ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರವಾಸಿಗರನ್ನು ಕೈ ಬೀಸಿ ಕರೆಯುತಿದೆ ಹಾಲ್ನೊರೆಯ ಅರ್ಬಿಫಾಲ್ಸ್

By ಉಡುಪಿ ಪ್ರತಿನಿಧಿ
|
Google Oneindia Kannada News

Recommended Video

Arbi Falls: ಉಡುಪಿಯ ಮಣಿಪಾಲದಲ್ಲಿ ಕೈ ಬೀಸಿ ಕರೆಯುತ್ತಿದೆ ಅರ್ಬಿ ಫಾಲ್ಸ್ | Oneindia Kannada

ಉಡುಪಿ, ಜುಲೈ.04: ಮುಂಗಾರು ಮಳೆ ಧರೆಗೆ ಮುತ್ತಿಡುತ್ತಿದ್ದಂತೆ ಪರಿಸರವೆಲ್ಲ ಹೊಚ್ಚ ಹೊಸ ಕಳೆ ಪಡೆಯುತ್ತಿದೆ. ಸೊರಗಿ ಹೋಗಿದ್ದ ಗಿಡ, ಮರಗಂಟಿಗಳು ಹಚ್ಚ ಹಸಿರಿನಿಂದ ನಳನಳಿಸುತ್ತಿದೆ. ನದಿ-ಕೆರೆಗಳು ಉಕ್ಕಿ ಹರಿಯುತ್ತಿವೆ. ಜಲಪಾತಗಳು ಕವಲೊಡೆದು ಧುಮ್ಮಿಕ್ಕಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ.

ಮಲೆನಾಡಿನ ಹಾಗೆಯೇ ಕರಾವಳಿಯಲ್ಲೂ ಕಿರುಜಲಪಾತಗಳು ಹರಿದು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ. ಸದ್ಯ ಸೃಷ್ಟಿಯಾಗಿರುವ ಈ ಕಿರು ಜಲಪಾತ ನಿಮಗೆ ಮುದ ನೀಡುವುದಷ್ಟೇ ಅಲ್ಲ, ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ.

ರುದ್ರ ರಮಣೀಯ ಕೊಡಗಿನ ಜಲಪಾತಗಳು, ಪ್ರವಾಸಕ್ಕೆ ತೆರಳುವ ಮುನ್ನ ಹುಷಾರು!ರುದ್ರ ರಮಣೀಯ ಕೊಡಗಿನ ಜಲಪಾತಗಳು, ಪ್ರವಾಸಕ್ಕೆ ತೆರಳುವ ಮುನ್ನ ಹುಷಾರು!

ನಿಮಗೂ ಈ ಕಿರು ಜಲಪಾತದ ವೈಭವವನ್ನು ಕಣ್ತುಂಬಿಕೊಳ್ಳಬೇಕು ಎನಿಸಿದರೆ, ಮತ್ತೇಕೆ ತಡ ಈಗಲೇ ಹೊರಟು ಬನ್ನಿ. ಅದಕ್ಕೂ ಮುನ್ನ ಆ ಕಿರುಜಲಪಾತ ಎಲ್ಲಿದೆ? ಹೇಗೆ ಹೊರಡುವುದು ಎಂಬಿತ್ಯಾದಿ ವಿವರಗಳಿಗೆ ಇಲ್ಲೊಮ್ಮೆ ಕಣ್ಣುಹಾಯಿಸಿ...

 ಇಡೀ ಮಣಿಪಾಲಕ್ಕೆ ಕಳೆ

ಇಡೀ ಮಣಿಪಾಲಕ್ಕೆ ಕಳೆ

ಮುಂಗಾರು ಮಳೆ ಪ್ರವೇಶ ಪಡೆದು, ಸುಮಾರು ದಿನಗಳೇ ಕಳೆದಿದ್ದು, ಕರಾವಳಿಯಲ್ಲಿ ಉತ್ತಮ ಮಳೆ ಆಗುತ್ತಿದೆ. ಉಡುಪಿಯ ಶಿಕ್ಷಣ ನಗರಿ, ವಿದ್ಯಾಕಾಶಿ ಅಂತಲೇ ಗುರುತಿಸಿಕೊಂಡಿರುವ ಮಣಿಪಾಲದಲ್ಲೂ ಒಂದು ಕಿರು ಜಲಪಾತ ಸೃಷ್ಟಿಯಾಗಿದೆ.

ಮೊನ್ನೆ ಮೊನ್ನೆವರೆಗೂ ಮಣಿಪಾಲವೆಂದರೆ ಬರೇ ಬಿಲ್ಡಿಂಗ್, ಕಾಲೇಜು ಮಾತ್ರ ನೆನಪಾಗುತ್ತಿತ್ತು. ಆದರೆ ಈಗಿಲ್ಲಿ ಸೃಷ್ಟಿಯಾಗಿರುವ ಮಿನಿ ಜಲಪಾತ ಮಣಿಪಾಲಕ್ಕೆ ಬೇರೆಯದೇ ಕಳೆ ತಂದುಕೊಟ್ಟಿದೆ.

