ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ, ಬೈಂದೂರಿನಲ್ಲಿ ಬೆಟ್ಟಿಂಗ್ ಜೋರು: ಕೃಷ್ಣನಗರಿಯಲ್ಲಿ ಗೆಲ್ಲೋರಾರು ?

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮೇ 14 : ಸಾಮಾನ್ಯವಾಗಿ ಬೇಸಿಗೆ ರಜೆ ಬಂತು ಅಂದ್ರೆ ಐಪಿಎಲ್ ಬೆಟ್ಟಿಂಗ್ ಶುರುವಾಗುತ್ತೆ. ಆದ್ರೆ ಈ ಬಾರಿ ಐಪಿಎಲ್ ಜೊತೆಗೆ ವಿಧಾನಸಭೆ ಚುನಾವಣೆಯೂ ಬಂದಿದೆ. ಫಲಿತಾಂಶಕ್ಕೆ ಕ್ಷಣಗಣನೆ ಪ್ರಾರಂಭಗೊಂಡಿದ್ದು , ಅಭ್ಯರ್ಥಿಗಳ ಎದೆ ಢವಢವ ಅಂತಿದೆ.

ಇನ್ನೊಂದೆಡೆ ,ಕಾರ್ಯಕರ್ತರು ತಮ್ಮ ಫೇವರಿಟ್ ಅಭ್ಯರ್ಥಿಯ ಪರ ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ಉಡುಪಿ ಜಿಲ್ಲೆಯ ಮಟ್ಟಿಗೆ ಹೇಳೋದಾದ್ರೆ ,ಉಡುಪಿ ವಿಧಾನಸಭೆ ಕ್ಷೇತ್ರ ಮತ್ತು ಬೈಂದೂರು ವಿಧಾನಸಭೆ ಕ್ಷೇತ್ರ ಬೆಟ್ಟಿಂಗ್ ವಿಷಯದಲ್ಲಿ ಮುಂಚೂಣಿಯಲ್ಲಿದ್ದು, ಸಂಪೂರ್ಣ ವಿವರ ಇಲ್ಲಿದೆ ಓದಿ..

ಉಡುಪಿ ಕ್ಷೇತ್ರ flashback : ಮಧ್ವರಾಜ್ ಕುಟುಂಬ ರಾಜಕೀಯಉಡುಪಿ ಕ್ಷೇತ್ರ flashback : ಮಧ್ವರಾಜ್ ಕುಟುಂಬ ರಾಜಕೀಯ

 ಪ್ರಮೋದ್ ಮಧ್ವರಾಜ್ ಗೆ ವರ್ಚಸ್ಸಿಲ್ಲ

ಪ್ರಮೋದ್ ಮಧ್ವರಾಜ್ ಗೆ ವರ್ಚಸ್ಸಿಲ್ಲ

ಉಡುಪಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿರುವುದು ಸಚಿವ ಪ್ರಮೋದ್ ಮದ್ವರಾಜ್. ರಾಜ್ಯದಲ್ಲೇ ಅತಿ ಹೆಚ್ಚು ಮತಗಳ ಲೀಡ್ ನಿಂದ ಗೆಲುವು ಸಾಧಿಸ್ತೇನೆ ಅಂತ ಹೇಳುತ್ತಿದ್ದ ಪ್ರಮೋದ್ ಮಧ್ವರಾಜ್ ವರ್ಚಸ್ಸು ಈಗ ಮೊದಲಿನಂತಿಲ್ಲ.

ಚುನಾವಣೆ ತನಕ ಪ್ರಮೋದ್ ಪರ ಬೆಟ್ಟಿಂಗ್ ಮೌಲ್ಯ ತುಂಬ ಹೆಚ್ಚಿತ್ತು. ಆದ್ರೆ ಚುನಾವಣೆ ಮುಗಿದ ಬಳಿಕ ಪ್ರಮೋದ್ ಮೌಲ್ಯ ಕಡಿಮೆಯಾಗಿದೆ. ಬೆಟ್ಟಿಂಗ್ ಕಟ್ಟುವ ಜನ ಬಿಜೆಪಿ ಅಭ್ಯರ್ಥಿ ರಘುಪತಿ ಭಟ್ ಪರವೂ ಒಲವು ತೋರಿಸ್ತಿರೋದು ಉಡುಪಿ ಕ್ಷೇತ್ರದ ಲೇಟೆಸ್ಟ್ ಟ್ರೆಂಡ್.

