ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಗೆ ಶಾಕಿಂಗ್ ಸುದ್ದಿ: ಇಂದು 210 ಕೊರೊನಾ ಸೋಂಕು ಪತ್ತೆ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜೂನ್ 2: ಉಡುಪಿ ಜಿಲ್ಲೆಯಲ್ಲಿ ಇಂದು ದಾಖಲೆ ಪ್ರಮಾಣದ 210 ಹೊಸ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಸೋಮವಾರ 73 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದ್ದವು. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಈಗ 470 ಕ್ಕೆ ಏರಿದಂತಾಗಿದೆ.

Recommended Video

ಕೊರೊನಾವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಹೊಸ ರೀತಿಯಲ್ಲಿ ವಾಖ್ಯಾನಿಸಿದ್ದಾರೆ | Oneindia Kannada

ಈ ಹಿನ್ನೆಲೆಯಲ್ಲಿ ಕುಂದಾಪುರದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಕ್ವಾರಂಟೈನ್ ನಿಯಮ ಉಲ್ಲಂಘಿಸಿದವರಿಗೆ ಕಠಿಣ ಎಚ್ಚರಿಕೆ ನೀಡಿದ್ದು, ಕ್ವಾರಂಟೈನ್ ನಲ್ಲಿರುವವರು, ಸೀಲ್ ಡೌನ್ ಆದ ಪ್ರದೇಶದವರು ಮತ್ತು ಕಂಟೈನ್ಮೆಂಟ್ ವಲಯದಲ್ಲಿರುವವರು ಯಾರೂ ಹೊರ ಹೋಗಬಾರದು, ಒಳ ಬರಬಾರದು. ಒಂದು ವೇಳೆ ಸುತ್ತಾಡುವುದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಉಡುಪಿಯಲ್ಲಿ ಮತ್ತೆ ನಾಲ್ವರು ಪೊಲೀಸರಿಗೆ ಕೊರೊನಾ ಸೋಂಕು!ಉಡುಪಿಯಲ್ಲಿ ಮತ್ತೆ ನಾಲ್ವರು ಪೊಲೀಸರಿಗೆ ಕೊರೊನಾ ಸೋಂಕು!

ಉಡುಪಿಯಲ್ಲಿ ಪಾಸಿಟಿವ್ ಪ್ರಕರಣ ಹೆಚ್ಚುತ್ತಲೇ ಇದೆ. ಹೋಮ್ ಕ್ವಾರಂಟೈನ್ ನಲ್ಲಿರುವವರು ನಿಯಮ ಪಾಲನೆ ಮಾಡಲೇಬೇಕು. ಈಗ ಹೊರ ರಾಜ್ಯದಿಂದ ಬಂದವರ ಟೆಸ್ಟ್ ವರದಿ ಒಮ್ಮೆಲೇ ಬರುತ್ತಿದೆ. ಹೀಗಾಗಿ ನೆಗೆಟಿವ್ ಬರುವ ತನಕ ಸಂಬಂಧಪಟ್ಟವರು ಹೊರ ಹೋಗಬಾರದು ಎಂದು ತಿಳಿಸಿದರು.

210 New Coronavirus Infection Reported In Udupi On Tuesday

ಹೊರ ರಾಜ್ಯ ಹಾಗೂ ಹೊರ ದೇಶಗಳಿಂದ ಬಂದವರು ಹೊರಗೆ ಸುತ್ತಾಡಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ. ಪ್ರಾರಂಭದಲ್ಲಿ ಉಡುಪಿ ಜಿಲ್ಲೆಯಲ್ಲಿ ಕೇವಲ ಮೂವರಿಗೆ ಸೋಂಕು ತಗುಲಿತ್ತು. ಬಳಿಕ ಅವರು ಗುಣಮುಖರಾಗಿದ್ದರು. ಆದರೆ ಮಹಾರಾಷ್ಟ್ರ ಸಹಿತ ಬೇರೆ ರಾಜ್ಯ ಮತ್ತು ಹೊರ ದೇಶಗಳಿಂದ ಜಿಲ್ಲೆಗೆ ಜನ ಬಂದ ಮೇಲೆ ಇಲ್ಲಿಯ ಚಿತ್ರಣವೇ ಬದಲಾಗಿದೆ ಎಂದರು.

English summary
A total of 210 new coronavirus positive cases have been registered in Udupi district on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X