ದಂಡ ಹಾಕಿದ್ರು ಬೈಕ್ ಚಾಲನೆ; 15 ವರ್ಷದ ಬಾಲಕ ಸಾವು
ಉಡುಪಿ, ಫೆಬ್ರವರಿ 11: ಬೈಕ್ ಓಡಿಸಿದ್ದರೆ ಪೊಲೀಸರು ದಂಡ ಹಾಕಿದರೂ ಮತ್ತೆ ಬೈಕ್ ಚಲಾಯಿಸಿದ 15 ವರ್ಷದ ಬಾಲಕ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಅರಾನ್ (15) ಮೃತಪಟ್ಟ ಬೈಕ್ ಸವಾರ. ಉಡುಪಿ ಜಿಲ್ಲೆಯ ಕುಂದಾಪುರದ ಶಿರೂರು ಅಳ್ವೆಗದ್ದೆ ಕ್ರಾಸ್ ಬಳಿ ಅತೀ ವೇಗದಿಂದ ಬೈಕ್ ಚಲಾಯಿಸಿದ ಅರಾನ್ ಡಿವೈಡರ್ಗೆ ಡಿಕ್ಕಿ ಹೊಡೆದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗುರುವಾರ ಮುಂಜಾನೆ ಈ ಘಟನೆ ನಡೆದಿದೆ.
ದಾವಣಗೆರೆ To ಧಾರವಾಡ: ರಸ್ತೆ ಅಪಘಾತ ತಡೆಯಲು ಹೊರಟ ಜಾಗೃತಿ ಜಾಥಾ
ಅರಾನ್ ಹಡವಿನಕೋಣೆ ನಿವಾಸಿ. ಪಾಲಕರಿಗೆ ಒಬ್ಬನೇ ಮಗನಾಗಿದ್ದಾನೆ. ಕಳೆದ ವಾರ ಪೊಲೀಸರು ಈತ ಚಾಲನಾ ಪರವಾನಗಿ ಇಲ್ಲದೆ ಬೈಕ್ ಚಲಾಯಿಸುತ್ತಿದ್ದ ವೇಳೆ ಪತ್ತೆ ಹಚ್ಚಿದ್ದರು, ದಂಡವನ್ನು ಕೂಡ ಹಾಕಿದ್ದರು.
ಭದ್ರಾವತಿಯ ಪ್ರಮುಖ ರಸ್ತೆ, ಸರ್ಕಲ್ಗಳ ಅಗಲೀಕರಣ
ಆದರೂ ಬೈಕ್ ಓಡಿಸಲು ಆರಂಭಿಸಿದ್ದ ಅರಾನ್ ಗುರುವಾರ ಮುಂಜಾನೆ ಅತೀ ವೇಗದಿಂದ ಬೈಕ್ ಚಲಾಯಿಸಿಕೊಂಡು ಬಂದು ಡಿವೈಡರ್ಗೆ ಡಿಕ್ಕಿ ಹೊಡೆದಿದ್ದಾನೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.