ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಣಿಪಾಲ : ಹಳೆ ದ್ವೇಷದ ನೆಪವೊಡ್ಡಿ ವಿದ್ಯಾರ್ಥಿ ಮೇಲೆ ಹಲ್ಲೆ

By ಐಸಾಕ್ ರಿಚರ್ಡ್
|
Google Oneindia Kannada News

ಮಣಿಪಾಲ, ನವೆಂಬರ್, 04: ಯಾವುದೋ ಹಳೆ ದ್ವೇಷ ನೆಪಮಾಡಿಕೊಂಡು ಉಡುಪಿ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿ ಮೇಲೆ 10ಮಂದಿ ತಂಡ ಹಲ್ಲೆ ನಡೆಸಿ ಪರಾರಿಯಾಗಿದೆ.

ತೆಂಕನಿಡಿಯೋರ್ ಗ್ರಾಮದ ಪವನ್ (20) ಎಂಬಾತ ಹತ್ತು ಮಂದಿಯಿಂದ ಹಲ್ಲೆಗೆ ಒಳಗಾದವ . ಇವನು ಕಲ್ಯಾಣ್ ಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು. ಈತನ ಮೇಲೆ ಹಲ್ಲೆಗೈದ ಆರೋಪದ ಮೇರೆಗೆ ಶಾಕ್ಲೆನ್ , ಇರ್ಫಾನ್, ಮುಸ್ತಾಫ್ , ರಿಫಾಗ್ ಅವರನ್ನು ಬಂಧಿಸಿದ್ದು, ಉಡುಪಿಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.[ಮಣಿಪಾಲ್ ಗ್ಯಾಂಗ್ ರೇಪ್ ಕೇಸ್ : ಮೂವರಿಗೆ ಜೀವಾವಧಿ ಶಿಕ್ಷೆ]

10 members of team onslaught one student at Manipal on Tuesday

ಘಟನೆಯ ವಿವರ :

ಪವನ್ ಸಂತೆಕಟ್ಟೆಯಿಂದ ಟ್ಯೂಷನ್ ಮುಗಿಸಿಕೊಂಡು ತೆಂಕನಿಡಿಯೂರಿನ ತನ್ನ ಮನೆಗೆ ತೆರಳುತ್ತಿದ್ದ. ಆ ವೇಳೆ ಎರಡು ಕಾರುಗಳಲ್ಲಿ ಬಂದ ಹತ್ತು ಜನರ ತಂಡ ಪವನ್ ನನ್ನು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ.

ಇದನ್ನು ಕಂಡ ಸಾರ್ವಜನಿಕರು ಅವರನ್ನು ಹಿಡಿದು ಥಳಿಸಿದ್ದಾರೆ. ಇದಕ್ಕೆ ಹೆದರಿದ 10 ಮಂದಿ ತಂಡ ಪರಾರಿಯಾಗಿದೆ. ಬಳಿಕ ಸಾರ್ವಜನಿಕರು ಪವನ್ ನನ್ನು ಉಡುಪಿಯ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. [ಮತ್ತೆ ಬಾಗಿಲು ತೆರೆಯುತ್ತಾ ಮಣಿಪಾಲದ ಐನಾಕ್ಸ್?]

ಪೊಲೀಸರು ಹೇಳಿದ್ದೇನು?

ಪವನ್ ಮೇಲೆ ಹಲ್ಲೆ ನಡೆಸಿರುವುದರ ಕುರಿತಾಗಿ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮಧ್ಯೆ ಹಲವಾರು ದಿನಗಳಿಂದ ದ್ವೇಷ ಭಾವನೆ ಇತ್ತು. ಈ ವಿಚಾರವಾಗಿಯೇ ತಂಡಗಳ ನಡುವೆ ಆಗಾಗ ಪರಸ್ಪರ ಕಾದಾಟಗಳಾಗುತ್ತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

English summary
10 members of team onslaught one student at Manipal on Tuesday, November. He is resident of Tenkanidiyur, Manipal. studying on Kalyan pura college, Udupi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X