ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್ ಕೊಟ್ಟ ಎಸಿಬಿ

|
Google Oneindia Kannada News

ಉಡುಪಿ, ಡಿಸೆಂಬರ್ 28: ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ತಂಡ ಬೆಳ್ಳಂಬೆಳಗ್ಗೆ ಬಿಸಿ ಮುಟ್ಟಿಸಿದ್ದು, ರಾಜ್ಯದ 17 ಕಡೆಗಳಲ್ಲಿ ಎಸಿಬಿ ದಾಳಿ ನಡೆಸಿದೆ. ಐವರು ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಉಡುಪಿಯಲ್ಲೂ ದಾಳಿ ನಡೆಸಿದ್ದಾರೆ.

ಮಂಗಳೂರಿನ ಸರ್ಕಾರಿ ಶಿಕ್ಷಕ ತರಬೇತಿ ಕೇಂದ್ರದ ರೀಡರ್ ಮಂಜುನಾಥಯ್ಯ ಅವರ ಮನೆ ಮೇಲೆ ಎಸಿಬಿ ಪೊಲೀಸರು ಮುಂಜಾನೆ ದಾಳಿ ನಡೆಸಿದ್ದಾರೆ. ಎಸಿಬಿ ಪಶ್ಚಿಮ ವಲಯ ಎಸ್ಪಿ ಶೃತಿ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ.

ಕರ್ನಾಟಕದ 17 ಕಡೆಗಳಲ್ಲಿ ಏಕಕಾಲದಲ್ಲಿ ಎಸಿಬಿ ದಾಳಿಕರ್ನಾಟಕದ 17 ಕಡೆಗಳಲ್ಲಿ ಏಕಕಾಲದಲ್ಲಿ ಎಸಿಬಿ ದಾಳಿ

ಉಡುಪಿಯ ಮಣಿಪಾಲದಲ್ಲಿ ಇರುವ ಮಂಜುನಾಥಯ್ಯ ಅವರ ಪ್ರಿಯದರ್ಶಿನಿ ಫ್ಲಾಟ್ ಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳ ತಂಡ ಮನೆಯಲ್ಲಿ ಇಡಲಾಗಿರುವ ಕಡತ ಪರೀಶಿಲನೆ ನಡೆಸುತ್ತಿದ್ದಾರೆ ಸಾರ್ವಜನಿಕ ದೂರಿನ ಆಧಾರದಲ್ಲಿ ಎಸಿಬಿ ದಾಳಿ ನಡೆಸಿದೆ.

ACB team lead by SP Shruthi raided house in Udupi

ಚಿಕ್ಕಮಗಳೂರಿನ ಬಿರೂರು ಹಾಗೂ ಶಿವಮೊಗ್ಗದ ಚೆನ್ನಗಿರಿಯಲ್ಲಿ ಇರುವ ಮಂಜುನಾಥಯ್ಯ ಅವರ ಸಂಬಂಧಿಕರ ಮನೆ ಮೇಲೂ ಎಸಿಬಿ ದಾಳಿ ನಡೆಸಿದೆ. ಈ ಹಿಂದೆ ಮಂಜುನಾಥಯ್ಯ ಉಡುಪಿ ನಗರಸಭೆ ಪೌರಾಯುಕ್ತನಾಗಿ ಕಾರ್ಯನಿರ್ವಹಿಸಿದ್ದರು. ಅದಕ್ಕೂ ಮುನ್ನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

ರಾಮನಗರ : ಜ್ಯೂನಿಯರ್ ವಾರ್ಡನ್ ಆಸ್ತಿ 250 ಕೋಟಿರಾಮನಗರ : ಜ್ಯೂನಿಯರ್ ವಾರ್ಡನ್ ಆಸ್ತಿ 250 ಕೋಟಿ

ಉಡುಪಿ ನಗರ ಸಭೆಯ ಪೌರಾಯುಕ್ತರಾಗಿದ್ದ ಅವಧಿಯಲ್ಲಿ ಮಂಜುನಾಥಯ್ಯ ಅವರ ಮೇಲೆ ಸಾಕಷ್ಟು ಭ್ರಷ್ಟಾಚಾರದ ಆರೋಪ ಕೇಳಿಬಂದಿತು. ಪೌರಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಮಂಜುನಾಥಯ್ಯ ಹಟಾವೊ ಉಡುಪಿ ಬಚಾವೊ ಅನ್ನೊ ಆಂದೋಲನ ವನ್ನು ಉಡುಪಿ ಬಿಜೆಪಿ ನಿರಂತರವಾಗಿ ನಡೆಸಿತ್ತು. ನೂತನ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಂಜುನಾಥಯ್ಯ ಅವರನ್ನು ಮಂಗಳೂರಿಗೆ ಶಿಕ್ಷಣ ಕ್ಷೇತ್ರಕ್ಕೆ ರೀಡರ್ ಅಗಿ ನೇಮಕ ಮಾಡಲಾಗಿತ್ತು .

English summary
ACB team lead by SP Shruthi raided house and office of reader of education department Manjunathaiya at Udupi and Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X