ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರೋಗ್ಯ ಸೇತು app ಗೊಂದಲ; ಉಡುಪಿಯಲ್ಲಿ ಪಾಸಿಟಿವ್ ವದಂತಿ!

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮೇ 02: ಆರೋಗ್ಯ ಸೇತು app ತಂದ ಗೊಂದಲದಿಂದಾಗಿ, ಬೈಂದೂರು ತಾಲೂಕಿನಲ್ಲಿ ಕೊರೊನಾ ಪಾಸಿಟಿವ್ ವದಂತಿ ಹಬ್ಬಿ ಕೆಲಕಾಲ ಆತಂಕಕ್ಕೆ ಕಾರಣವಾಯಿತು.

Recommended Video

ವಿಶೇಷ ಪತ್ರಿಕಾ ಗೋಷ್ಠಿಯಲ್ಲಿ ಕಾಂಗ್ರೆಸ್‌ನ ನಾಯಕರ ಜೊತೆ ಡಿಕೆಶಿ ಹೇಳಿದ್ದೇನು | DKS | Press Meet

ವಿಷಯ ಏನಪ್ಪಾ ಅಂದ್ರೆ, ಬೆಳಗಾವಿಯಿಂದ ಬಂದಿದ್ದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು app ನಲ್ಲಿ ತಪ್ಪಾಗಿ ತೋರಿಸಿದೆ. ಈತ ಬೆಳಗಾವಿಯಲ್ಲಿ ಗಂಟಲ ದ್ರವ ಪರೀಕ್ಷೆ ನಡೆಸಿ ಇಲ್ಲಿಗೆ ಬಂದಿದ್ದ. ಆರೋಗ್ಯ ಸೇತು appನಲ್ಲಿ ಈ ವ್ಯಕ್ತಿಯ ವರದಿ ಪಾಸಿಟಿವ್ ಎಂದು ಅಪ್ ಲೋಡ್ ಆಗಿದೆ.

Arogya Setu App Created Confusion In Udupi District

ಪಾಸಿಟಿವ್ ಬಂದ ವ್ಯಕ್ತಿ ಬೈಂದೂರಿನಲ್ಲಿದ್ದಾನೆ ಎಂದು app ತೋರಿಸುತ್ತಿತ್ತು. ಇದರಿಂದ ಕೆಲಕಾಲ ಉಡುಪಿ ಜಿಲ್ಲೆಯಲ್ಲಿ ಆತಂಕ ಉಂಟಾಗಿತ್ತು.

ಆರೋಗ್ಯ ಸೇತುವಿನಲ್ಲಿ ಬಳಕೆದಾರರ ಗೌಪ್ಯತೆ ಎಷ್ಟು ಸುರಕ್ಷಿತ?ಆರೋಗ್ಯ ಸೇತುವಿನಲ್ಲಿ ಬಳಕೆದಾರರ ಗೌಪ್ಯತೆ ಎಷ್ಟು ಸುರಕ್ಷಿತ?

ಆದರೆ ಬೆಳಗಾವಿ ಆರೋಗ್ಯ ಇಲಾಖೆಯಲ್ಲಿ ವಿಚಾರಿಸಿದ ನಂತರ ನಿರಾಳವಾಯ್ತು. ಈ ವ್ಯಕ್ತಿಯ ಗಂಟಲ ದ್ರವ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ ಎಂಬುದು ಖಾತ್ರಿಯಾಯಿತು. ಆದರೆ ಮುನ್ನೆಚ್ಚರಿಕೆಯ ಕ್ರಮವಾಗಿ ಈ ವ್ಯಕ್ತಿಗೆ ಉಡುಪಿಯಲ್ಲಿ ಮತ್ತೊಮ್ಮೆ ಪರೀಕ್ಷೆ ಮಾಡಲಾಯಿತು. ಇಷ್ಟು ಹೊತ್ತಿಗೆ ಉಡುಪಿ ಜಿಲ್ಲೆಯಾದ್ಯಂತ ವದಂತಿಗಳು ಹರಡಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.

English summary
Arogya setu app created some confusion and there was a rumour of coronapositive case in udupi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X