ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ: ದ್ವಿತೀಯ ಪಿಯುಸಿ ಪರೀಕ್ಷೆ; ಗಣಿತ ಪರೀಕ್ಷೆಗೆ ಹಾಜರಾಗದ ಹಿಜಾಬ್ ವಿದ್ಯಾರ್ಥಿನಿಯರು

|
Google Oneindia Kannada News

ಉಡುಪಿ, ಏಪ್ರಿಲ್ 23: ಉಡುಪಿಯ ಹಿಜಾಬ್ ಪರ ವಿದ್ಯಾರ್ಥಿನಿಯರು 2ನೇ ದಿನದ ಪಿಯುಸಿ ಪರೀಕ್ಷೆ ಬರೆಯಲು ಬರಲಿಲ್ಲ. ಮೊದಲನೇ ದಿನದ ವ್ಯವಹಾರ ಅಧ್ಯಯನ ವಿಷಯ ಪರೀಕ್ಷೆ ವೇಳೆ ನಡೆದ ಹೈಡ್ರಾಮಾಗಳ ನಂತರ, ಎರಡನೇ ದಿನದ ಹೈಡ್ರಾಮಕ್ಕೆ ಬ್ರೇಕ್ ಬಿದ್ದಿದೆ. ಉಡುಪಿ ಶಾಸಕ ರಘುಪತಿ ಭಟ್ ನೀಡಿದ್ದ ಎಚ್ಚರಿಕೆಗೆ, ವಿದ್ಯಾರ್ಥಿನಿಯರು ವಿದ್ಯಾರ್ಥಿನಿಯರು ಪರೀಕ್ಷಾ ಕೇಂದ್ರದತ್ತ ತಲೆಹಾಕಲಿಲ್ಲ.

ಶನಿವಾರ 2ನೇ ದಿನದ ಪಿಯುಸಿ ಪರೀಕ್ಷೆ ನಡೆದಿದ್ದು, ಉಡುಪಿಯ ಸರಕಾರಿ ಪದವಿಪೂರ್ವ ಕಾಲೇಜಿನ ಹಿಜಾಬ್ ಹೋರಾಟಗಾರ್ತಿಯರ ಪೈಕಿ ಮೂವರು ಇಂದು ಪರೀಕ್ಷೆ ಬರೆಯಬೇಕಾಗಿತ್ತು. ವಿಜ್ಞಾನ ವಿಭಾಗದ ಅಲ್ಮಾಸ್, ಹಝ್ರಾ ಶಿಫಾ, ಆಯಿಷಾ ಹಿಜಾಬ್ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ವಿದ್ಯಾರ್ಥಿನಿಯರು ಹೈಕೋರ್ಟ್ ಮೊರೆ ಹೋಗಿದ್ದರು. ಈ ಮೂವರಿಗೂ ಇಂದು ಗಣಿತ ಪರೀಕ್ಷೆ ನಿಗದಿಯಾಗಿತ್ತು.

2nd PUC Exam; ಉಡುಪಿಯಲ್ಲಿ ಹಿಜಾಬ್ ವಿದ್ಯಾರ್ಥಿನಿಯರ ಹೈಡ್ರಾಮ!2nd PUC Exam; ಉಡುಪಿಯಲ್ಲಿ ಹಿಜಾಬ್ ವಿದ್ಯಾರ್ಥಿನಿಯರ ಹೈಡ್ರಾಮ!

ಶುಕ್ರವಾರ ಹಾಲ್ ಟಿಕೆಟ್ ಪಡೆದಿದ್ದ ಅಲ್ಮಾಸ್
ನಿನ್ನೆ (ಶುಕ್ರವಾರ) ಸಂಜೆ ವೇಳೆಗೆ ಸರಕಾರಿ ಪದವಿಪೂರ್ವ ಹೆಣ್ಣುಮಕ್ಕಳ ಕಾಲೇಜಿಗೆ ಬಂದಿದ್ದ ಅಲ್ಮಾಸ್, ಹಾಲ್ ಟಿಕೆಟ್ ಪಡೆದು ಹೋಗಿದ್ದರು. ಹಾಗಾಗಿ ಗಣಿತ ಪರೀಕ್ಷೆಯನ್ನು ಬರೆಯಲು ಬರುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ ಈಕೆಯ ಜೊತೆ ಹೋರಾಟಗಾರ್ತಿಯರಾದ ಹಝ್ರಾ ಶಿಫಾ ಮತ್ತು ಆಯಿಷಾ ಹಾಲ್ ಟಿಕೆಟ್ ಪಡೆದುಕೊಂಡಿರಲಿಲ್ಲ.