 ಮಲ್ಪೆಯಲ್ಲಿದ್ದಾರೆ ನಿರ್ಣಾಯಕ ಮತದಾರರು

ಮಲ್ಪೆಯಲ್ಲಿದ್ದಾರೆ ನಿರ್ಣಾಯಕ ಮತದಾರರು

ಮುಖ್ಯವಾಗಿ ಉಡುಪಿ ಕ್ಷೇತ್ರದಲ್ಲಿ ನಿರ್ಣಾಯಕ ಮತದಾರರಿರುವುದು ಮಲ್ಪೆಯಲ್ಲಿ. ಮೀನುಗಾರ ಸಮುದಾಯ ಯಾವ ಕಡೆ ಹೊರಳುತ್ತದೋ ಆ ಪಕ್ಷ ಗೆಲ್ಲುತ್ತದೆ ಎಂಬುದು ಉಡುಪಿ ಕ್ಷೇತ್ರದ ನಂಬಿಕೆ. ಹೀಗಾಗಿ ಮಲ್ಪೆಯ ಬೆಟ್ಟಿಂಗ್ ವೀರರು ಪ್ರಮೋದ್ ಮಧ್ವರಾಜ್ ಮತ್ತು ರಘುಪತಿ ಭಟ್ ಇಬ್ಬರ ಪರವೂ ಬಾಜಿ ಕಟ್ಟುತ್ತಿದ್ದಾರೆ.

ಈ ಇಬ್ಬರು ಅಭ್ಯರ್ಥಿಗಳ ಸದ್ಯದ ಬೆಟ್ಟಿಂಗ್ ಮೌಲ್ಯ 70:30 ಚುನಾವಣೆಗೆ ನಾಲ್ಕಾರು ತಿಂಗಳ ಮೊದಲು ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಸೇರ್ಪಡೆಯಾಗ್ತಾರೆ ಎಂಬ ವದಂತಿ ಅಪ್ಪಳಿಸಿತ್ತು. ಬಳಿಕ ಸಚಿವರು ಇದರಿಂದ ಹೊರಬರಲು ಸಾಕಷ್ಟು ಒದ್ದಾಡಬೇಕಾಯಿತು. ಆದ್ರೆ ಈ ಅಂಶ ರಘುಪತಿ ಭಟ್ ಗೆ ಪ್ಲಸ್ ಆಗಲಿದೆ ಎಂದೇ ಹೇಳಲಾಗ್ತಿದೆ.

ಕ್ಷೇತ್ರ ಪರಿಚಯ: ಉಡುಪಿಯಲ್ಲಿ ಮಧ್ವರಾಜ್ ಗೆ ಮತ್ತೆ ಗೆಲ್ಲುವ ತವಕ ಕ್ಷೇತ್ರ ಪರಿಚಯ: ಉಡುಪಿಯಲ್ಲಿ ಮಧ್ವರಾಜ್ ಗೆ ಮತ್ತೆ ಗೆಲ್ಲುವ ತವಕ

 ಇವರ ಬೆಟ್ಟಿಂಗ್ ಮೌಲ್ಯದಲ್ಲಿ ಕುಸಿತ

ಇವರ ಬೆಟ್ಟಿಂಗ್ ಮೌಲ್ಯದಲ್ಲಿ ಕುಸಿತ

ಕಳೆದ ಐದು ವರ್ಷದಲ್ಲಿ ಪ್ರಮೋದ್ ಮಧ್ವರಾಜ್ ಪರವಾಗಿಲ್ಲ ಎಂಬಷ್ಟು ಜನಸೇವೆ ಮಾಡಿದ್ದರೂ ಚುನಾವಣೆ ಹೊತ್ತಿಗೆ ಅಪ್ಪಳಿಸಿದ ಬಿಜೆಪಿ ಸೇರ್ಪಡೆ ವದಂತಿ ಸಚಿವರಿಗೆ ತುಸು ಹಿನ್ನಡೆ ತಂದು ಕೊಡುವ ಸಾಧ್ಯತೆಗಳಿವೆ. ಮುಖ್ಯವಾಗಿ ಅಲ್ಪಸಂಖ್ಯಾತ ಸಮುದಾಯದ ಮತದಾರರು ಪ್ರಮೋದ್ ಇಂದಲ್ಲ ನಾಳೆ ಕಾಂಗ್ರೆಸ್ ಗೆ ಕೈ ಕೊಡ್ತಾರೆ.

