ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯಲ್ಲಿ ಕೊರೊನಾ ವೈರಸ್ ಮಹಾಸ್ಪೋಟ: 76ಕ್ಕೆ ಏರಿಕೆ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮೇ 24: ಕರಾವಳಿ ಜಿಲ್ಲೆ ಉಡುಪಿ ಜಿಲ್ಲೆಯಲ್ಲಿ ಇಂದು ಮೂವರು ಪೊಲೀಸರು ಸೇರಿದಂತೆ 23 ಜನರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಆರೋಗ್ಯ ಇಲಾಖೆಯು ಈ ಮಾಹಿತಿಯನ್ನು ಬಿಡುಗಡೆ ಮಾಡಿದೆ.

Recommended Video

ಲಾಕ್ ಡೌನ್ ನಲ್ಲಿ ಮಧುಮೇಹ ರೋಗಿಗಳ ಆರೋಗ್ಯ ಅಪಾಯದಲ್ಲಿ!! | Exercise is must in Lockdown | Oneindia Kannada

ದುಬೈ, ತೆಲಂಗಾಣ ಮತ್ತು ಮಹಾರಾಷ್ಟ್ರದಿಂದ ಬಂದ 23 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಕ್ವಾರಂಟೈನ್ ನಲ್ಲಿದ್ದವರೆಲ್ಲರಿಗೂ ಕೊರೊನಾ ಸೋಂಕು ಧೃಡವಾಗಿದೆ.

ಕರಾವಳಿ ಜಿಲ್ಲೆಗಳ ಮಸೀದಿಗಳಲ್ಲಿ ಸಾಮೂಹಿಕ ನಮಾಜ್ ಇಲ್ಲಕರಾವಳಿ ಜಿಲ್ಲೆಗಳ ಮಸೀದಿಗಳಲ್ಲಿ ಸಾಮೂಹಿಕ ನಮಾಜ್ ಇಲ್ಲ

ಕಂಟೈನ್ಮೆಂಟ್ ವಲಯ ಸಂಪರ್ಕ ಮಾಡಿದ್ದ ಮೂವರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ಸಂಪರ್ಕ ಮಾಹಿತಿ ಇಲ್ಲದ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ.

18 New Coronavirus Infection Cases Detected In Udupi Today

3 ಪೊಲೀಸರು ಸೇರಿದಂತೆ 3 ಮಕ್ಕಳು, 8 ಮಹಿಳೆಯರು, 9 ಪುರುಷರಿಗೆ ಕೊರೊನಾ ವೈರಸ್ ಬಂದಿದ್ದು, ಹಂತ ಹಂತವಾಗಿ ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.

ಉಡುಪಿಯಲ್ಲಿ ಒಟ್ಟು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 76ಕ್ಕೆ ಏರಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುಧೀರ್ ಚಂದ್ರ ಸೂಡಾ ಮಾಹಿತಿ ನೀಡಿದ್ದಾರೆ.

ಉಡುಪಿಯಲ್ಲಿ ಕಾರ್ಕಳ ಗ್ರಾಮಾಂತರ, ಅಜೆಕಾರು , ಬ್ರಹ್ಮಾವರ ಪೊಲೀಸರಿಗೆ ಕೊರೊನಾ ವೈರಸ್ ದೃಢಪಟ್ಟಿರುವುದರಿಂದ ಮೂರು ಠಾಣೆಯ ಎಲ್ಲಾ ಪೊಲೀಸರಿಗೂ ಕ್ವಾರಂಟೈನ್ ಮಾಡಲಾಗಿದೆ.

ಪೊಲೀಸ್ ಠಾಣೆಗಳಿಗೆ ಸಂಪೂರ್ಣ ಸ್ಯಾನಿಟೈಸರ್ ಸಿಂಪಡಣೆ ಮಾಡಲು ನಿರ್ಧಾರ ಮಾಡಲಾಗಿದ್ದು, ಎರಡು ದಿನಗಳ ನಂತರ ಮತ್ತೆ ಠಾಣೆ ಕಾರ್ಯಾರಂಭವಾಗುತ್ತದೆ.

ಮೂವರು ಕೊರೊನಾ ಸೋಂಕಿತರ ಸಂಪರ್ಕ ಮಾಡಿರುವವರ ಪಟ್ಟಿ ತಯಾರಿಸುತ್ತಿದ್ದೇವೆ, ಕೊರೊನಾ ಸಂಪರ್ಕದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಉಡುಪಿ ಎಸ್ಪಿ ವಿಷ್ಣುವರ್ಧನ್ ಮಾಹಿತಿ ನೀಡಿದ್ದಾರೆ.

English summary
18 New Coronavirus infection Reported in Udupi district, Health Department has released this information Today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X