ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲ್ಪೆ ಮೀನುಗಾರರ ಬಲೆಗೆ 750 ಕೆ.ಜಿ ತೂಕದ ಫಿಶ್

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಅಕ್ಟೋಬರ್ 21: ಉಡುಪಿ ಜಿಲ್ಲೆ ಮಲ್ಪೆಯ ಸರ್ವ ಋತು ಬಂದರಿನಲ್ಲಿ ಆಗಾಗ ಅಪರೂಪದ ಮೀನುಗಳು ಬಲೆಗೆ ಬೀಳುವುದುಂಟು. ಕೆಲವೊಮ್ಮೆ ಭಾರೀ ಗಾತ್ರದ ಮೀನುಗಳು ಬಲೆಗೆ ಬಿದ್ದರೆ, ಇನ್ನು ಕೆಲವೊಮ್ಮೆ ಅಪರೂಪದ, ವಿಚಿತ್ರ ಮೀನುಗಳು ಸಿಕ್ಕಿ ಗಮನ ಸೆಳೆಯುತ್ತವೆ.

ಆದರೆ ಮಲ್ಪೆ ಮೀನುಗಾರರಿಗೆ ಬುಧವಾರ ಸಿಕ್ಕ ಮೀನು ಮಾತ್ರ ಬಲು ಅಪರೂಪವಾಗಿದ್ದು ಮಾತ್ರವಲ್ಲ, ಗಾತ್ರದಲ್ಲೂ ದಾಖಲೆ ನಿರ್ಮಿಸಿದೆ. ಈ ಮೀನನ್ನು ಕರಾವಳಿಗರು ತೊರಕೆ ಮೀನು ಎನ್ನುತ್ತಾರೆ. ಬಹಳ ರುಚಿಯಾದ ಮೀನಿದು, ಇಂದು ಸಿಕ್ಕಿದ ಮೀನು ಬರೋಬ್ಬರಿ ಏಳುನೂರಾ ಐವತ್ತು ಕೆ.ಜಿಯದ್ದಾಗಿದೆ.

Udupi: 750kg Weight Fish Fund To Malpe Fishermen

ಮಲ್ಪೆಯ ನಾಗಸಿದ್ದಿ ಎಂಬ ಹೆಸರಿನ ಬೋಟ್ ನವರಿಗೆ ಈ ಮೀನು ದೊರೆತಿದ್ದು, ಇದರ ತೂಕ ಬರೋಬ್ಬರಿ 750 ಕೆ.ಜಿ ಇತ್ತು. ಹೀಗಾಗಿ ಕ್ರೇನ್ ಮೂಲಕ ಮೀನನ್ನು ಮೇಲೆತ್ತಲಾಯಿತು. ಇತ್ತೀಚಿನ ವರ್ಷಗಳಲ್ಲಿ ಬಲೆಗೆ ಬಿದ್ದ ಅತಿ ದೊಡ್ಡ ತೊರಕೆ ಮೀನು ಇದಾಗಿದೆ.

Udupi: 750kg Weight Fish Fund To Malpe Fishermen

Recommended Video

ಪರಿಹಾರ ಕೊಡ್ತಾರಾ?? ನೋಡ್ಕೊಂಡು ಸುಮ್ನೆ ಹೋಗ್ತಾರಾ?? | Oneindia Kannada

ಇದನ್ನು ನೋಡಲು ಮಲ್ಪೆ ಬಂದರಿಗೆ ಮೀನು ಪ್ರಿಯರು ಭಾರೀ ಸಂಖ್ಯೆಯಲ್ಲಿ ಲಗ್ಗೆ ಹಾಕಿದರು. ಈ ಹಿಂದೆಯೂ ಮಲ್ಪೆಯಲ್ಲಿ ಮೀನುಗಾರರ ಬಲೆಗೆ ಬಲು ಅಪರೂಪದ ಉದ್ದನೆಯ ಮೀನು ಸಿಕ್ಕಿತ್ತು.

English summary
Mulpe fishermen find on Wednesday not only got rare fish but also set in record for size.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X