• search
 • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಹರ್ಜಿಂದರ್ ಸಿಂಗ್ ಉಡುಪಿ ಜಿಲ್ಲೆಯ ಅಳಿಯ!

|
Google Oneindia Kannada News

ಉಡುಪಿ, ಡಿಸೆಂಬರ್ 9: ಭಾರತೀಯ ವಾಯುಪಡೆಯ ಎಂಐ-17ವಿ5 ಹೆಲಿಕಾಪ್ಟರ್ ಬುಧವಾರ ತಮಿಳುನಾಡಿನ ಕೂನೂರ್ ಬಳಿ ಪತನಗೊಂಡಿದ್ದು, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಮತ್ತು 11 ಸಶಸ್ತ್ರ ಪಡೆ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಸೇನಾ ಹೆಲಿಕಾಪ್ಟರ್ ದುರಂತಕ್ಕೆ ದೇಶಕ್ಕೆ ದೇಶವೇ ಮರುಗುತ್ತಿದ್ದು, ಈ ದುರ್ಘಟನೆಯಲ್ಲಿ ಉಡುಪಿ ಜಿಲ್ಲೆಯ ಅಳಿಯ ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್ ಸಹ ಹುತಾತ್ಮರಾಗಿದ್ದು, ಈಗ ಕಾರ್ಕಳದಲ್ಲಿ ನೀರವ ಮೌನ ಆವರಿಸಿದೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸಾಲ್ಮರ ಗ್ರಾಮದ ನಿವಾಸಿಗಳಾದ ದಿವಂಗತ ಫೆಲಿಕ್ಸ್ ಮಿನೇಜಸ್ ಮತ್ತು ಮೇರಿ ಮಿನೇಜಸ್ ದಂಪತಿಯ ಮಗಳು ಆಗ್ನೇಸ್ ಪ್ರಫುಲ್ಲ ಮಿನೇಜಸ್‌ರನ್ನು ವಿವಾಹವಾಗಿದ್ದರು.

ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್‌ರವರು ಸಿಡಿಎಸ್ ಬಿಪಿನ್ ರಾವತ್‌ರವರ ಆಪ್ತ ಕಾರ್ಯದರ್ಶಿಯಾಗಿದ್ದರು. ಹರ್ಜಿಂದರ್ ಸಿಂಗ್‌ಗೂ ಕರ್ನಾಟಕಕ್ಕೂ ಅವಿನಾಭವ ಸಂಬಂಧವಿತ್ತು. ಹರ್ಜಿಂದರ್ ಸಿಂಗ್ ಸುಮಾರು 10 ವರ್ಷಗಳ ಹಿಂದೆ ಸೇನೆಯಲ್ಲಿರುವ ಕಾರ್ಕಳದ ಪ್ರಫುಲ್ಲರನ್ನು ಪ್ರೀತಿಸಿ ಮದುವೆ ಆಗಿದ್ದರು. ಆಗಾಗ ಕಾರ್ಕಳಕ್ಕೆ ಬರುತ್ತಿದ್ದ ಕರ್ನಲ್ ದಂಪತಿಯನ್ನು ನೆನೆದು ಕಾರ್ಕಳ ತಾಲ್ಲೂಕಿನ ಸಾಲ್ಮರದ ಮಿನೇಜಸ್ ಕುಟುಂಬ ಕಣ್ಣೀರಿಡುತ್ತಿದೆ.

ಪ್ರಫುಲ್ಲ ಅವರು ಮೊದಲು ಸೇನೆಯಲ್ಲೆ ಕಾರ್ಯನಿರ್ವಸುತ್ತಿದ್ದರು. ಅಲ್ಲಿ ಹರ್ಜಿಂದರ್ ಸಿಂಗ್‌ರನ್ನು ಪ್ರೀತಿಸಿ ಮದುವೆ ಆಗಿದ್ದರು. ಇತ್ತೀಚೆಗೆ ಸ್ವಯಂ ನಿವೃತ್ತಿಯನ್ನು ಪಡೆದು ಸೇನಾ ಶಾಲೆಯಲ್ಲೇ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ನಾಲ್ಕು ವರ್ಷದ ಹಿಂದೆ ಪ್ರಫುಲ್ಲಾ ದಂಪತಿ ಕಾರ್ಕಳಕ್ಕೆ ಬಂದಿದ್ದರು. ತುಂಬಾ ಕಾಲ ಇಲ್ಲಿಯೇ ಇದ್ದರು. ತಂದೆ- ತಾಯಿ, ಅಕ್ಕಂದಿರ ಜೊತೆ ಚೆನ್ನಾಗಿ ಸಮಯ ಕಳೆದಿದ್ದರು.

