ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲ್ಪೆ ಮೀನುಗಾರರ ಬಲೆಗೆ ಬಿದ್ದ ಅಪರೂಪದ ಹೆಲಿಕಾಪ್ಟರ್ ಫಿಶ್!

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಅಕ್ಟೋಬರ್ 5: ಕಡಲು ಜಲಜೀವರಾಶಿಗಳ ಆಗರವಾಗಿದ್ದು, ಸಮುದ್ರದಲ್ಲಿ ಸಾವಿರಾರು ವಿಧದ ಮತ್ಸ್ಯ ಸಂಪತ್ತು ಇದೆ. ಜಗತ್ತಿನ ಭಾಗಶಃ ಪ್ರದೇಶವನ್ನು ಆವರಿಸಿಕೊಂಡಿರುವ ಜಲರಾಶಿಯಲ್ಲಿ ಅದ್ಭುತ ಎನಿಸುವಂತಹ ಮತ್ಸ್ಯಗಳಿವೆ. ಅರಬ್ಬೀ ಸಮುದ್ರದಲ್ಲಿ ಮತ್ಸ್ಯ ಬೇಟೆಗೆಂದು ಇಳಿದ ಉಡುಪಿಯ ಮೀನುಗಾರರ ಬಲೆಗೆ ಬಲು ಅಪರೂಪದ ಮೀನೊಂದು ಪತ್ತೆಯಾಗಿದೆ.

ಮಲ್ಪೆಯ ಸರ್ವಋತು ಬಂದರಿನಿಂದ ಅರಬ್ಬೀ ಸಮುದ್ರದತ್ತ ಹೊರಟ ಲುಕ್ಮಾನ್ ಎಂಬುವವರ ಬೋಟ್ ದಡದಿಂದ ಸುಮಾರು 20 ನಾಟಿಕಲ್ ಮೈಲಿ ದೂರದಲ್ಲಿ ಮತ್ಸ್ಯ ಬೇಟೆಗಿಳಿದಾಗ, ಅಪರೂಪದ ಬೌ ಮೌತ್ ಗಿಟಾರ್ ಶಾರ್ಕ್ ಎಂಬ ಮೀನು ಬಲೆಗೆ ಬಿದ್ದಿದೆ. ಸ್ಥಳೀಯವಾಗಿ ನೆಮ್ಮೀನ್ ಅಥವಾ ಹೆಲಿಕಾಪ್ಟರ್ ಫಿಶ್ ಅಂತಾ ಕರೆಯಲ್ಪಡುವ ಮೀನು ಆಕಾರದಲ್ಲಿ ಹೆಲಿಕಾಪ್ಟರ್ ಅನ್ನು ಹೋಲುವುದರಿಂದ ಹೆಲಿಕಾಪ್ಟರ್ ಫಿಶ್ ಅಂತಾನೂ ಕರೆಯುತ್ತಾರೆ.

ಬರೋಬ್ಬರಿ 84 ಕೆಜಿ ತೂಕವಿದ್ದ ಈ ಮೀನು ಉದ್ದ ಬಾಲ ಹಾಗೂ ಬೆನ್ನಿನ ಅಕ್ಕಪಕ್ಕ ಅಗಲವಾದ ರೆಕ್ಕೆಗಳನ್ನು ಒಳಗೊಂಡಿದೆ. ಈ ಮೀನು ಕಾಣಸಿಗುವುದು ಬಹಳ ಅಪರೂಪವಾಗಿದೆ. ಅಳಿವಿನಂಚಿನಲ್ಲಿರುವ ಮತ್ಸ್ಯ ಪ್ರಭೇದಕ್ಕೆ ಈ ಮೀನನ್ನು ಸೇರ್ಪಡೆಗೊಳಿಸಲಾಗಿದೆ.

Udupi: A Rare Helicopter Fish That Has Fallen Into The Trap Of Fishermen In Malpe Beach

ಸಮುದ್ರದಲ್ಲಿ ಸುಮಾರು 90 ಮೀಟರ್ ಆಳದಲ್ಲಿ ಈ ಮೀನುಗಳು ವಾಸವಿರುತ್ತದೆ. ಸಾಮಾನ್ಯವಾಗಿ ಹವಳ ಬಂಡೆಗಳ ನಡುವೆ ವಾಸಿಸುವ ಹೆಲಿಕಾಪ್ಟರ್ ಫಿಶ್‌ಗಳ ಆಹಾರ ಸಣ್ಣ ಮೀನುಗಳು. ಬಂಡೆಗಳ ನಡುವೆ ಹೊಂಚು ಹಾಕಿ ಬೇಟೆಯಾಡುವ ಹೆಲಿಕಾಪ್ಟರ್ ಫಿಶ್ ಬಹಳ ಕ್ಷಿಪ್ರಗತಿಯಲ್ಲಿ ಸಣ್ಣ ಮೀನುಗಳ ಮೇಲೆ ದಾಳಿ ಮಾಡುತ್ತದೆ.

