• search
 • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಡುಪಿಯಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆ: ಸಾಕ್ಷಿ ಸಮೇತ ಅನಾವರಣಗೊಂಡ ದೈವ ಸಾನಿಧ್ಯ

|
Google Oneindia Kannada News

ಜಿಲ್ಲೆಯ ಕಾರ್ಕಳ ತಾಲೂಕಿನ ಅತ್ತೂರು ಗ್ರಾಮದ ಪರ್ಪೆಲೆಗಿರಿಯಲ್ಲಿ ಕಳೆದ ತಿಂಗಳ 26ರಿಂದ ಮೂರು ದಿನಗಳ ಕಾಲ ಸ್ವರ್ಣಾರೂಢ ಅಷ್ಟಮಂಗಲ ಪ್ರಶ್ನಾ ಚಿಂತನೆ ಧಾರ್ಮಿಕ ಕಾರ್ಯಕ್ರಮ ನಡೆದಿದೆ.

ಕೇರಳದ ಪಯ್ಯನೂರಿನ ದೈವಜ್ಞ ನಾರಾಯಣ ಪೊದುವಾಳ್ ನಡೆಸಿಕೊಟ್ಟ ಈ ಪ್ರಶ್ನಾ ಚಿಂತನೆಯ ನೇತೃತ್ವವನ್ನು ಹಿರಿಯ ಧಾರ್ಮಿಕ ಚಿಂತಕ ಹಿರಣ್ಯ ವೆಂಕಟೇಶ್ ಭಟ್ ವಹಿಸಿದ್ದರು. ಕಾರ್ಕಳದ ಹಿಂದೂ ಜಾಗರಣ ವೇದಿಕೆ ಮತ್ತು ಕೃಷ್ಣಗಿರಿ ಕಲ್ಕುಡ (ಕಲ್ಕುರ್ಟಿ) ದೈವಸ್ಥಾನ ಟ್ರಸ್ಟ್ ಈ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಿತ್ತು. ಹಲವು ಧಾರ್ಮಿಕ ಮತ್ತು ರಾಜಕೀಯ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

"ಸಂಕ್ರಾಂತಿಯ ನಂತರ ವಿಹಿಂಪ ಕಾರ್ಯಕರ್ತರಿಂದ ರಾಮ ಮಂದಿರಕ್ಕೆ ನಿಧಿ ಸಂಗ್ರಹ''

ಕಾರ್ಕಳ ತಾಲೂಕಿನ ಅನೇಕ ಹಿಂದೂ ಧಾರ್ಮಿಕ ಕೇಂದ್ರಗಳನ್ನು ಜೀರ್ಣೋದ್ದಾರ ಮಾಡಲು ಮುಂದಾದಾಗ ಪರ್ಪೆಲೆಗಿರಿಯಲ್ಲಿರುವ ದೈವಸ್ಥಾನವನ್ನು ಮೊದಲು ಪುನರುಥ್ಥಾನಗೊಳಿಸುವಂತೆ,ಅಷ್ಠಮಂಗಲ ಪ್ರಶ್ನೆಯ ವೇಳೆ, ಪೊದುವಾಳ್ ಅವರು ಸೂಚಿಸಿದ್ದಾರೆ.

ಅಷ್ಠಮಂಗಲಕ್ಕೆ ಹಾಕುವ ಮಂಡಲ, ಹೂವು, ಗಂಧ ಮತ್ತು ಪುಷ್ಪವನ್ನು ಒಂದು ತಟ್ಟೆಯಲ್ಲಿಟ್ಟು, ಅದರಲ್ಲಿ ಸಣ್ಣ ಚಿನ್ನವನ್ನು ಇಟ್ಟು, ಆ ತಟ್ಟೆಯನ್ನು ಬಾಲಕಿಯೊಬ್ಬಳ ಕೈಯಲ್ಲಿ ಕೊಟ್ಟು, ಮಂಡಲಕ್ಕೆ, ಬಾಲಕಿ ಮೂರು ಪ್ರದಕ್ಷಿಣಿ ಹಾಕುವ ಮೂಲಕ ಈ ಪ್ರಶ್ನಾ ಚಿಂತನೆ ಆರಂಭವಾಯಿತು. ಸಾಕ್ಷಿ ಸಮೇತ ಸಿಕ್ಕ ದೈವ ಸಾನಿಧ್ಯ, ಮುಂದೆ ಓದಿ...

