ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರ್ಕಳ; ಮಂಗಗಳಿಗೆ ವಿಷವುಣಿಸಿ ಬೀದಿಬದಿ ಎಸೆದು ಹೋದ ದುಷ್ಕರ್ಮಿಗಳು

By ಉಡುಪಿ ಪ್ರತಿನಿಧಿ
|
Google Oneindia Kannada News

ಮಂಗಳೂರು, ಅಕ್ಟೋಬರ್ 21: ಮಾರುತಿ ಓಮ್ನಿ ಕಾರಿನಲ್ಲಿ ಬಂದ ಗುಂಪೊಂದು ವಿಷವುಣಿಸಿದ ಸುಮಾರು 15 ಮಂಗಗಳನ್ನು ಎಸೆದು ಹೋಗಿರುವ ಘಟನೆ ಕಾರ್ಕಳದ ಕಾಂತಾವರದ ಬಾರಾಡಿ ಕಂಬಳ ರಸ್ತೆಯಲ್ಲಿ ನಡೆದಿದೆ.

ಅ.20, ಮಂಗಳವಾರ ರಾತ್ರಿ ಏಳು ಗಂಟೆ ಸುಮಾರಿಗೆ ಈ ಮಂಗಗಳನ್ನು ತಂದು ಬಿಸಾಡಿ ಹೋಗಿದ್ದಾರೆ. ಸ್ಥಳದಲ್ಲಿ 3 ಮಂಗಗಳು ಸಾವನ್ನಪ್ಪಿದ್ದವು. ಉಳಿದ ಮಂಗಗಳು ಅರೆಪ್ರಜ್ಞಾ ಸ್ಥಿತಿಯಲ್ಲಿ ಒದ್ದಾಡುತ್ತಿದ್ದವು.

ಶಿವಮೊಗ್ಗ: 36 ಮಂಗಗಳಿಗೆ ವಿಷ ಹಾಕಿ ಕೊಂದ ಐವರ ಬಂಧನಶಿವಮೊಗ್ಗ: 36 ಮಂಗಗಳಿಗೆ ವಿಷ ಹಾಕಿ ಕೊಂದ ಐವರ ಬಂಧನ

ತೋಟದಲ್ಲಿ ದುಷ್ಕರ್ಮಿಗಳು ಉದ್ದೇಶ ಪೂರ್ವಕವಾಗಿ ಮಂಗಗಳಿಗೆ ವಿಷವಿಟ್ಟಿದ್ದು, ಅವುಗಳು ವಿಷ ತಿಂದ ನಂತರ ಕಾರಿನಲ್ಲಿ ತುಂಬಿಸಿಕೊಂಡು ಬಂದು ಬಾರಾಡಿ ಕಂಬಳದ ನಿರ್ಜನ ಪ್ರದೇಶದಲ್ಲಿ ಎಸೆದುಹೋಗಿದ್ದಾರೆ ಎಂದು ತಿಳಿದುಬಂದಿದೆ. ಬಾರಾಡಿ ಫ್ರೆಂಡ್ಸ್ ಸದಸ್ಯರು ಈ ಕುರಿತು ಅರಣ್ಯ ಇಲಾಖಾಧಿಕಾರಿಗಳ ಗಮನಕ್ಕೆ ವಿಷಯ ತಂದಿದ್ದಾರೆ. ಅರಣ್ಯ ಇಲಾಖಾ ತಂಡ ಘಟನಾ ಸ್ಥಳಕ್ಕೆ ಬಂದು ಮಾಹಿತಿ ಕಲೆಹಾಕಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಮಂಗಗಳನ್ನು ಚಿಕಿತ್ಸೆಗೆ ತೆಗೆದುಕೊಂಡು ಹೋಗಿದ್ದಾರೆ.

Udupi: 15 Monkeys Poisoned And Threw On Roadside At Karkala

Recommended Video

ಇದನ್ನು ಬಳಸಿ corona ಇಂದ ದೂರ ಇರಿ | Oneindia Kannada

ಕೆಲವೇ ದಿನಗಳ ಹಿಂದೆ ಶಿವಮೊಗ್ಗ ಜಿಲ್ಲೆಯಲ್ಲೂ ಇದೇ ರೀತಿ ಘಟನೆ ನಡೆದಿತ್ತು. ತಾವು ಬೆಳೆದ ಬೆಳೆಗಳಿಗೆ ದಾಳಿ ಮಾಡಿ ನಾಶ ಮಾಡುತ್ತಿದ್ದವು ಎಂಬ ಕಾರಣಕ್ಕೆ 36 ಮಂಗಗಳಿಗೆ ವಿಷ ಹಾಕಿ ಕೊಂದು ಕಾಡಿನಲ್ಲಿ ಅವುಗಳನ್ನು ಬಿಸಾಡಲು ಬಂದಾಗ ಅರಣ್ಯ ಇಲಾಖೆಯವರು ಐದು ಜನರನ್ನು ಬಂಧಿಸಿದ್ದರು.

English summary
15 monkeys were poisoned and threw on roadside at kantavara baradi road at karkala in udupi district,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X