ಹರ್ಜಿಂದರ್ ಸಿಂಗ್ ಮೃದು ವ್ಯಕ್ತಿಯಾಗಿದ್ದರು. ಎಲ್ಲರೊಂದಿಗೂ ಚೆನ್ನಾಗಿ ಬೆರೆಯುತ್ತಿದ್ದರು. ಉತ್ತರ ಭಾರತ, ದಕ್ಷಿಣ ಭಾರತದ ಜೊತೆ ಒಡನಾಟವಿತ್ತು. ಕುಟುಂಬಸ್ಥರಿಗೆ ಹರ್ಜಿಂದರ್ ಸಿಂಗ್ ಇನ್ನಿಲ್ಲ ಎಂಬ ಸುದ್ದಿ ಬುಧವಾರ ಮಧ್ಯಾಹ್ನದ ನಂತರ ಮಾಧ್ಯಮ ಹಾಗೂ ಸೇನೆಯಿಂದ ತಿಳಿದು ಬಂದಿದ್ದು, ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.

ಹರ್ಜಿಂದರ್ ಸಿಂಗ್‌ರವರ ಪಾರ್ಥಿವ ಶರೀರರವನ್ನು ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ದೆಹಲಿಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಅಂತಿಮ ಸಂಸ್ಕಾರಕ್ಕೆ ಕುಟುಂಬ ಅಲ್ಲಿಗೆ ಹೋಗಲಿದೆ. ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಅಂತಿಮ ನಮನಕ್ಕೆ ವ್ಯವಸ್ಥೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ತಮಿಳುನಾಡಿನಲ್ಲಿ ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ಸೇರಿ 13 ಮಂದಿ ದುರ್ಮರಣಕ್ಕೀಡಾದವರ ಅಂತಿಮ ದರ್ಶನವನ್ನು ಶುಕ್ರವಾರ ದೆಹಲಿಯಲ್ಲಿ ಪಡೆಯಬಹುದು.

Army Helicopter Crash: Lieutenant Colonel Harjinder Singh Is A Son-in-law of Salmara Near Karkala

ಊಟಿ ಸಮೀಪ ಸೇನಾ ಹೆಲಿಕಾಪ್ಟರ್ ದುರಂತ
ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಮತ್ತು 11 ಸಶಸ್ತ್ರ ಪಡೆ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಬದುಕುಳಿದ ಏಕೈಕ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಪ್ರಸ್ತುತ ವೆಲ್ಲಿಂಗ್ಟನ್‌ನ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಭಾರತೀಯ ವಾಯುಸೇನೆ ಹೇಳಿದೆ.

ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್, ಪಾಲಂ ವಾಯುನೆಲೆಯಿಂದ ಐಎಎಫ್ ಎಂಬ್ರೇರ್ ವಿಮಾನದಲ್ಲಿ ಬೆಳಿಗ್ಗೆ 8:47ಕ್ಕೆ ಹೊರಟರು ಮತ್ತು ಬೆಳಿಗ್ಗೆ 11:34ಕ್ಕೆ ಸುಲೂರ್ ವಾಯುನೆಲೆಗೆ ಬಂದಿಳಿದರು.

ನಂತರ ಬೆಳಗ್ಗೆ 11:48ರ ಸುಮಾರಿಗೆ Mi-17V5 ಚಾಪರ್‌ನಲ್ಲಿ ಸುಳೂರಿನಿಂದ ವೆಲ್ಲಿಂಗ್ಟನ್‌ಗೆ ಹೊರಟಿದ್ದರು. ಮಧ್ಯಾಹ್ನ 12.22ರ ಸುಮಾರಿಗೆ ಹೆಲಿಕಾಪ್ಟರ್ ಪತನಗೊಂಡಿದೆ ಎಂದು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ವಿಂಗ್ ಕಮಾಂಡರ್ ಪಿಎಸ್ ಚೌಹಾಣ್, ಸ್ಕ್ವಾಡ್ರನ್ ಲೀಡರ್ ಕೆ. ಸಿಂಗ್, ಜೆಡಬ್ಲ್ಯೂಒ ದಾಸ್, ಜೆಡಬ್ಲ್ಯೂಒ ಪ್ರದೀಪ್ ಎ, ಹವಾಲ್ದಾರ್ ಸತ್ಪಾಲ್, ನಾಯಕ್ ಗುರುಸೇವಕ್ ಸಿಂಗ್, ನಾಯಕ್ ಜಿತೇಂದರ್ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ಮತ್ತು ಲ್ಯಾನ್ಸ್ ನಾಯಕ್ ಸಾಯಿ ತೇಜಾ ಮೃತಪಟ್ಟ ಇತರ ಸಿಬ್ಬಂದಿಗಳಾಗಿದ್ದಾರೆ.

   ಭಾರತ ಸೇನೆಗೆ ಬಿಪಿನ್ ರಾವತ್ ಕೊಟ್ಟ ಕೊಡುಗೆ ಏನೇನು ಗೊತ್ತಾ? | Oneindia Kannada
   English summary
   Lieutenant Colonel Harjinder Singh, who was killed in an army helicopter Crash, was married to Agnes Prafulla Minajas of Salmar village in Karkala's Taluk.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X