• search
  • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಡುಪಿ ಕೃಷ್ಣಮಠದಲ್ಲಿ ದೀಪಾವಳಿ ಪ್ರಯುಕ್ತ ಜಲ ಪೂರಣ ಗಂಗಾ ಪೂಜೆ, ಬಲೀಂದ್ರ ಪೂಜೆ ಸಂಪನ್ನ

By ಉಡುಪಿ ಪ್ರತಿನಿಧಿ
|

ಉಡುಪಿ, ನವೆಂಬರ್ 15: ಉಡುಪಿ ಶ್ರೀಕೃಷ್ಣ ಮಠದಲ್ಲಿ ದೀಪಾವಳಿಯ ಪ್ರಯುಕ್ತ ಜಲ ಪೂರಣ ಗಂಗಾ ಪೂಜೆ ನಡೆಯಿತು. ಪೂಜೆಯನ್ನು ಪರ್ಯಾಯ ಅದಮಾರು ಈಶಪ್ರಿಯ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಮಠದ ಪುರೋಹಿತರಾದ ಲಕ್ಷ್ಮೀಶ ಆಚಾರ್ಯರು ನೆರವೇರಿಸಿದರು.

ಶನಿವಾರ ಶ್ರೀಕೃಷ್ಣ ಮಠದಲ್ಲಿ ದೀಪಾವಳಿಯ ಪ್ರಯುಕ್ತ ತೈಲಾಭ್ಯಂಗ ಹಾಗೂ ಎಣ್ಣೆಶಾಸ್ತ್ರ ನಡೆಯಿತು. ಚಂದ್ರಶಾಲೆಯಲ್ಲಿ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರಿಗೆ ಮಠದ ದಿವಾನರಾದ ಲಕ್ಷ್ಮೀನಾರಾಯಣ ಮುಚ್ಚಿಂತಾಯರು ಎಣ್ಣೆಶಾಸ್ತ್ರ ಮಾಡಿದರು.

 ಉಡುಪಿಯ ಕೃಷ್ಣ ಮಠದ ದರ್ಶನ ಅವಧಿ ವಿಸ್ತರಣೆ ಉಡುಪಿಯ ಕೃಷ್ಣ ಮಠದ ದರ್ಶನ ಅವಧಿ ವಿಸ್ತರಣೆ

ನಂತರ ಕೃಷ್ಣಾಪುರ ಮಠಾಧೀಶರು ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರಿಗೆ, ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರಿಗೆ, ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರಿಗೆ, ಪಲಿಮಾರು ಕಿರಿಯ ಶ್ರೀವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರಿಗೆ ಎಣ್ಣೆಶಾಸ್ತ್ರ ಮಾಡಿದರು. ಪರ್ಯಾಯ ಮಠದ ದಿವಾನರು ಶ್ರೀಪಾದರುಗಳಿಗೆ ಮಾಲಿಕೆ ಮಂಗಳಾರತಿ ಮಾಡುವುದರೊಂದಿಗೆ ಹೊಸವಸ್ತ್ರ ಸಮರ್ಪಿಸಿದರು.

ಸಂಜೆ ಹೊತ್ತು ಮಠದ ಗೋಪುರದ ಎದುರಿಗೆ ದೀಪಾವಳಿಯ ಅಮಾವಾಸ್ಯೆ ಪ್ರಯುಕ್ತ ಅದಮಾರು ಹಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹಾಗೂ ಪರ್ಯಾಯ ಮಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಮಠದ ಪುರೋಹಿತರಾದ ಮುದರಂಗಡಿ ಲಕ್ಷ್ಮೀಶ ಆಚಾರ್ಯರು "ಬಲೀಂದ್ರ ಪೂಜೆ'ಯನ್ನು ನಡೆಸಿದರು.

English summary
In the Udupi Sri Krishna Math, was celebrated Jala Poorana ganga puja in the wake off Deepavali Festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X