskar Shetty Murder Case Verdict Delayed

ಕೊಲೆ ಪ್ರಕರಣ ಆರೋಪಿಗಳಾದ ನವನೀತ್‌ ಶೆಟ್ಟಿ‌ ಹಾಗೂ‌ ನಿರಂಜನ್ ಜೈಲಿನಲ್ಲಿದ್ದಾರೆ. ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.

ಡೋಂಗಿ ಜ್ಯೋತಿಷಿ ಮಾತು ಕೇಳಿ ಹೆತ್ತವರ ಕೊಲೆ ಮಾಡಿದ 14 ವರ್ಷದ ಪುತ್ರ !ಡೋಂಗಿ ಜ್ಯೋತಿಷಿ ಮಾತು ಕೇಳಿ ಹೆತ್ತವರ ಕೊಲೆ ಮಾಡಿದ 14 ವರ್ಷದ ಪುತ್ರ !

Recommended Video

Jayalalithaa ನಂತರ ನಾನೇ CM | Sasikala | Oneindia Kannada

2016ರ ಜುಲೈ ತಿಂಗಳಲ್ಲಿ ಈ ಭೀಕರ ಕೊಲೆ ನಡೆದಿತ್ತು. ರಾಜೇಶ್ವರಿ ಶೆಟ್ಟಿ, ಪುತ್ರ‌ ನವನೀತ್ ಮತ್ತು ಪ್ರಿಯಕರ ನಿರಂಜನ್ ಜೊತೆ‌ ಸೇರಿ ಭಾಸ್ಕರ ಶೆಟ್ಟಿಯನ್ನು ಮನೆಯಲ್ಲೇ‌ ಹತ್ಯೆ ಮಾಡಿದ್ದರು. ಕಾರಿನಲ್ಲಿ ಪ್ರಿಯಕರನ‌ ಮನೆ ನಂದಳಿಕೆಗೆ ಶವವನ್ನು ತೆಗೆದುಕೊಂಡು ಹೋಗಿ‌ ಹೋಮಕುಂಡದಲ್ಲಿ ಶವವನ್ನು ಸುಟ್ಟು ಹಾಕಿದ್ದರು.

English summary
Udupi district court on May 31st postponed the verdict on the murder case of Bhaskar Shetty. In the case Bhaskar Shetty wife and son main accused.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X