ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಾನಪದ ವಿವಿಯಲ್ಲಿ 3 ವರ್ಷದ ಯಕ್ಷಗಾನ ಡಿಪ್ಲೊಮಾ ಕೋರ್ಸ್

|
Google Oneindia Kannada News

ಉಡುಪಿ, ಮೇ 29: ಹಾವೇರಿಯಲ್ಲಿರುವ ಜಾನಪದ ವಿಶ್ವವಿದ್ಯಾನಿಲಯದಲ್ಲಿ ಈ ವರ್ಷದಿಂದ ಯಕ್ಷಗಾನ ಹಾಗೂ ಬಯಲಾಟದ ಮೂರು ವರ್ಷದ ಡಿಪ್ಲೊಮಾ ಕೋರ್ಸ್ ಆರಭಿಸಲಾಗುವುದು ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. ಇಲ್ಲಿ ನಡೆದ ತಾಳಮದ್ದಲೆ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಈ ವಿಚಾರ ತಿಳಿಸಿದರು.

ಯಕ್ಷಗಾನವು ಕನ್ನಡ ನಾಡಿನ ಸಮೃದ್ಧ ಕಲೆ. ಅದರ ಅಭಿವೃದ್ಧಿಗೆ ಇನ್ನಷ್ಟು ಶ್ರಮಿಸಬೇಕು. ಅದಕ್ಕೆ ಸಂಘ-ಸಂಸ್ಥೆಗಳು ಸಹ ಸಹಕಾರವನ್ನು ನೀಡಬೇಕು ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರೊ ಎಂಬಿ ಪುರಾಣಿಕ್, ಜಾತ್ಯತೀತತೆ ಅನ್ನೋ ಹೆಸರಿನಲ್ಲಿ ಮಹಾಭಾರತ, ರಾಮಾಯಣ, ಪಂಚತಂತ್ರದ ಕಥೆಗಳು ಪಠ್ಯದಿಂದ ಮಾಯವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.[ಯೇಸುಕ್ರಿಸ್ತರ ಜೀವನಚರಿತ್ರೆಗೆ ಯಕ್ಷಗಾನದ ಟಚ್ ನೀಡಿದ ಕೇಶವಯ್ಯಾ]

Yakshagana

ಈ ಕಾರಣಕ್ಕೆ ಮಕ್ಕಳು ಪುರಾಣದ ವಿಚಾರಗಳನ್ನು ತಿಳಿದುಕೊಳ್ಳುವುದರಿಂದ ವಂಚಿತರಾಗುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಮಟ್ಟಿ ಮುರಳೀಧರ ರಾವ್ ಪ್ರಶಸ್ತಿಯನ್ನು ಡಾ.ಡಿ.ಸದಾಶಿವ ಭಟ್ಟ ಹಾಗೂ ಯಕ್ಷಗಾನ ಕಲಾರಂಗ ಪ್ರಶಸ್ತಿಯನ್ನು ಡಾ.ಪಿ.ಶಾಂತರಾಮ ಪ್ರಭು ಅವರಿಗೆ ಪ್ರದಾನ ಮಾಡಲಾಯಿತು.

English summary
Yakshagana and Bayalata 3 year diploma course in Haveri Janapada VV starts from this year, said by minister Pramod Madhwaraj in Udupi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X