ಕೃಷ್ಣಮಠದಲ್ಲಿ ಮತ್ತೆ ಕನ್ನಡ ನಾಮಫಲಕ ಅಳವಡಿಕೆ: ಭಕ್ತರಲ್ಲಿ ಹರ್ಷಕೃಷ್ಣಮಠದಲ್ಲಿ ಮತ್ತೆ ಕನ್ನಡ ನಾಮಫಲಕ ಅಳವಡಿಕೆ: ಭಕ್ತರಲ್ಲಿ ಹರ್ಷ

ಹನ್ನೆರಡು ರಾಶಿಯ ಮಂಡಲದಲ್ಲಿ ಆ ತಟ್ಟೆಯನ್ನು ಇಡಲು ಬಾಲಕಿ ಇಡುತ್ತಾಳೆ

ಹನ್ನೆರಡು ರಾಶಿಯ ಮಂಡಲದಲ್ಲಿ ಆ ತಟ್ಟೆಯನ್ನು ಇಡಲು ಬಾಲಕಿ ಇಡುತ್ತಾಳೆ

ಆನಂತರ, ಹನ್ನೆರಡು ರಾಶಿಯ ಮಂಡಲದಲ್ಲಿ ಆ ತಟ್ಟೆಯನ್ನು ಬಾಲಕಿ ಇಡುತ್ತಾಳೆ. ಬಾಲಕಿ ತನ್ನ ಇಚ್ಚೆಗೆ ಅನುಗುಣವಾಗಿ ಯಾವ ರಾಶಿಯ ಮಂಡಲದಲ್ಲಿ ಸ್ವರ್ಣವಿರುವ ತಟ್ಟೆಯನ್ನು ಇಡುತ್ತಾಳೋ (ಕನ್ಯಾ ರಾಶಿ) ಮತ್ತು ಅಷ್ಟಮಂಗಲ ಕವಡೆಯಲ್ಲಿ ಯಾವ ಸಂಖ್ಯೆ ಬರುತ್ತದೋ ಅದನ್ನು ಆಧರಿಸಿ ಈ ಪ್ರಶ್ನಾ ಚಿಂತನವನ್ನು ನಡೆಸಲಾಯಿತು.

ಸ್ತ್ರೀ ಚೈತನ್ಯಗಿಂತ ಪುರುಷ ಚೈತನ್ಯ ಪ್ರದಾನವಾದದ್ದು

ಸ್ತ್ರೀ ಚೈತನ್ಯಗಿಂತ ಪುರುಷ ಚೈತನ್ಯ ಪ್ರದಾನವಾದದ್ದು

ಕ್ಷೇತ್ರದಲ್ಲಿ ಸ್ತ್ರೀ ಚೈತನ್ಯಗಿಂತ ಪುರುಷ ಚೈತನ್ಯ ಪ್ರದಾನವಾದದ್ದು. ದೈವಗಳ ಸಂಬಂಧದಲ್ಲಿ ಕಲ್ಕುಡ, ದೇವರ ಸಂಬಂಧದಲ್ಲಿ ಈಶ್ವರನ ಫಲದಾನ ಈ ಭೂಮಿಯಲ್ಲಿ ಹೆಚ್ಚು ಎಂದು ಪೊದುವಾಳ್ ಅವರು ಹೇಳಿದ್ದಾರೆ. ದೈವಕ್ಕೆ ಹಲವು ಕಡೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಕೆಯಾಗಿ, ಮೂಲಸ್ಥಾನದಲ್ಲಿ ಸರಿಯಾಗಿ ಪೂಜೆಯಾಗದಿದ್ದರೆ, ಇಡೀ ಸೀಮೆಗೇ ಆಪತ್ತು ಎಂದು ಪ್ರಶ್ನೆಯಲ್ಲಿ ಉತ್ತರ ಬಂದಿದೆ.

