• search
 • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಡುಪಿಯಲ್ಲಿ 134, ಚಿತ್ರದುರ್ಗದಲ್ಲಿ 17 ಕೊರೊನಾ ಸೋಂಕು ಪ್ರಕರಣ ಪತ್ತೆ

|

ಉಡುಪಿ, ಜುಲೈ 19: ಉಡುಪಿಯಲ್ಲಿ ಇಂದು ಮತ್ತೆ ಕೊರೊನಾ ವೈರಸ್ ಪ್ರಕರಣ ಸ್ಪೋಟಗೊಂಡಿದ್ದು, ಸತತ ಎರಡನೇ ದಿನವೂ ನೂರರ ಗಡಿ ದಾಡಿದೆ. ಇಂದೂ ಕೂಡಾ ಜಿಲ್ಲೆಯಲ್ಲಿ 134 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

   ಅಜ್ಜಿಯ ಬಳಿ ದುಡ್ಡಿನ ರಾಶಿ ನೋಡಿ ಎಲ್ಲರೂ ಫುಲ್ ಶಾಕ್ | Oneindia Kannada

   ಉಡುಪಿಯಲ್ಲಿ ಈವರೆಗೆ 2222 ಕೊರೊನಾ ಸೋಂಕು ಪಾಸಿಟಿವ್ ಪ್ರಕರಣ ದಾಖಲಾದಂತಾಗಿದೆ. ಈ ಪೈಕಿ ಪ್ರಾಥಮಿಕ ಸಂಪರ್ಕದಿಂದಲೇ ಹೆಚ್ಚು ಜನರಲ್ಲಿ ಸೋಂಕು ಕಂಡುಬಂದಿರುವುದು ಗಮನಾರ್ಹ ಸಂಗತಿಯಾಗಿದೆ.

   ಚಿತ್ರದುರ್ಗದಲ್ಲಿ ಕೊರೊನಾ ವೈರಸ್ ಮಹಾಮಾರಿಗೆ ನಾಲ್ಕನೇ ಬಲಿ

   ಇದೇ ವೇಳೆ ಜಿಲ್ಲೆಯಲ್ಲಿ ಇಂದು 42 ಮಂದಿ ಗುಣಮುಖರಾಗಿ ಬಿಡುಗಡೆ ಆಗಿದ್ದಾರೆ. ಈತನಕ 1628 ಮಂದಿ ಗುಣಮುಖರಾಗಿದ್ದಾರೆ ಎಂಬ ಅಂಕಿಅಂಶ ತುಸು ಸಮಾಧಾನ ತರುವಂಥದ್ದಾಗಿದೆ. ಸದ್ಯ ಜಿಲ್ಲೆಯಲ್ಲಿ 584 ಸಕ್ರಿಯ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಪಾಸಿಟಿವ್ ಬಂದವರನ್ನು ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತಿದೆ ಎಂದು ಉಡುಪಿ ಡಿಎಚ್ಒ ಡಾ. ಸುಧೀರ್ ಚಂದ್ರ ಸೂಡ ಮಾಹಿತಿ ನೀಡಿದರು.

   ಚಿತ್ರದುರ್ಗ ಜಿಲ್ಲೆಯಲ್ಲಿ ಮಹಾಮಾರಿಗೆ ಕೊರೊನಾಗೆ 5ನೇ ಬಲಿ

   ಕೋಟೆನಾಡು ಚಿತ್ರದುರ್ಗದಲ್ಲಿ ಮಹಾಮಾರಿ ಕೊರೊನಾ ವೈರಸ್ ಗೆ ಮತ್ತೊಂದು ಬಲಿಯಾಗಿದ್ದು, ಸಾವಿನ ಸಂಖ್ಯೆ 05 ಕ್ಕೆ ಏರಿಕೆಯಾಗಿದೆ. ಚಿತ್ರದುರ್ಗದಲ್ಲಿ ಒಂದೇ ದಿನ ಇಬ್ಬರು ಕೋವಿಡ್ ಗೆ ಬಲಿಯಾಗಿದ್ದಾರೆ. ಜಿಲ್ಲೆಯ ಚಳ್ಳಕೆರೆ ನಗರದ 68 ವರ್ಷದ ವೃದ್ಧ ಕೊರೊನಾಗೆ ಬಲಿಯಾಗಿದ್ದು, ಜಿಲ್ಲೆಯ ಜನರಲ್ಲಿ ಕೊರೊನಾ ಆತಂಕ ಹೆಚ್ಚಿಸಿದೆ.

   ಭಾರತದಲ್ಲಿ 24 ಗಂಟೆಯಲ್ಲಿ 38,902 ಕೋವಿಡ್ ಪ್ರಕರಣ ದಾಖಲು

   ಮತ್ತೊಂದು ಕಡೆ ಕೊರೊನಾ ಸೋಂಕು ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿವೆ. ಇಂದು ಜಿಲ್ಲೆಯಲ್ಲಿ 17 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು 218 ಕ್ಕೆ ಏರಿಕೆಯಾಗಿದೆ. ಚಿತ್ರದುರ್ಗ 03, ಹೊಸದುರ್ಗ 05, ಹಿರಿಯೂರು 06, ಹೊಳಲ್ಕೆರೆ 03, ಚಳ್ಳಕೆರೆ 01(ಸಾವು), ಕೊರೊನಾ 103 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. 111 ಕೊರೊನಾ ಸಕ್ರಿಯ ಪ್ರಕರಣಗಳಿವೆ.

   English summary
   The coronavirus case has erupted again today in Udupi and crossed the hundred for the second consecutive day. today also 134 coronavirus positive cases were detected in the district.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X