ಹೀಗಾಗಿ ಅವರಿಗೆ ಮತ ಹಾಕೋದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎಂಬ ಮಾತುಗಳು ಕೇಳಿ ಬರ್ತಿವೆ. ಒಂದು ವೇಳೆ ಇದು ನಿಜವೇ ಆದ್ರೆ ಪ್ರಮೋದ್ ಗೆಲುವು ಪ್ರಯಾಸವಾಗಬಹುದು. ಹೀಗಾಗಿ ಪ್ರಮೋದ್ ಪರ ತೀವ್ರವಾಗಿ ಏರಿದ್ದ ಬೆಟ್ಟಿಂಗ್ ಮೌಲ್ಯ ಈಗ ಕುಸಿತ ಖಂಡಿದೆ.

 ಬೈಂದೂರು ವಿಧಾನಸಭಾ ಕ್ಷೇತ್ರ

ಬೈಂದೂರು ವಿಧಾನಸಭಾ ಕ್ಷೇತ್ರ

ಇಲ್ಲಿ ಕಾಂಗ್ರೆಸ್ ನ ಗೋಪಾಲ್ ಪೂಜಾರಿ ಶಾಸಕರಾಗಿದ್ದಾರೆ. 2008 ರಲ್ಲಿ ಬಿಜೆಪಿಯ ಲಕ್ಷ್ಮೀನಾರಾಯಣ ಗೆದ್ದದ್ದು ಬಿಟ್ಟರೆ , ಐದು ಅವಧಿಗೆ ಇಲ್ಲಿ ಶಾಸಕರಾಗಿದ್ದವರು ಗೋಪಾಲ್ ಪೂಜಾರಿ. ಹೀಗಾಗಿ ಗೋಪಾಲ್ ಪೂಜಾರಿಯವರಿಗೆ ಈ ಕ್ಷೇತ್ರದ ಜನರ ನಾಡಿಮಿಡಿತ ಗೊತ್ತಿದೆ.

ಆದ್ರೆ ಇತ್ತೀಚೆಗೆ ಅವರು ಕ್ಷೇತ್ರದ ಜನರ ಕೈಗೆ ಸಿಗುತ್ತಿಲ್ಲ. ಸದಾ ಬೆಂಗಳೂರಿನಲ್ಲಿರ್ತಾರೆ ಎಂಬ ಆರೋಪವೂ ಇದೆ. ಕಳೆದ ಬಾರಿ ಬಿಜೆಪಿಯ ಸುಕುಮಾರ್ ಇಲ್ಲಿ ಸೋತಿದ್ದರು. ಬೈಂದೂರು ವಿಧಾನಸಭೆ ಕ್ಷೇತ್ರ ಉಡುಪಿ ಜಿಲ್ಲೆಯಲ್ಲಿದ್ದರೂ ಮಾಜಿ ಸಿಎಂ ಬಿಎಸ್ ವೈ ಅವರ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಒಳಪಡುತ್ತದೆ ಅನ್ನೋದು ವಿಶೇಷ.

 ಕಾಂಗ್ರೆಸ್-ಬಿಜೆಪಿಗೆ 50-50 ಕ್ಷೇತ್ರ

ಕಾಂಗ್ರೆಸ್-ಬಿಜೆಪಿಗೆ 50-50 ಕ್ಷೇತ್ರ

ಈ ಕಾರಣಕ್ಕೆ ಬೈಂದೂರು ಕ್ಷೇತ್ರದಲ್ಲಿ ಸ್ವಲ್ಪ ಮಟ್ಟಿಗೆ ಬಿಎಸ್ ವೈ ಪ್ರಭಾವ ಕೆಲಸ ಮಾಡುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಇದೇ ಕಾರಣಕ್ಕೆ ಬೆಟ್ಟಿಂಗ್ ವಿಷಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ 50-50 ಕ್ಷೇತ್ರ ಎನಿಸಿದೆ.

ಕಾಂಗ್ರೆಸ್ ನ ಗೋಪಾಲ್ ಪೂಜಾರಿ ಮತ್ತು ಬಿಜೆಪಿಯ ಸುಕುಮಾರ್ ಶೆಟ್ಟಿ ಪರ ಇಲ್ಲಿ ಸಮಾನವಾಗಿ ಬೆಟ್ಟಿಂಗ್ ನಡೆಯುತ್ತಿದೆ. ಕಳೆದೆರಡು ದಿನಗಳಿಂದ ಸುಕುಮಾರ್ ಶೆಟ್ಟಿಯವರ ಬೆಟ್ಟಿಂಗ್ ಮೌಲ್ಯ ಹೆಚ್ಚುತ್ತಿದ್ದು, ಇದು ಬಿಜೆಪಿ ವಲಯದಲ್ಲಿ ಸಂತಸಕ್ಕೂ ಕಾರಣವಾಗಿದೆ.

English summary
karnataka assembly elections 2018: Betting people are in favor of BJP candidate Raghupati Bhat. This is the latest trend in the Udupi constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X