ಹಿಂದೆ ಈ ಸೀಮೆಯಲ್ಲಿದ್ದವರೂ ಭಾಗವಹಿಸಬೇಕು

ಹಿಂದೆ ಈ ಸೀಮೆಯಲ್ಲಿದ್ದವರೂ ಭಾಗವಹಿಸಬೇಕು

ಹಾಗಾಗಿ, ಇದನ್ನು ಸರಿಪಡಿಸುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ಸೀಮೆಯಲ್ಲಿ ದೈವಕ್ಕೆ ಸರಿಯಾದ ಪೂಜೆ ಸಲ್ಲಿಕೆಯಾಗದೇ ಇರುವುದರಿಂದ, ಸುಖ, ನಿದ್ದೆಯಿಲ್ಲದೇ ಇರುವುದು, ಆರೋಗ್ಯ ಸಮಸ್ಯೆ, ಪರಿಸರಕ್ಕೆ ಸಂಬಂಧಿಸಿದಂತೆ ತೊಂದರೆ ಇದೆ. ಪ್ರಾಕಾರ, ಗೋಪುರ, ಪ್ರತಿಷ್ಥೆ, ಕುಂಭಾಬಿಷೇಕ ನಡೆಯಬೇಕು. ಈ ಎಲ್ಲಾ ಕೆಲಸಗಳಲ್ಲಿ ಹಿಂದೆ ಈ ಸೀಮೆಯಲ್ಲಿದ್ದವರೂ ಭಾಗವಹಿಸಬೇಕು ಎಂದು ಪೊದುವಾಳ್ ಹೇಳಿದ್ದಾರೆ.

ದೈವಗಳ ಸಾನಿದ್ಯವಿದೆ ಈ ಸೀಮೆಯಲ್ಲಿದೆ

ದೈವಗಳ ಸಾನಿದ್ಯವಿದೆ ಈ ಸೀಮೆಯಲ್ಲಿದೆ

ದೈವಗಳ ಸಾನಿದ್ಯ ಈ ಸೀಮೆಯಲ್ಲಿದೆ ಎಂದು ಪೂರ್ವಿಕರು ಹೇಳುತ್ತಾ ಬರುತ್ತಿದ್ದರು. ಈ ಸಂಗತಿ ಅಷ್ಟಮಂಗಲ ಪ್ರಶ್ನೆಯ ವೇಳೆಯೂ ಬಂದಿದೆ. ಜೊತೆಗೆ, ಈ ಭಾಗದಲ್ಲಿರುವ ಗುಹೆಗಳ ವಿಷಯಗಳೂ ಕುತೂಹಲವನ್ನು ಹುಟ್ಟುಹಾಕಿದೆ. ಈ ಗುಹೆಯಲ್ಲಿ ಖುಷಿಮುನಿಗಳು ತಪಸ್ಸನ್ನು ಆಚರಿಸುತ್ತಿದ್ದರು ಎನ್ನುವ ವಿಷಯ ಪ್ರಶ್ನೆಯ ವೇಳೆ ಬಂದಿದೆ.

  ಎತ್ತರದ ಶಿಖರ Mt Everest , ಪುನಃ ಅಳತೆ ಮಾಡ್ಬೇಕಂತೆ | Oneindia Kannada
  ಅಜ್ಞಾತ ಶಕ್ತಿ ಈ ಗುಹೆಯೊಳಗೆ ಇದೆ ಎನ್ನುವ ವಿಚಾರ

  ಅಜ್ಞಾತ ಶಕ್ತಿ ಈ ಗುಹೆಯೊಳಗೆ ಇದೆ ಎನ್ನುವ ವಿಚಾರ

  ಗುಹೆಯೊಳಗೆ ಎರಡು ಬಾವಿ ಇರುವುದು, ಒಂದು ಬಾವಿಯಲ್ಲಿ ಶಿವನ ಲಿಂಗ, ಬೆಲೆಬಾಳುವ ವಸ್ತುಗಳು ಇವೆ, ಜೊತೆಗೆ ಕಾಳಿಂಗ ಸರ್ಪವಿದೆ ಎನ್ನುವ ವಿಚಾರವೂ ಪ್ರಶ್ನೆಯ ವೇಳೆ ಹೊರಗೆ ಬಂದಿದೆ. ನೀರು ಬತ್ತದ ಬಾವಿ ಇದಾಗಿದ್ದು, ಇದರ ನೀರನ್ನು ಕುಡಿದರೆ ಚರ್ಮರೋಗಕ್ಕೆ ಪರಿಹಾರವಿದೆ. ಅಜ್ಞಾತ ಶಕ್ತಿ ಈ ಗುಹೆಯೊಳಗೆ ಇದೆ ಎನ್ನುವ ವಿಚಾರವೂ ಪ್ರಶ್ನೆಯ ವೇಳೆ ಹೊರಗೆ ಬಂದಿದೆ.

  English summary
  Ashtamangala Prashne At Parpelegiri Atuur Village Karkala Tq Of Udupi District,
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X