ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭ್ರಷ್ಟಾಚಾರ ಆರೋಪ; ಕುಂದಾಪುರ ಉಪವಿಭಾಗಾಧಿಕಾರಿ ಮನೆ ಮೇಲೆ ಎಸಿಬಿ ದಾಳಿ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಸೆಪ್ಟೆಂಬರ್ 19: ಎರಡು ದಿನಗಳ ಹಿಂದಷ್ಟೇ ವರ್ಗಾವಣೆಗೊಂಡಿರುವ ಕುಂದಾಪುರ ಉಪವಿಭಾಗಾಧಿಕಾರಿ ಡಾ.ಎಸ್.ಎಸ್.ಮಧುಕೇಶ್ವರ್ ಅವರ ಸರ್ಕಾರಿ ವಸತಿಗೃಹದ ಮೇಲೆ ಎಸಿಬಿ ದಾಳಿ ನಡೆಸಿದೆ.

ದಾವಣಗೆರೆಯಲ್ಲಿ ಆರ್ ಟಿಒ ಕಚೇರಿ ಮೇಲೆ ಎಸಿಬಿ ದಾಳಿ; 15 ದಲ್ಲಾಳಿಗಳು ವಶಕ್ಕೆದಾವಣಗೆರೆಯಲ್ಲಿ ಆರ್ ಟಿಒ ಕಚೇರಿ ಮೇಲೆ ಎಸಿಬಿ ದಾಳಿ; 15 ದಲ್ಲಾಳಿಗಳು ವಶಕ್ಕೆ

ಹಿರಿಯ ಕೆಎಎಸ್ ಶ್ರೇಣಿಯ ಅಧಿಕಾರಿಯಾಗಿ ಕೆಲವು ತಿಂಗಳ ಹಿಂದಷ್ಟೇ ಕುಂದಾಪುರದ ಎಸಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಡಾ. ಮಧುಕೇಶ್ವರ ಕುಂದಾಪುರ ಅಸಿಸ್ಟೆಂಟ್ ಕಮಿಷನರ್ ಆಗಿ ಪ್ರತಿಯೊಂದು ಕಡತ ವಿಲೇವಾರಿಗೂ ಲಂಚಕ್ಕಾಗಿ ಕೈಚಾಚುತ್ತಿದ್ದರು ಅನ್ನುವುದು ಸಾರ್ವಜನಿಕರ ಆರೋಪವಾಗಿತ್ತು.

ACB Raid On Kundapur KAS Officer In Allegations Of Corruption

ಸಿದ್ದರಾಮಯ್ಯ ರಚಿಸಿದ್ದ ಎಸಿಬಿ ರದ್ದು?: ಬಿಎಸ್‌ವೈ ಪ್ಲ್ಯಾನ್ ಏನು?ಸಿದ್ದರಾಮಯ್ಯ ರಚಿಸಿದ್ದ ಎಸಿಬಿ ರದ್ದು?: ಬಿಎಸ್‌ವೈ ಪ್ಲ್ಯಾನ್ ಏನು?

ಅವರ ಮೇಲೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಇಂದು ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಡಾ. ಮಧುಕೇಶ್ವರ ಮಂಗಳವಾರವಷ್ಟೇ ಕುಂದಾಪುರ ಉಪವಿಭಾಗದಿಂದ ವರ್ಗಾವಣೆಗೊಂಡಿದ್ದರು. ಆದರೆ ಯಾವ ಸ್ಥಳವೂ ನಿಗದಿಯಾಗಿರಲಿಲ್ಲ. ಹೊಸದಾಗಿ ಬಂದಿರುವ ಉಪವಿಭಾಗಾಧಿಕಾರಿ ರಾಜು ಕೆ ಅವರಿಗೆ ನಿರ್ಗಮನ ಅಧಿಕಾರಿಯಾಗಿ ಮಧುಕೇಶ್ವರ್ ಮನೆ ಬಿಟ್ಟುಕೊಡಬೇಕಿತ್ತು. ಆದರೆ ಅದೇ ಮನೆಯೊಳಗೆ ಲಂಚ ಪಡೆದು ಕಡತಗಳನ್ನು ವಿಲೇವಾರಿ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಉಡುಪಿ ಎಸಿಬಿ ಡಿವೈಎಸ್ ಪಿ ಮಂಜುನಾಥ ನೇತೃತ್ವದಲ್ಲಿ ಇಂದು ದಾಳಿ ನಡೆದಿದೆ.

English summary
ACB raided the house of Kundapur sub-divisional officer Dr S.S. Madhukeshwar on the allegations of corruption.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X