ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ: 32 ಅಡಿ ಎತ್ತರದ ಮಧ್ವಾಚಾರ್ಯರ ಏಕಶಿಲಾ ಪ್ರತಿಮೆ ಸ್ಥಾಪನೆ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮಾರ್ಚ್. 29 : ಉಡುಪಿ ಸಮೀಪದ ಪಾಜಕದಲ್ಲಿರುವ ಕುಂಜಾರುಗಿರಿ ದುರ್ಗಾ ಬೆಟ್ಟದಲ್ಲಿ 32 ಲಕ್ಷ್ಮಣಗಳುಳ್ಳ, ಮಧ್ವಾಚಾರ್ಯರ 32 ಅಡಿ ಎತ್ತರದ ಬೃಹತ್ ಏಕಶಿಲಾ ಪ್ರತಿಮೆಯನ್ನು ಮಂಗಳವಾರ ಪ್ರತಿಷ್ಠಾಪನೆ ಮಾಡಲಾಯಿತು.

32 ಅಡಿ ಎತ್ತರದ 110 ಟನ್‌ ತೂಕವಿರುವ ಶ್ರೀ ಮಧ್ವಾಚಾರ್ಯರ ವಿಗ್ರಹವನ್ನು 40 ಅಡಿ ಎತ್ತರದ ಪಿಲ್ಲರ್ ಗಳ ಮೇಲೆ ಅಳವಡಿಸಲಾಗಿರುವ 8 ಅಡಿ ದಪ್ಪದ ಪದ್ಮ ಪೀಠದಲ್ಲಿ ಪಲಿಮಾರು ಮಠದ ವತಿಯಿಂದ ಸ್ಥಾಪಿಸಲಾಯಿತು.[ಅಖಿಲಗುಣ ಸದ್ಧಾಮ ಶ್ರೀ ಮಧ್ವಾಚಾರ್ಯರ ಜೀವನ ಹೇಗಿತ್ತು?]

32-ft statue of Madhwacharya installed at Kunjargiri in Udupi

ಮೇ 8ರಿಂದ 10ರ ವರೆಗೆ ಪಲಿಮಾರು ಶ್ರೀ ಆಚಾರ್ಯ ಮಧ್ವರ ಏಕಶಿಲಾ ವಿಗ್ರಹದ ಪ್ರತಿಷ್ಠಾ ಧಾರ್ಮಿಕ ವಿಧಿ ವಿಧಾನ ಮತ್ತು ಅಭಿಷೇಕ ಹಾಗೂ ಇತರ ಕಾರ್ಯಗಳು ನಡೆಯಲಿದೆ.

ಬಳಿಕ ಇಲ್ಲಿ ನಿತ್ಯ ಪೂಜೆ ಸಹಿತ ಭಕ್ತರಿಗೆ ಧ್ಯಾನಕ್ಕೆ ಅಗತ್ಯವಾಗಿರುವ ಆಧ್ಯಾತ್ಮಿಕ ವಾತಾವರಣ ಮೂಡಿಸುವ ಪ್ರಯತ್ನ ಮಾಡಲಾಗುವುದು ಎಂದು ವಿಗ್ರಹ ಪ್ರತಿಷ್ಠಾಪನೆಗೆ ಸಂಕಲ್ಪಿಸಿರುವ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.

English summary
A 32-foot monolith of Dwaita philosopher Sri Madhwacharya has been installed on a 40-foot high plinth at Durga Hills Kunjarugiri in Pajaka Kshetra Udupi, on Tuesday, March 28.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X