ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ: ಶಿರೂರು ಶ್ರೀಗಳ ಸಾವಿನ ಹಿಂದೆ ಲ್ಯಾಂಡ್ ಮಾಫಿಯಾ?

|
Google Oneindia Kannada News

ಉಡುಪಿ, ಜುಲೈ 20: ನಿನ್ನೆ ವಿಧಿವಶರಾದ ಶಿರೂರು ಶ್ರೀ ಗಳ ಅಕಾಲಿಕ ಸಾವು ಹಲವಾರು ಸಂಶಯಗಳಿಗೆ, ಊಹಾಪೋಹ ಹರಡಲು ಕಾರಣವಾಗಿದೆ. ಶ್ರೀರೂರು ಶ್ರೀ ಗಳ ಪೂರ್ವಾಶ್ರಮದ ಸೋದರ ಪ. ಲಾತವ್ಯ ಆಚಾರ್ಯ ಇದೊಂದು ವಿಷಪ್ರಾಶನ ಪ್ರಕರಣ ಎಂದು ಆರೋಪಿಸಿದ್ದಾರೆ. ಈ ಕುರಿತು ಹಿರಿಯಡ್ಕ ಠಾಣೆಯಲ್ಲೂ ಪ್ರಕರಣ ದಾಖಲಿಸಲಾಗಿದೆ.

ಆದರೆ ಈ ನಡುವೆ ಶಿರೂರು ಶ್ರೀಗಳ ಅಕಾಲಿಕ ನಿಧನ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರಕಿದೆ. ಶ್ರೀ ಗಳ ನಿಧನದ ರಹಸ್ಯ ಬಿಚ್ಚಿಟ್ಟ ಶ್ರೀಗಳ ಆಪ್ತರೋರ್ವರು ಶಿರೂರು ಶ್ರೀ ಗಳ ನಿಧನದ ರಹಸ್ಯ ಬಿಚ್ಚಿಟ್ಟಿದ್ದಾರೆ.

ಮದ್ಯ, ಮಾನಿನಿ ಪೈಕಿ ಶೀರೂರು ಶ್ರೀ ಪ್ರಾಣ ತೆಗೆದದ್ದು ಯಾವುದು?ಮದ್ಯ, ಮಾನಿನಿ ಪೈಕಿ ಶೀರೂರು ಶ್ರೀ ಪ್ರಾಣ ತೆಗೆದದ್ದು ಯಾವುದು?

ಶ್ರೀಗಳ ಆಪ್ತರೋರ್ವ ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ್ದು, ಈ ಹಿನ್ನೆಲೆಯಲ್ಲಿ ಶಿರೂರು ಶ್ರೀ ಗಳ ಅಸಹಜ ಸಾವಿನ ಹಿಂದೆ ಲ್ಯಾಂಡ್ ಮಾಫಿಯಾ ಇದೆಯಾ ಎಂಬ ಸಂಶಯ ಮೂಡಲಾರಂಭಿಸಿದೆ.

A new twist has been obtained in the death of Shiruru Shri

ಶಿರೂರು ಶ್ರೀ ಗಳ ಸಾವಿನ ಹಿಂದೆ ಮಠಕ್ಕೆ ಸೇರಿದ 500 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಕಾರಣವೇ ಎಂಬ ಪ್ರಶ್ನೆ ಮೂಡಿದೆ. ಸೋದೆ ಮಠದದೊಂದಿಗೆ ಸಂಬಂಧವಿರುವ ಲ್ಯಾಂಡ್ ಮಾಫಿಯಾದ ಶ್ರೀಗಳ ಸಾವಿನಲ್ಲಿ ಕೈವಾಡವಿದೆ ಎಂದು ಆರೋಪಗಳು ಕೇಳಿಬರುತ್ತಿವೆ.

ಸೋದೆ ಮಠ, ಶಿರೂರು ಮಠದ ದ್ವಂದ್ವ ಮಠವಾಗಿದ್ದು ಶಿರೂರು ಶ್ರೀ ಲಕ್ಷ್ಮಿವರ ತೀರ್ಥ ಸ್ವಾಮೀಜಿ ಅವರ ನಿಧನದ ಬಳಿಕ ಆಸ್ತಿಯನ್ನು ಸೋದೆ ಮಠದ ವಶಕ್ಕೆ ಪಡೆಯುವ ಹುನ್ನಾರ ? ಎಂದು ಆರೋಪಿಸಲಾಗಿದೆ.

ಮಗನಿಗೆ ಯತಿ ದೀಕ್ಷೆಯಿಂದ ಮಾಲ್ ನಿರ್ಮಾಣ ತನಕ ಶೀರೂರು ಶ್ರೀ ವಿವಾದಗಳುಮಗನಿಗೆ ಯತಿ ದೀಕ್ಷೆಯಿಂದ ಮಾಲ್ ನಿರ್ಮಾಣ ತನಕ ಶೀರೂರು ಶ್ರೀ ವಿವಾದಗಳು

ಮಠದ ದೇವರ ಮೇಲೆ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣವಿದ್ದು, ಇತ್ತೀಚೆಗೆ ಬಂದ ಚಿನ್ನಾಭರಣದ ಬಗ್ಗೆ ಲೆಕ್ಕ ವಿವರಿಸಲಾಗಿಲ್ಲ. ಈ ಹಿನ್ನೆಲೆಯಲ್ಲಿ ಮಠದ ಆಸ್ತಿ ಅರ್ಹರಿಗೆ ಸಲ್ಲಬೇಕೆ ಹೊರತು ಹೊರಗಿನ ಅರ್ಚಕರನ್ನು ನೇಮಿಸುವುದಕ್ಕೆ ತಡೆ ನೀಡಬೇಕಿದೆ ಎಂದು ಶ್ರೀಗಳ ಆಪ್ತ ಮೋಹನ್ ಆಗ್ರಹಿಸಿದ್ದಾರೆ.

ಇದನ್ನು ಬೇರೆಯವರು ವಶಪಡಿಸಿಕೊಳ್ಳುವ ಪ್ರಯತ್ನವನ್ನು ಸರಕಾರ ತಡೆಯಬೇಕು ಹಾಗು ಶ್ರೀಗಳ ಸಾವಿನ ನಿಷ್ಪಕ್ಷಪಾತ ತನಿಖೆಗೆ ಆಗಬೇಕು ಎಂದು ಆತ ಆಗ್ರಹಿಸಿದ್ದಾನೆ.

English summary
A new twist has been obtained in the death of Shiruru Mutt seer Lakshmivara Theertha Swamiji. Close relative of Shiruru Shri has reveled the secret.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X