 ಗುಡ್ಡದೊಳಗೆ ಹೋಗಿ

ಗುಡ್ಡದೊಳಗೆ ಹೋಗಿ

ಮಣಿಪಾಲದಿಂದ ನಾಲ್ಕು ಕಿ.ಮೀ ಅರ್ಬಿಕೋಡಿ ಕಡೆ ಸಾಗಿದರೆ ಕಾಣ ಸಿಗುವುದೇ ಈ ಕಿರುಜಲಪಾತ. ಅದರ ಹೆಸರು ಅರ್ಬಿ ಫಾಲ್ಸ್. ಗುಡ್ಡದ ಮೇಲೆ ನಿಂತು ನೋಡಿದರೆ ಹಚ್ಚಹಸಿರಿನಿಂದ ಕೂಡಿರೋ ಗುಡ್ಡೆಯಂತೆ ಕಾಣುತ್ತದೆ.

ಇದೀಗ ಅರ್ಬಿಫಾಲ್ಸ್ ಮಣಿಪಾಲ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಟ್ ಫೇವರಿಟ್ ತಾಣವಾಗಿದೆ. ವೀಕೆಂಡ್ ಗಳಲ್ಲಂತೂ ಈ ಫಾಲ್ಸ್ ಪ್ರವಾಸಿಗರಿಂದ ತುಂಬಿ ತುಳುಕುತ್ತದೆ. ಅಷ್ಟೇ ಅಲ್ಲ, ಪ್ರವಾಸಿಗರು ಇಲ್ಲಿಗೆ ಬಂದು ನಿರ್ಭಿಡೆಯಿಂದ ಸಮಯ ಕಳೆಯುವುದು ಸಾಮಾನ್ಯವಾಗಿದೆ.

 ಊರಿನಿಂದ ಬಂತು ಈ ಹೆಸರು

ಊರಿನಿಂದ ಬಂತು ಈ ಹೆಸರು

ಅರ್ಬಿಕೋಡಿ ಎನ್ನುವ ಊರಿನ ಬಳಿ ಈ ಕಿರುಜಲಪಾತ ಇರುವುದರಿಂದ ಕಿರುಜಲಪಾತಕ್ಕೆ ಅದೇ ಹೆಸರಿಡಲಾಗಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಈ ಕಿರುಜಲಪಾತ ಉಕ್ಕಿ ಹರಿಯತೊಡಗುತ್ತದೆ.

ಹಾಲ್ನೊರೆಯಂತೆ ಉಕ್ಕಿ ಬರೋ ಜಲಪಾತ ನೋಡಲು ಹಿರಿಯರು, ಕಿರಿಯರೆನ್ನದೇ ತಮ್ಮ ಕುಟುಂಬ ಪರಿವಾರ ಸಮೇತ ಬಂದು ಸಮಯ ಕಳೆಯುತ್ತಾರೆ. ಮಕ್ಕಳು ನೀರಲ್ಲಿ ಆಟವಾಡಿ ಖುಷಿ ಪಡುವ ಆ ಸೊಗಸೇ ಬೇರೆ.

 ಅಪಾಯಕಾರಿಯಲ್ಲದ ಸ್ಥಳ

ಅಪಾಯಕಾರಿಯಲ್ಲದ ಸ್ಥಳ

ನಿಜ ಹೇಳಬೇಕೆಂದರೆ ಈ ಜಲಪಾತ ಅಷ್ಟೇನೂ ಅಪಾಯಕಾರಿ ಅಲ್ಲ. ಇಲ್ಲಿರೋ ಬಂಡೆಕಲ್ಲುಗಳು ಅಷ್ಟು ಸುಲಭಕ್ಕೆ ಜಾರುವುದಿಲ್ಲ. ಗುಡ್ಡೆಯ ತುದಿಯಿಂದ ಇಳಿಮುಖವಾಗಿ ಹರಿದುಬರುವ ನೀರು ಬಂಡೆಕಲ್ಲಿಗೆ ಬಡಿದು ಚಿತ್ತಾರವಾಗಿ ಮೂಡಿ ಬರುತ್ತದೆ.

ಇಳಿಮುಖವಾಗಿದ್ದರೂ ನೀರಿನ ರಭಸವನ್ನು ಬಂಡೆಕಲ್ಲುಗಳು ತಡೆಯುತ್ತವೆ. ಅಲ್ಲದೇ ಜಲಪಾತದ ಕೆಳಭಾಗದಲ್ಲಿ ಹೆಚ್ಚೇನೂ ಆಳವಿಲ್ಲ. ಮಕ್ಕಳನ್ನು ಸಹ ಆರಾಮಾಗಿ ನೀರಿನಲ್ಲಿ ಆಟವಾಡಲು ಬಿಡಬಹುದು.

English summary
Arbifalls is 4 km from Manipal.This small waterfall is created during monsoons. Tourists will come here to enjoy the weekend.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X