ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ರಮ-ಸಕ್ರಮ ದಂಡದಲ್ಲಿ ಕಡಿತ, ಅರ್ಜಿ ಹಾಕಿ

|
Google Oneindia Kannada News

ಉಡುಪಿ, ಜುಲೈ 28 : 'ಕಂದಾಯ ತಿದ್ದುಪಡಿ ಕಾಯ್ದೆ 94ಸಿ ಅನ್ವಯ ಅಕ್ರಮ- ಸಕ್ರಮಕ್ಕೆ ಸಲ್ಲಿಸಿರುವ ಯಾವುದೇ ಅರ್ಜಿಯನ್ನು ತಿರಸ್ಕರಿಸಬಾರದು' ಎಂದು ಅಧಿಕಾರಿಗಳಿಗೆ ಮೀನುಗಾರಿಕೆ, ಯುವಸಬಲೀಕರಣ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಸೂಚನೆ ನೀಡಿದರು.

ಉಡುಪಿಯಲ್ಲಿ ಗುರುವಾರ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು, '94ಸಿ ಅನ್ವಯ ಸಲ್ಲಿಕೆಯಾಗಿರುವ ಅರ್ಜಿಗಳನ್ನು ತಿರಸ್ಕರಿಸಬಾರದು. ಅರ್ಜಿದಾರರ ಮನೆ, ಡೀಮ್ಡ್ ಅರಣ್ಯ ರಸ್ತೆ ಪಕ್ಕದಲ್ಲಿ, ಅರಣ್ಯ, ಪರಂಬೋಕು ಜಾಮೀನು, ಕರಾವಳಿ ನಿಯಂತ್ರಣ ವಲಯ ಎಲ್ಲಿ ಇದ್ದರೂ ಸರಿಯೆ ಮೊದಲು ಅರ್ಜಿಯನ್ನು ಸ್ವೀಕರಿಸಿ. ಆ ಸಮಸ್ಯೆ ಬಗೆಹರಿಸಿ ಅರ್ಜಿ ಇತ್ಯರ್ಥಪಡಿಸಬಹುದು' ಎಂದರು.[ಅಕ್ರಮ-ಸಕ್ರಮ ದಂಡ ಶುಲ್ಕ ನಿಗದಿ, ರಿಯಾಯಿತಿ]

Akrama-Sakrama fee cut by up to 6 thousand says Pramod Madhwaraj

'ದಂಡದ ಪ್ರಮಾಣವನ್ನು ಕಡಿಮೆ ಮಾಡಲಾಗಿದ್ದು ಅಳತೆಯ ಆಧಾರದಲ್ಲಿ ಸಾಮಾನ್ಯ ವರ್ಗದವರಿಗೆ ರೂ. 2 , ರೂ.4 ಹಾಗೂ ರೂ. 6 ಸಾವಿರ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ರೂ. 1, ರೂ.2 ಮತ್ತು ರೂ.3 ಸಾವಿರ ನಿಗದಿಪಡಿಸಲಾಗಿದೆ' ಎಂದು ಹೇಳಿದರು.[ನಗರ ಪ್ರದೇಶದಲ್ಲಿ ಅಕ್ರಮ-ಸಕ್ರಮ : ಏನು, ಹೇಗೆ?]

'ಯಾವುದೇ ಅರ್ಜಿದಾರರಿಂದ ಒಂದೇ ಒಂದು ರೂ. ಪಡೆಯದಂತೆ ತಹಶೀಲ್ದಾರ್ ಅವರೇ ಎಚ್ಚರಿಕೆ ವಹಿಸಬೇಕು. ಭ್ರಷ್ಟಾಚಾರ ರಹಿತವಾಗಿ ಅಕ್ರಮ-ಸಕ್ರಮ ನಡೆಯಬೇಕು. ನಗರ ಪ್ರದೇಶದಲ್ಲಿ 600 ಅಡಿಯಷ್ಟು ಮಾತ್ರ ಸಕ್ರಮಕ್ಕೆ ನಿರ್ಧರಿಸಲಾಗಿದೆ. ಇದನ್ನು ಇನ್ನೂ ಹೆಚ್ಚಿಸುವಂತೆ ಮನವಿ ಮಾಡಲಾಗುವುದು' ಎಂದು ತಿಳಿಸಿದರು.[ಕರ್ನಾಟಕ : ಅಕ್ರಮ-ಸಕ್ರಮ, ನಿಮಗಿದು ತಿಳಿದಿರಲಿ]

ಕಿಂಡಿ ಅಣೆಕಟ್ಟುಗಳ ನಿರ್ವಹಣೆ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿ ರಚಿಸುವ ಸಮಿತಿಗಳಿಗೆ ನೀಡಲು ನಿರ್ಧರಿಸಿದ್ದರೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಗ್ರಾಮ ಪಂಚಾಯತಿಗಳಿಗೆ ಈ ಬಗ್ಗೆ ವಿವರವಾದ ಮಾಹಿತಿ ನೀಡದೆ ಕೇವಲ ಸಮಿತಿ ರಚಿಸಿ ಎಂದು ಪತ್ರ ಬರೆದಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

English summary
File application for Akrama-Sakrama scheme. penalty rates cut by 1 to 6 thousand says Udupi district in-charge minister Pramod Madhwaraj.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X