• search
 • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಂಡೆಗೆ ಡಿಕ್ಕಿ ಹೊಡೆದ ಮೀನುಗಾರಿಕಾ ಬೋಟ್: 7 ಮೀನುಗಾರರು ಪಾರು

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಆಗಸ್ಟ್ 24: ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ ಬೋಟ್ ಸಮುದ್ರದಲ್ಲಿ ಬಂಡೆಗೆ ಡಿಕ್ಕಿ ಹೊಡೆದು ಸಂಪೂರ್ಣ ಹಾನಿಗೊಳಗಾಗಿದ್ದು, 7 ಮೀನುಗಾರರು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.

   ತಮ್ಮನ ಅರ್ಹತೆ ಬಗ್ಗೆ ಮಾತನಾಡಿದ Priyanka Vadra... | Oneindia Kannada

   ಮಲ್ಪೆಯಿಂದ ಮೂರು ನಾಟಿಕಲ್ ಮೈಲಿ ದೂರದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಉದ್ಯಾವರದ ನಿವಾಸಿ ಗಿರೀಶ್ ಸುವರ್ಣ ಎಂಬುವವರಿಗೆ ಸೇರಿದ ಬಾಹುಬಲಿ ಹೆಸರಿನ ಬೋಟ್ ಇದಾಗಿದೆ.

   ಉಡುಪಿ ನಾಡದೋಣಿ ದುರಂತ: ಎಲ್ಲ ನಾಲ್ವರು ಮೀನುಗಾರರ ಶವ ಪತ್ತೆಉಡುಪಿ ನಾಡದೋಣಿ ದುರಂತ: ಎಲ್ಲ ನಾಲ್ವರು ಮೀನುಗಾರರ ಶವ ಪತ್ತೆ

   ಅವಘಡದಿಂದ ಎಂಬತ್ತು ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜು ಮಾಡಲಾಗಿದೆ. ದುರ್ಘಟನೆಯಲ್ಲಿ ಏಳು ಮಂದಿ ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

   ಅಂದಹಾಗೆ, ಕೆಲದಿನಗಳ ಹಿಂದೆ ಬೈಂದೂರು ತಾಲೂಕಿನ ಕೊಡೇರಿಯಲ್ಲಿ ನಾಡದೋಣಿಯೊಂದು ಬಂಡೆಗೆ ಡಿಕ್ಕಿ ಹೊಡೆದು ನಾಲ್ವರು ಮೀನುಗಾರರು ಸಾವನ್ನಪ್ಪಿದ ದುರಂತ ಹಸಿಯಾಗಿರುವಾಗಲೇ ಮಲ್ಪೆಯಲ್ಲೂ ಅಂತಹದ್ದೇ ಘಟನೆ ನಡೆದಿದೆ.

   ಅದೃಷ್ಟವಶಾತ್ ಇಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಅವಘಡ ಸಂಭವಿಸಿದ ತಕ್ಷಣ ಮೀನುಗಾರರು ಸಮುದ್ರಕ್ಕೆ ಜಿಗಿದು ಈಜಿ ದಡ ಸೇರುವಲ್ಲಿ ಸಫಲರಾದರು. ಇದರಲ್ಲಿ ಏಳು ಮಂದಿ ಮೀನುಗಾರರಿದ್ದರು ಎನ್ನಲಾಗಿದೆ.

   English summary
   The boat, which went from Malpe to deep sea fishing, crashed into a rock in the sea and damaged boat.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X