2nd PUC Exam: Hijab Girls Who Do Not Attend The Mathematics Examination

ಶನಿವಾರ 10:45 ರವರೆಗೆ ಹಾಲ್ ಟಿಕೆಟ್ ಪಡೆಯುವುದಕ್ಕೆ ಅವಕಾಶ ಇತ್ತು. ಇವರು ಮತ್ತೆ ಬಂದು ಹಾಲ್ ಟಿಕೆಟ್ ಪಡೆದು ಹೈಡ್ರಾಮಾ ಮಾಡಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಈ ನಿರೀಕ್ಷೆ ಸುಳ್ಳಾಗಿದ್ದು, ಮೂವರ ಪೈಕಿ ಇಬ್ಬರು ಹಾಲ್ ಟಿಕೆಟ್ ಪಡೆಯದಿದ್ದರೆ, ಇನ್ನು ಹಾಲ್ ಟಿಕೆಟ್ ಪಡೆದ ಅಲ್ಮಾಸ್ ಕೂಡಾ ಪರೀಕ್ಷಾ ಕೇಂದ್ರಕ್ಕೆ ಬರಲಿಲ್ಲ.

ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದ ರಘುಪತಿ ಭಟ್
ಉಡುಪಿ ಶಾಸಕ ರಘುಪತಿ ಭಟ್ ಶುಕ್ರವಾರ ಹಿಜಾಬ್ ಹೋರಾಟಗಾರ್ತಿಯರಿಗೆ ಕಟುವಾದ ಮಾತುಗಳಲ್ಲಿ ಎಚ್ಚರಿಕೆ ನೀಡಿದ್ದರು. ಶನಿವಾರ ಮತ್ತೆ ಪರೀಕ್ಷಾ ಕೇಂದ್ರಕ್ಕೆ ಬಂದು ನಾಟಕ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಹೋರಾಟಗಾರ್ತಿಯರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇವೆ. ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಇದರಿಂದಾಗಿ ಏನೋ ಎಂಬಂತೆ, ಶನಿವಾರ ಹಿಜಾಬ್ ಹೋರಾಟಗಾರ್ತಿಯರು ಪರೀಕ್ಷಾ ಕೇಂದ್ರದತ್ತ ಮುಖ ಮಾಡಲಿಲ್ಲ.

2nd PUC Exam: Hijab Girls Who Do Not Attend The Mathematics Examination

ಅಲಿಯಾ ಮಾಡಿದ ಟ್ವೀಟ್‌ನಲ್ಲೇನಿದೆ?
ತನಗೆ ಮತ್ತು ರೇಶಂಗೆ ಪರೀಕ್ಷೆ ಬರೆಯಲು ಸಿಬ್ಬಂದಿಗಳು ನಿರಾಕರಿಸಿದ್ದಾರೆ. ನಾವು ಮತ್ತೆ ಮತ್ತೆ ನಿರಾಸೆಗೆ ಒಳಗಾಗುತ್ತಿದ್ದೇವೆ ಎಂದು ಶುಕ್ರವಾರ ರಾತ್ರಿ ಅಲಿಯಾ ಅಸಾದಿ ಟ್ವೀಟ್ ಮಾಡಿದ್ದಾರೆ. ನಮ್ಮ ಮೇಲೆ ಕ್ರಿಮಿನಲ್ ಕೇಸು, ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ಶಾಸಕ ರಘುಪತಿ ಭಟ್ ಬೆದರಿಕೆ ಹಾಕಿದ್ದಾರೆ. ಕ್ರಿಮಿನಲ್ ಕೇಸು ಹಾಕಲು ಇಲ್ಲಿ ಯಾವ ಅಪರಾಧ ನಡೆದಿದೆ. ನಮ್ಮ ದೇಶ ಎತ್ತ ಸಾಗುತ್ತಿದೆ? ಎಂದು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

English summary
PUC Exam 2022: Among the Pro-hijab students of Udupi government PU college, Almas, Hazra Shifa and Aisha of the science department did not attend the math Exam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X