ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಧ್ಯರಾತ್ರಿ ಆಟೋ ಓಡಿಸಿಕೊಂಡು ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಿದ ಆಶಾ ಕಾರ್ಯಕರ್ತೆ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜುಲೈ 24: ಉಡುಪಿಯಲ್ಲಿ ಆಶಾ ಕಾರ್ಯಕರ್ತೆಯೊಬ್ಬರು ತಡರಾತ್ರಿ ರಿಕ್ಷಾ ಚಲಾಯಿಸಿಕೊಂಡು ಹೋಗಿ ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಿ, ಕರ್ತವ್ಯಪ್ರಜ್ಞೆ ಮೆರೆದಿದ್ದಾರೆ.

Recommended Video

The Indian Premier League (IPL) 2020 is all set to kick-off | Oneindia Kannada

ಉಡುಪಿ ತಾಲೂಕಿನ ಪೆರ್ಣಂಕಿಲದ ರಾಜೀವಿ ಆಶಾಕಾರ್ತೆಯಾಗಿದ್ದಾರೆ. ಇವರು ಆಟೋ ಓಡಿಸುವುದನ್ನೂ ಕಲಿತಿದ್ದಾರೆ. ನಿನ್ನೆ ಅವರ ಗ್ರಾಮದ ಗರ್ಭಿಣಿಯೊಬ್ಬರಿಗೆ ಬೆಳಿಗ್ಗೆ 3 ಗಂಟೆ ವೇಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ವಿಷಯ ತಿಳಿದು ಆಗಲೇ ರಿಕ್ಷಾ ಚಲಾಯಿಸಿಕೊಂಡು 20 ಕಿ.ಮೀ ದೂರದ ಉಡುಪಿಯ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಂದು ಗರ್ಭಿಣಿ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಹೊನ್ನಾವರದ 108 ಸಿಬ್ಬಂದಿ ಸಮಯ ಪ್ರಜ್ಞೆ; ಉಳಿಯಿತು ತಾಯಿ ಮಗು ಜೀವಹೊನ್ನಾವರದ 108 ಸಿಬ್ಬಂದಿ ಸಮಯ ಪ್ರಜ್ಞೆ; ಉಳಿಯಿತು ತಾಯಿ ಮಗು ಜೀವ

ಕಳೆದ ಇಪ್ಪತ್ತು ವರ್ಷಗಳಿಂದ ರಾಜೀವಿ ಅವರು ರಿಕ್ಷಾ ಓಡಿಸುತ್ತಿದ್ದಾರೆ. ಬೆಳಗ್ಗೆಯಿಂದ ಸಂಜೆಯವರೆಗೆ ಆಶಾ ಕಾರ್ಯಕರ್ತೆಯಾಗಿ ಸೇವೆ‌ ಸಲ್ಲಿಸಿ, ಸಂಜೆ ನಂತರ ರಾತ್ರಿ 9 ಗಂಟೆಯವರೆಗೆ ರಿಕ್ಷಾ ಚಾಲನೆ ಮಾಡುತ್ತಾರೆ. ಪೆರ್ಣಂಕಿಲ ಸುತ್ತಮುತ್ತಲ ಮಹಿಳೆಯರು, ಯುವತಿಯರು ರಾತ್ರಿ ಸಮಯ ಕೆಲಸ ಮುಗಿಸಿ ಬರುವಾಗ ರಾಜೀವಿಯವರು ಇವರನ್ನು ಸುರಕ್ಷಿತವಾಗಿ ಮನೆ ತಲುಪಿಸುತ್ತಾರೆ.

Asha Worker Helped Pregnant By Riding Auto At Midnight In Udupi

ಗರ್ಭಿಣಿಯನ್ನು ತಡರಾತ್ರಿ ಸುರಕ್ಷಿತವಾಗಿ ಆಸ್ಪತ್ರೆಗೆ ತಲುಪಿಸಿದ ಇವರ ಕಾರ್ಯ ಸಾಕಷ್ಟು ಪ್ರಶಂಸೆಗೆ ಕಾರಣವಾಗಿದೆ.

English summary
Asha worker helped a pregnant by admitting her to hospital late night by riding auto in udupi,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X