ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದೇಶಿ ಮಹಿಳೆಗೂ ತಗುಲಿದ ಮಂಗನ ಕಾಯಿಲೆ ಸೋಂಕು

|
Google Oneindia Kannada News

ಉಡುಪಿ, ಫೆಬ್ರವರಿ 04:ಕರಾವಳಿ ಮತ್ತು ಮಲೆನಾಡಿನಲ್ಲಿ ಮಂಗನಕಾಯಿಲೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಸಮಸ್ಯೆ ತೀವ್ರವಾಗಿ ಕಾಡಲಾರಂಭಿಸಿದ್ದು ಆತಂಕ ಸೃಷ್ಟಿಸಿದೆ.

ಸೋಂಕು ತಗುಲಿರುವ 50ಕ್ಕೂ ಹೆಚ್ಚು ಮಂದಿ ಉಡುಪಿಯ ಕೆಎಂಸಿ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಮಂಗನ ಕಾಯಿಲೆ ವಿದೇಶಿ ಮಹಿಳೆಯೊಬ್ಬರಿಗೆ ತಗುಲಿರುವ ವಿಚಾರ ಬೆಳಕಿಗೆ ಬಂದಿದೆ.

ಮಂಗನ ಕಾಯಿಲೆ ಹಿನ್ನೆಲೆ ಬನವಾಸಿ ಕದಂಬೋತ್ಸವ ಮುಂದೂಡಿಕೆಮಂಗನ ಕಾಯಿಲೆ ಹಿನ್ನೆಲೆ ಬನವಾಸಿ ಕದಂಬೋತ್ಸವ ಮುಂದೂಡಿಕೆ

ಫ್ರಾನ್ಸ್‌ನಿಂದ ಉಡುಪಿಗೆ ಪ್ರವಾಸಕ್ಕೆ ಬಂದಿದ್ದ 33 ವರ್ಷದ ವಿದೇಶಿ ಮಹಿಳೆಯೊಬ್ಬರಲ್ಲಿ ಇದೀಗ ಮಂಗನ ಕಾಯಿಲೆಯ ಸೋಂಕು ಕಾಣಿಸಿಕೊಂಡಿದೆ. ಸದ್ಯ ಮಣಿಪಾಲದ ಕೆಎಂಸಿಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರವಾಸಿಯಾಗಿ ಕರಾವಳಿಗೆ ಬಂದ ಫ್ರಾನ್ಸ್ ನ ಈ ಮಹಿಳೆ ಅನೇಕ ಕಡೆ ಪ್ರವಾಸ ಮಾಡಿದ್ದರು.

A woman from France got admitted in KMC hospital of Manipal

ಜಿಲ್ಲೆಯ ಹಲವೆಡೆ ಪ್ರವಾಸ ಮಾಡುವಾಗ ಈ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ. ಕೆಎಂಸಿಯಲ್ಲಿ ಇದುವರೆಗೂ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ 152 ಮಂದಿ ಶಂಕಿತರು ಮಂಗನ ಕಾಯಿಲೆಗೆ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಪೈಕಿ 55 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

English summary
Monkey fever:A woman from France admitted in KMC hospital of Manipal for treatment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X