ಲುಕ್ಮಾನ್ ಅವರ ಮೀನುಗಾರರ ತಂಡಕ್ಕೆ ಅರಬ್ಬೀ ಸಮುದ್ರದ 20 ನಾಟಿಕಲ್ ಮೈಲಿ ದೂರದಲ್ಲಿ ಬೌ ಮೌತ್ ಶಾರ್ಕ್ ಬಲೆಗೆ ಬಿದ್ದಿದೆ. ಅಂಜಲ್ ಮತ್ತು ಬಂಗುಡೆಯ ಮೀನಿನ ಜೊತೆಗೆ ಬೌ ಮೌತ್ ಫಿಶ್ ಕೂಡಾ ಬಲೆಗೆ ಬಿದ್ದಿದೆ. ಆದರೆ ಮೀನುಗಾರರು ಮಾತ್ರ ಬೌ ಮೌತ್ ಫಿಶ್ ಬಲೆಗೆ ಬಿದ್ದಿರುವುದರಿಂದ ಖುಷಿಗೊಂಡಿಲ್ಲ.

Udupi: A Rare Helicopter Fish That Has Fallen Into The Trap Of Fishermen In Malpe Beach

ಈ ಬೌ ಮೌತ್ ಶಾರ್ಕ್‌ನ ಮಾಂಸ ಕರ್ನಾಟಕದ ಮೀನು ಪ್ರೀಯರಿಗೆ ಇಷ್ಟ ಇಲ್ಲ. ಯಾಕೆಂದರೆ ಬೌಮೌತ್ ಶಾರ್ಕ್‌ನ ಮಾಂಸ ಮೀನು ಪ್ರಿಯರಿಗೆ ಹಿಡಿಸುವುದಿಲ್ಲ. ಪಕ್ಕದ ಕೇರಳ ರಾಜ್ಯದ ಮತ್ಸ್ಯ ಪ್ರಿಯರು ಬೌ ಮೌತ್ ಶಾರ್ಕ್ ಮಾಂಸವನ್ನು ಇಷ್ಟ ಪಡುತ್ತಾರೆ.

ಹೀಗಾಗಿ ಮಲ್ಪೆಯಿಂದ ಬೌಮೌತ್ ಶಾರ್ಕ್ ಮೀನನ್ನು ಮಾರಾಟ ಮಾಡಲು ಮೀನುಗಾರರ ತಂಡ ಕೇರಳಕ್ಕೆ ತೆಗೆದುಕೊಂಡು ಹೋಗಿದೆ. ಕೇರಳದ ಮೀನು ಪ್ರಿಯರು ಈ ಬೌಮೌತ್ ಶಾರ್ಕ್ ಮೀನಿನ ಮಾಂಸವನ್ನು ಕೆಜಿಗೆ 50 ರೂಪಾಯಿ ಕೊಟ್ಟು ಖರೀದಿಸುತ್ತಾರೆ. ಹೀಗಾಗಿ ಕಡಲಿನಿಂದ ದಡಕ್ಕೆ ತಂದ ಖರ್ಚಿಗಾದರೂ ಸಾಕಾಗಲಿ ಎಂದು ಮೀನುಗಾರರು ಈ ಮೀನನ್ನು ಕೇರಳದಲ್ಲಿ ಮಾರಲು ನಿರ್ಧರಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬೋಟ್ ಮಾಲೀಕ ಲುಕ್ಮಾನ್, "ಕಳೆದ ಹಲವಾರು ವರ್ಷಗಳಿಂದ ಮೀನುಗಾರಿಕೆ ಮಾಡುತ್ತಿದ್ದೇವೆ. ಆದರೆ ಈವರೆಗೆ ಈ ಮೀನು ಸಿಕ್ಕಿರಲಿಲ್ಲ. ಈ ಬಾರಿ ಅಂಜಲ್ ಮತ್ತು ಬಂಗುಡೆಯೊಂದಿಗೆ ಈ ಮೀನು ಸಿಕ್ಕಿದೆ. ಅಪರೂಪದ ಮೀನು ಸಿಕ್ಕಿರುವುದು ಖುಷಿ ಇದೆ. ಆದರೆ ಈ ಮೀನಿಗೆ ನಮ್ಮ ಗ್ರಾಹಕರಲ್ಲಿ ಬೇಡಿಕೆ ಕಡಿಮೆ ಇದೆ. ಈ ಭಾಗದಲ್ಲಿ ಯಾರೂ ಮೀನು ತಿನ್ನುವುದಿಲ್ಲ. ಹೀಗಾಗಿ ಕೇರಳದಲ್ಲಿ ಮಾರಲು ನಿರ್ಧಾರ ಮಾಡಿದ್ದೇವೆ," ಅಂತಾ ಲುಕ್ಮಾನ್ ಹೇಳಿದ್ದಾರೆ.

Recommended Video

ಮೋದಿ ಭೇಟಿ ಸುದ್ದಿ ತಿಳಿದು ವಿಡಿಯೋ ರಿಲೀಸ್ ಮಾಡಿ ಪ್ರಿಯಾಂಕಾ ಗಾಂಧಿ ಹೇಳಿದ್ದೇನು? | Oneindia Kannada

English summary
About 20 nautical miles from Malpe harbor in Udupi district, a rare bou mouth guitar shark fish has fallen into a trap.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X