ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಬೈಂದೂರು-ಕಾಲು ಸಂಕದಲ್ಲಿ ಜಾರಿ ಬಿದ್ದು ಹೊಳೆ ಪಾಲಾದ ವಿದ್ಯಾರ್ಥಿನಿ

By ಉಡುಪಿ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಆಗಸ್ಟ್ 8: ಶಾಲೆ ಬಿಟ್ಟ ನಂತರ ಮನೆಗೆ ತೆರಳುತ್ತಿದ್ದ ವೇಳೆಯಲ್ಲಿ ಕಾಲು ಸಂಕದಿಂದ ಜಾರಿ ಬಿದ್ದು ಎರಡನೇ ತರಗತಿ ವಿದ್ಯಾರ್ಥಿನಿ, ನೀರು ಪಾಲಾದ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನ ಕಾಲ್ತೋಡು ಗ್ರಾಮದ ಬೀಜಮಕ್ಕಿ ಎಂಬಲ್ಲಿ ನಡೆದಿದೆ.

ಕಾಲ್ತೋಡಿನ ಬೊಳಂಬಳ್ಳಿಯ ಮಕ್ಕಿಮನೆ ಮನೆ ನಿವಾಸಿ ಪ್ರದೀಪ್ ಪೂಜಾರಿ ಹಾಗೂ ಸುಮಿತ್ರಾ ಅವರ ಪುತ್ರಿ ಸನ್ನಿಧಿ (7) ನೀರು ಪಾಲಾದ ಬಾಲಕಿ. ಶಾಲೆ ಬಿಟ್ಟ ಬಳಿಕ ಮನೆಗೆ ಬರುತ್ತಿದ್ದ ವೇಳೆಯಲ್ಲಿ‌ ಬೀಜಮಕ್ಕಿ ಎಂಬಲ್ಲಿ ಹರಿಯುವ ಹೊಳೆಗೆ ಹಾಕಲಾಗಿದ್ದ ಕಾಲು ಸಂಕದಲ್ಲಿ ಬಾಲಕಿ ಸನ್ನಿಧಿ ಮತ್ತು ಆಕೆಯ ಸ್ನೇಹಿತರು ಹೊಳೆದಾಟುತ್ತಿದ್ದ ಸಂದರ್ಭದಲ್ಲಿ ಸನ್ನಿಧಿ ಕಾಲು ಜಾರಿ ಹೊಳೆಗೆ ಬಿದ್ದಿದ್ದು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾಳೆ.

ಸ್ಥಳೀಯರಿಗೆ ವಿಷಯ ತಿಳಿದು ತಕ್ಷಣ ಹುಡುಕಾಟ ಮಾಡಿದರೂ ಸನ್ನಿಧಿ ಪತ್ತೆಯಾಗಿಲ್ಲ. ಬೈಂದೂರು ಪೊಲೀಸರು,ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಹುಡುಕಾಟ ಮಾಡಿದ್ದಾರೆ. ಬಾಲಕಿ ಮನೆಗೆ ಭೇಟಿ ಕೊಟ್ಟು ಶಾಸಕ ಸುಕುಮಾರ್ ಶೆಟ್ಟಿ ಸಾಂತ್ವಾನ ಹೇಳಿದ್ದಾರೆ. ಜೊತೆಗೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ರಾಜು ಪೂಜಾರಿ, ತಹಶೀಲ್ದಾರ್ ಕಿರಣ್ ಗೋರಯ್ಯ ಸೇರಿದಂತೆ ಅಧಿಕಾರಿಗಳು ಭೇಟಿ‌ ನೀಡಿದ್ದಾರೆ.

7 Year Girl Washed Out While Crossing Wooden Bridge in Byndoor

ಸಂಜೆಯವರೆಗೆ ಅಧಿಕಾರಿಗಳು ಹುಡುಕಾಟ ಮಾಡಿದ್ದು,ಸನ್ನಿಧಿಯ ಸುಳಿವು ಪತ್ತೆಯಾಗಿಲ್ಲ. ಮಳೆ ರಭಸವಾಗಿ ಸುರಿಯುತ್ತಿರೋದರಿಂದ ಮತ್ತು ಬೆಳಕಿನ ವ್ಯವಸ್ಥೆ ಇಲ್ಲದಿರುವುರಿಂದ‌ ಸದ್ಯ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.

Recommended Video

Bengaluru Rain ಆಗಸ್ಟ್ ತಿಂಗಳಿನಲ್ಲಿ ಇಷ್ಟೊಂದು ಮಳೆ ಇತಿಹಾಸದಲ್ಲೇ ಆಗಿಲ್ಲ | OneIndia Kannada

ಬೀಜಮಕ್ಕಿ ಪ್ರದೇಶದ ಈ ಹೊಳೆಗೆ ಸೇತುವೆ ಆಗಬೇಕೆಂದು ಜನ ಸುಮಾರು ವರ್ಷಗಳಿಂದ ಸರ್ಕಾರಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೊಳೆಯ ಇನ್ನೊಂದು ಭಾಗದಲ್ಲಿ ನೂರಕ್ಕೂ ಅಧಿಕ ಕುಟುಂಬಗಳು ವಾಸವಿದ್ದು, ಮಳೆಗಾಲದಲ್ಲಿ ನೀರಿನ ಹರಿವು ಜಾಸ್ತಿ ಆದರೆ ಬೀಜಮಕ್ಕಿ ಪ್ರದೇಶ ದ್ವೀಪವಾಗುತ್ತದೆ. ಶಾಶ್ವತ ಸೇತುವೆ ನಿರ್ಮಾಣಕ್ಕೆ ಜನರು ಮನವಿಗಳ ಮೇಲೆ‌ ಮನವಿ ನೀಡಿದರೂ ಯಾವುದೇ ಪ್ರಯೋಜನ ವಾಗದ ಹಿನ್ನಲೆಯಲ್ಲಿ ಜನರೇ ತಾತ್ಕಾಲಿಕ ವಾಗಿ ಕಾಲು ಸಂಕ ನಿರ್ಮಾಣ ಮಾಡಿದ್ದರು.

English summary
A 7-year-old girl, who studied in 2nd standard was washed away while trying to cross the wooden bridge in Byndoor, Udupi district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X