ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸತಲೆಮಾರಿನ ಸಣ್ಣ ಕಥೆಗಾರ ಪುರಸ್ಕಾರ -2017

By Prasad
|
Google Oneindia Kannada News

ಉಡುಪಿ, ನವೆಂಬರ್ 11 : ಕನ್ನಡದ ಯುವ ಬರಹಗಾರರನ್ನು ಉತ್ತೇಜಿಸುವ ಉದ್ದೇಶದಿಂದ 'ಹೊಸ ತಲೆಮಾರಿನ ಪ್ರತಿಭಾವಂತ ಸಣ್ಣಕಥೆಗಾರ' ಪುರಸ್ಕಾರಕ್ಕೆ ಸ್ವತಂತ್ರವಾಗಿ ಬರೆದಿರುವ ಕಥೆಗಳ ಸಂಕಲನವನ್ನು ಆಹ್ವಾನಿಸಲಾಗಿದೆ.

ಪ್ರೊ. ಉಪೇಂದ್ರ ಸೋಮಯಾಜಿಯವರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತಿರುವ "ಲೇಖಕರ ಹಿತರಕ್ಷಣಾ ವೇದಿಕೆ (ರಿ), ಚಿತ್ರಪಾಡಿ, ಸಾಲಿಗ್ರಾಮ (ಉಡುಪಿ ಜಿಲ್ಲೆ)" ಪ್ರತಿವರ್ಷವೂ ಆಯ್ದ ತರುಣ ಕಥೆಗಾರರಿಗೆ ಈ ಪುರಸ್ಕಾರವನ್ನು ನೀಡಿ ಗೌರವಿಸುತ್ತಿದೆ.

ಡಿಸೆಂಬರ್ ಕೊನೆಯ ವಾರದಲ್ಲಿ ನೀಡಲಾಗುವ ಈ ಪುರಸ್ಕಾರವು ಸಾರ್ವಜನಿಕ ಸನ್ಮಾನ, ಆಕರ್ಷಕ ಪ್ರಶಸ್ತಿ ಪತ್ರ/ಸ್ಮರಣಿಕೆ ಮತ್ತು ಆರು ಸಾವಿರ ರೂ. ನಗದು ಬಹುಮಾನವನ್ನು ಒಳಗೊಂಡಿರುತ್ತದೆ. ಈ ಸಾಲಿನ (2017) "ಹೊಸ ತಲೆಮಾರಿನ ಪ್ರತಿಭಾವಂತ ಸಣ್ಣಕಥೆಗಾರ" ಪುರಸ್ಕಾರಕ್ಕಾಗಿ ಆಯ್ಕೆ ಪ್ರಕ್ರಿಯೆ ಈಗ ಆರಂಭವಾಗಿದೆ.

Award for young and creative Kannada short story writers

ಈ ಕಥಾಸ್ಪರ್ಧೆಗೆ ನಿಯಮ, ನಿಬಂಧನೆಗಳು ಕೆಳಗಿನಂತಿವೆ

1. 2016 ಜನವರಿ ಒಂದರಿಂದ 2017 ಡಿಸೆಂಬರ್ ತನಕದ (ಎರಡು ವರ್ಷಗಳ) ಅವಧಿಯಲ್ಲಿ ಮೊದಲ ಮುದ್ರಣ ಕಂಡ (ಸ್ವತಂತ್ರ/ಅನುವಾದಿತವಲ್ಲ) ಕಥಾ ಸಂಕಲನಗಳನ್ನು ಪುರಸ್ಕಾರಕ್ಕೆ ಪರಿಗಣಿಸಲಾಗುತ್ತದೆ.

2. ಕಥೆಗಾರರ ವಯಸ್ಸು 35 ವರ್ಷ ಮೀರಿರಬಾರದು. (01.01.1982ರ ನಂತರ ಜನಿಸಿದವರಷ್ಟೇ ಈ ವರ್ಷದ ಸ್ಪರ್ಧೆಯಲ್ಲಿ ಭಾಗವಹಿಸಬಹುದು.)

3. ಈಗಾಗಲೇ ತಮ್ಮ ಸಾಹಿತ್ಯ ಕೃತಿಗಳಿಗೆ ರಾಜ್ಯಮಟ್ಟದ ಪುರಸ್ಕಾರ ಗಳಿಸಿದವರನ್ನು ಈ ಪುರಸ್ಕಾರಕ್ಕೆ ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.

4. ಸ್ಪರ್ಧೆಯಲ್ಲಿ ಭಾಗವಹಿಸುವ ಲೇಖಕರು ನಾಲ್ಕಕ್ಕಿಂತ ಹೆಚ್ಚು (ಮುದ್ರಿತ) ಸಾಹಿತ್ಯಕೃತಿಗಳನ್ನು ಪ್ರಕಟಿಸಿರಬಾರದು.

ಈ ಪುರಸ್ಕಾರವು ಹೊಸತಲೆಮಾರಿನ, ತರುಣ ಲೇಖಕರಿಗೇ ಮೀಸಲಿಡಬೇಕೆಂಬ ಉದ್ದೇಶದಿಂದ ಈ ನಿಯಮಗಳನ್ನು ರೂಪಿಸಲಾಗಿದೆ. ಅರ್ಹ ಸಣ್ಣ ಕಥೆಗಾರರು ತಮ್ಮ ಕಥಾಸಂಕಲನದ ಎರಡು ಪ್ರತಿಗಳನ್ನು ಡಿಸೆಂಬರ್ ಮೊದಲ ವಾರಕ್ಕೆ (07.12.2017 ಕ್ಕೆ) ಮುನ್ನ, ಕೆಳಕಾಣಿಸಿದ ವಿಳಾಸಕ್ಕೆ ಕಳುಹಿಸಬಹುದು.

ಬೆಳಗೋಡು ರಮೇಶ ಭಟ್
5-109 A/1; "ಭಾಗೀರಥಿ"
ಇಂದ್ರಾಳಿ ದೇವಸ್ಥಾನದ ರಸ್ತೆ
ಅಂಚೆ: ಕುಂಜಿಬೆಟ್ಟು
ಉಡುಪಿ - 576 102

English summary
Lekhaka Hitarakshana Vedike, Chitrapadi, Saligrama (Udupi) has invited Kannada short story collection from the young and creative writers of Karnataka. The talented writers can send their short stories collection to the address mentioned in the article before 7th December, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X