ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಮಕೂರಿಗೆ ಜ.22ರಂದು ಮೋದಿ ಆಗಮಿಸುವುದು ಅನುಮಾನ

|
Google Oneindia Kannada News

Recommended Video

Siddaganga Swamiji: ತುಮಕೂರಿನ ಸಿದ್ದಗಂಗಾ ಮಠಕ್ಕೆ ನರೇಂದ್ರ ಮೋದಿ ಆಗಮನ ಅನುಮಾನ | Oneindia Kannada

ತುಮಕೂರು, ಜನವರಿ 21 : ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮಿಗಳ ಅಂತಿಮ ದರ್ಶನ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆಯೇ?. ನರೇಂದ್ರ ಮೋದಿ ಅವರು ತುಮಕೂರಿಗೆ ಆಗಮಿಸುವುದು ಇನ್ನೂ ಖಚಿವಾಗಿಲ್ಲ.

ತುಮಕೂರಿನಲ್ಲಿ ಮಾತನಾಡಿದ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, 'ಶ್ರೀಗಳ ಅಂತಿಮ ದರ್ಶನಕ್ಕೆ ಬರಲು ಪ್ರಧಾನಿ ನರೇಂದ್ರ ಮೋದಿ ಅವರು ಆಪೇಕ್ಷೆ ವ್ಯಕ್ತಪಡಿಸಿದ್ದಾರೆ. ಆದರೆ, ಭದ್ರತಾ ದೃಷ್ಟಿಯಿಂದ ಅದು ಸಾಧ್ಯವಾಗುತ್ತಿಲ್ಲ' ಎಂದರು.

ಸರ್ಕಾರವೇ ಸಿದ್ದಗಂಗಾ ಶ್ರೀಗಳ ಮುಂದೆ ಕ್ಷಮಾಪಣೆ ಕೇಳಿತ್ತು ಆಗೊಮ್ಮೆಸರ್ಕಾರವೇ ಸಿದ್ದಗಂಗಾ ಶ್ರೀಗಳ ಮುಂದೆ ಕ್ಷಮಾಪಣೆ ಕೇಳಿತ್ತು ಆಗೊಮ್ಮೆ

'ಮಠದಲ್ಲಿ ಮಂಗಳವಾರ ಸುಮಾರು 8 ಲಕ್ಷ ಜನರು ಸೇರುವ ಸಾಧ್ಯತೆ ಇದೆ. ಮೋದಿ ಅವರು ಬಂದರೆ ಭಕ್ತರಿಗೆ ತೊಂದರೆ ಆಗುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ಮೋದಿ ಭೇಟಿಗೆ ಪೊಲೀಸರು ಇನ್ನೂ ಅವಕಾಶ ನೀಡಿಲ್ಲ' ಎಂದು ಹೇಳಿದರು.

ಶಿವಕುಮಾರ ಸ್ವಾಮೀಜಿ ಶಿವೈಕ್ಯರಾದ ಸಮಯದ ಬಗ್ಗೆ ಜ್ಯೋತಿಷ್ಯ ಏನು ಹೇಳುತ್ತದೆ?ಶಿವಕುಮಾರ ಸ್ವಾಮೀಜಿ ಶಿವೈಕ್ಯರಾದ ಸಮಯದ ಬಗ್ಗೆ ಜ್ಯೋತಿಷ್ಯ ಏನು ಹೇಳುತ್ತದೆ?

Will Narendra Modi visit Tumakuru on January 22

ಶಿವಕುಮಾರ ಶ್ರೀಗಳ ನಿಧನದ ಸುದ್ದಿ ತಿಳಿದ ಬಳಿಕ ನರೇಂದ್ರ ಮೋದಿ ಅವರು ಟ್ವಿಟರ್ ಮೂಲಕ ಸಂತಾಪ ಸೂಚಿಸಿದ್ದರು. ಮಂಗಳವಾರ ಅವರು ತುಮಕೂರಿಗೆ ಭೇಟಿ ನೀಡಬಹುದು ಎಂಬ ನಿರೀಕ್ಷೆ ಇತ್ತು.

'ಡಾ.ಶಿವಕುಮಾರ ಸ್ವಾಮಿಗಳು ಬಡವರು ಮತ್ತು ಹಿಂದುಳಿದವರಿಗಾಗಿ ಬದುಕಿದವರು. ಬಡತನ, ಹಸಿವು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ತಮ್ಮನ್ನು ಮೀಸಲಿಟ್ಟಿದ್ದರು. ಬಡವರಿಗೆ ಶಿಕ್ಷಣ ಮತ್ತು ಆರೋಗ್ಯ ಸೇವೆ ಒದಗಿಸಿದವರು. ಅವರು ಹಮ್ಮಿಕೊಂಡಿದ್ದ ಸಮಾಜ ಸೇವಾ ಕಾರ್ಯಗಳು ಅತ್ಯುತ್ತಮವಾಗಿದ್ದವಲ್ಲದೆ, ಕಲ್ಪಿಸಿಕೊಳ್ಳಲಾರದಷ್ಟು ಬೃಹತ್ತಾಗಿದ್ದವು' ಎಂದು ಮೋದಿ ಟ್ವೀಟ್ ಮಾಡಿದ್ದರು.

English summary
Prime Minister of India Narendra Modi will visit Tumakuru on January 22, 2019 to tribute last respect to Siddaganaga mutt Sivakumara Swamiji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X