ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೂಪರ್ ಸ್ಪ್ರೆಡರ್ ಆದ ಗ್ಯಾಂಗ್ರಿನ್ ರೋಗಿ; ಉಡುಪಿ ಅಜ್ಜರಕಾಡು ಆಸ್ಪತ್ರೆಯ 14 ಮಂದಿಗೆ ಸೋಂಕು

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜುಲೈ 16: ಗ್ಯಾಂಗ್ರಿನ್ ಸಮಸ್ಯೆಗೆಂದು ದಾಖಲಾಗಿದ್ದ ರೋಗಿಯಿಂದ ಉಡುಪಿಯ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಯಲ್ಲಿದ್ದವರಿಗೂ ಕೊರೊನಾ ಸೋಂಕು ತಗುಲಿದೆ.

Recommended Video

3 ತಿಂಗಳ ಬಳಿಕ ತಾಯ್ನಾಡಿಗೆ ಬಂದಿಳಿದ ಕರ್ನಾಟಕದ ವಿದ್ಯಾರ್ಥಿಗಳು | Oneindia Kannada

ಅಜ್ಜರಕಾಡು ಆಸ್ಪತ್ರೆಯ ವೈದ್ಯರು, ರೋಗಿಗಳು, ಸಿಬ್ಬಂದಿ ಸೇರಿ ಒಟ್ಟು 14 ಮಂದಿಗೆ ಈ ರೋಗಿಯಿಂದ ಸೋಂಕು ತಗುಲಿದೆ. ಗ್ಯಾಂಗ್ರಿನ್ ಸಮಸ್ಯೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಈ ವ್ಯಕ್ತಿಗೆ ಶಸ್ತ್ರಚಿಕಿತ್ಸೆಯ ನಂತರ ಜ್ವರ ಕಾಣಿಸಿಕೊಂಡಿತ್ತು. ನಂತರ ಈತನಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಮೆಹಂದಿ ಎಫೆಕ್ಟ್: ವಧುವಿನ ಒಂದೇ ಕುಟುಂಬದ 7 ಮಂದಿಗೆ ಕೊರೊನಾ ಸೋಂಕುಮೆಹಂದಿ ಎಫೆಕ್ಟ್: ವಧುವಿನ ಒಂದೇ ಕುಟುಂಬದ 7 ಮಂದಿಗೆ ಕೊರೊನಾ ಸೋಂಕು

ಇದೀಗ ಈತ ದಾಖಲಾಗಿದ್ದ ವಾರ್ಡ್ ನಲ್ಲಿದ್ದ 9 ರೋಗಿಗಳಿಗೂ ಸೋಂಕು ಬಂದಿದೆ. ಚಿಕಿತ್ಸೆ ನೀಡಿದ ಇಬ್ಬರು ವೈದ್ಯರು, ಓರ್ವ ನರ್ಸ್ ಹಗೂ ವಾರ್ಡ್ ‌ನಲ್ಲಿ ಸ್ವಚ್ಛತಾ ಕೆಲಸ ಮಾಡಿದ ಸಿಬ್ಬಂದಿ, ಕುಕ್ ಗೂ ಕೊರೊನಾ ಸೋಂಕು ತಗುಲಿದೆ. ಓರ್ವ ಸೋಂಕಿತ ವೈದ್ಯರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೋಂಕಿತರ ಸಂಪರ್ಕಕ್ಕೆ ಬಂದವರಿಗೆ ಗೃಹ ದಿಗ್ಬಂಧನ ವಿಧಿಸಲಾಗಿದೆ.

14 Coronavirus Positive Cases Reported In Udupi Ajjarakadu Hospital

ಸೋಂಕಿತರ ವಾರ್ಡ್, ಶಸ್ತ್ರಚಿಕಿತ್ಸೆ ಮಾಡಿದ ಕೊಠಡಿಯನ್ನು ಸೀಲ್ ‌ಡೌನ್ ಮಾಡಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಸದ್ಯ ತುರ್ತು ಚಿಕಿತ್ಸೆ ಮಾತ್ರ ಲಭ್ಯ. ಶಂಕಿತ ಕೋವಿಡ್ ರೋಗಿಗಳಿರುವ ಪ್ರತ್ಯೇಕಿತ ವಾರ್ಡ್ ‌ಗಳು ಮಾತ್ರ ಕಾರ್ಯನಿರ್ವಹಣೆ ಮಾಡುತ್ತಿವೆ. ಸದ್ಯ ಒಳರೋಗಿಗಳನ್ನು ದಾಖಲಿಸಿಕೊಳ್ಳುವುದಿಲ್ಲ. ಹೊರರೋಗಿ ವಿಭಾಗವೂ ಸೇವೆಗೆ ಲಭ್ಯವಿರುವುದಿಲ್ಲ ಎಂದು ತಿಳಿದುಬಂದಿದೆ. ಆಸ್ಪತ್ರೆಯಲ್ಲಿ ಸದ್ಯಕ್ಕೆ 90 ಒಳರೋಗಿಗಳಿದ್ದಾರೆ.

ಪೂರ್ಣ ಆಸ್ಪತ್ರೆ ಸ್ಯಾನಿಟೈಸ್ ಮಾಡಲಾಗುತ್ತಿದ್ದು, ಎರಡು ದಿನಗಳ ಬಳಿಕ ಆಸ್ಪತ್ರೆ ತೆರೆಯಲು ನಿರ್ಧರಿಸಲಾಗಿದೆ.

English summary
Coronavirus spreaded to 14 members in udupi ajjarakadu hospital by a patient with gangrene problem
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X