ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ವೈರಸ್ ನಿಯಂತ್ರಣಕ್ಕೆ ಜನಜಾಗೃತಿಯೊಂದೇ ಉಳಿದಿರುವ ದಾರಿ: ಕೋಟ ಶ್ರೀನಿವಾಸ್ ಪೂಜಾರಿ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜುಲೈ 18: "ಎಷ್ಟೇ ನಿಯಂತ್ರಿಸಿದರೂ ಕೊರೊನಾ ಸೋಂಕು ದಿನದಿಂದ ದಿನಕ್ಕೆ ವ್ಯಾಪಿಸುತ್ತಲೇ ಇದೆ. ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಕಡ್ಡಾಯವಾಗಿ ಮಾಸ್ಕ್ ಹಾಕುವ ಮೂಲಕ ಕೊರೊನಾ ನಿಯಂತ್ರಣ ಸಾಧ್ಯ. ಹೀಗಾಗಿ ಜನಜಾಗೃತಿ ಮೂಲಕ ಕೊರೊನಾ ನಿಯಂತ್ರಿಸುವುದಷ್ಟೇ ಈಗ ಉಳಿದಿರುವ ದಾರಿ" ಎಂದು ಮುಜರಾಯಿ, ಮೀನುಗಾರಿಕೆ ಮತ್ತು ಬಂದರು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

Recommended Video

ಮಗುವಿನ ಫೋಟೋ ಹಿಡಿದು CM ಮನೆ ಮುಂದೆ ಧರಣಿ ಕುಳಿತ ತಂದೆ | Oneindia Kannada

ಉಡುಪಿಯಲ್ಲಿ ಇಂದು ಮಾಧ್ಯಮದ ಜೊತೆ ಮಾತನಾಡಿದ ಅವರು, "ಕೊರೊನಾ ನಿಯಂತ್ರಣಕ್ಕೆ ಬೇಕಾದ ಎಲ್ಲಾ ರೀತಿಯ ಕೆಲಸಗಳನ್ನು ಸರ್ಕಾರ ಮಾಡುತ್ತಿದೆ‌. ನಿನ್ನೆ ನಾನು ಡಿಸಿಎಂ ಮತ್ತು ಸಿಎಂ ಅವರನ್ನು‌ ಭೇಟಿಯಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮುಂದಿನ ಎರಡು ತಿಂಗಳ ಕಾಲ ಕೊರೊನಾವನ್ನು ಹೇಗೆ ನಿಯಂತ್ರಿಸಬೇಕು ಎಂಬ ಕುರಿತಾಗಿ ಅಧಿಕಾರಿಗಳ ಜೊತೆ ಸೇರಿ ಚರ್ಚೆ ಮಾಡಿದ್ದೇವೆ" ಎಂದು ತಿಳಿಸಿದರು.

ಕೊರೊನಾಕ್ಕೆ ಕಂಗೆಟ್ಟ ದೇವರುಗಳು: ಆನ್‌ಲೈನ್‌ನಲ್ಲೇ ದರ್ಶನ ನೀಡಲು ತಯಾರಿ!ಕೊರೊನಾಕ್ಕೆ ಕಂಗೆಟ್ಟ ದೇವರುಗಳು: ಆನ್‌ಲೈನ್‌ನಲ್ಲೇ ದರ್ಶನ ನೀಡಲು ತಯಾರಿ!

Awareness Is The Only Choice To Controll Coronavirus Said Kota Srinivasa Pujari

"ಎಲ್ಲಾ ಖಾಸಗಿ, ಸರ್ಕಾರಿ ಆಸ್ಪತ್ರೆಗಳನ್ನು ಸುಸಜ್ಜಿತವಾಗಿ ಇಡಲಾಗಿದೆ. ಕೊರೊನಾ ಸೋಂಕನ್ನು ಜನಜಾಗೃತಿ ಮೂಲಕ ನಿಯಂತ್ರಣಕ್ಕೆ ತರುತ್ತೇವೆ ಎಂಬ ವಿಶ್ವಾಸ ಸರ್ಕಾರಕ್ಕಿದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗೆ ಬೇಕಾದ ಐಸಿಯು, ಆಂಬುಲೆನ್ಸ್‌ಗಳನ್ನು ಮಂಜೂರು ಮಾಡಲು ಕೇಳಿಕೊಂಡಿದ್ದೇನೆ. ಜಿಲ್ಲಾಧಿಕಾರಿಗಳಿಗೆ ಬೇಕಾದಷ್ಟು ಸಾಮಗ್ರಿಗಳನ್ನು ನೀಡಲು ಸರ್ಕಾರ ಸಿದ್ಧವಿದೆ" ಎಂದರು.

English summary
Coronavirus cases increasing in state. Controlling it through bringing awareness among people is only choice left said kota srinivasa pujari,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X