ತುಮಕೂರಿನ ಪಿಡಿಒ ಮಂಜುಳಾ ದಲಿತರ ಕೇರಿಗೆ ಬರಲ್ವಂತೆ!

By: ಕುಮಾರಸ್ವಾಮಿ
Subscribe to Oneindia Kannada

ತುಮಕೂರು, ಫೆಬ್ರವರಿ 8: ತಾಲೂಕಿನ ಚಿಕ್ಕತೊಟ್ಲುಕೆರೆ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿ, ಆಕ್ರೋಶ ವ್ಯಕ್ತಪಡಿಸಿದ ಘಟನೆ ಬುಧವಾರ ನಡೆದಿದೆ. ದಲಿತ ಕೇರಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೇಟಿ ನೀಡುತ್ತಿಲ್ಲ ಎಂದು ಆರೋಪಿಸಿ, ಆಕ್ರೋಶ ವ್ಯಕ್ತಪಡಿಸಿದ ಘಟನೆ ಚಿಕ್ಕತೊಟ್ಲುಕೆರೆಯಲ್ಲಿ ನಡೆದಿದೆ.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುಳಾ ಅವರು ದಲಿತರ ಕೇರಿಗಳಿಗೆ ಭೇಟಿ ನೀಡುವುದಿಲ್ಲ. ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ದಲಿತ ಕಾಲೋನಿ ನಿವಾಸಿಗಳು ಆಗ್ರಹಿಸಿದರು. ಆಕ್ರೋಶಗೊಂಡಿದ್ದ ಪ್ರತಿಭಟನಾನಿರತರು ಗ್ರಾಮಪಂಚಾಯಿತಿ ಕಚೇರಿಗೆ ಬೀಗ ಹಾಕಿದರು.[ತುಮಕೂರು: ಇನ್ನೇನು ತಾಳಿ ಕಟ್ಟಬೇಕಿದ್ದ ವರ ಹೃದಯಾಘಾತದಿಂದ ಸಾವು]

Why Tumakuru PDO does not come to dalit colonies?

ಅದಕ್ಕೂ ಮೊದಲು ಕಚೇರಿಯ ಪೀಠೋಪಕರಣಗಳನ್ನು ಧ್ವಂಸಗೊಳಿಸಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುಳಾ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ವಿಚಾರ ತಿಳಿದ ಅಧಿಕಾರಿ ಮಂಜುಳಾ ಕಚೇರಿಗೆ ಬರಲಿಲ್ಲ. ಇದರಿಂದ ಮತ್ತೂ ಆಕ್ರೋಶಗೊಂಡ ಪ್ರತಿಭಟನಾನಿರತರು, ಪಿಡಿಒ ಸ್ಥಳಕ್ಕೆ ಬರಬೇಕು ಎಂದು ಘೋಷಣೆಗಳನ್ನು ಕೂಗಿದರು.[ಫೆ.13ರಂದು ಶೀಬಿ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ]

Why Tumakuru PDO does not come to dalit colonies?

ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಅವರಿಗೆ ಇಂಥ ವಿಚಾರಗಳ ಬಗ್ಗೆ ಗಮನ ಕೊಡುವಷ್ಟು ಸಮಯ ಇರುತ್ತದೋ ಇಲ್ಲವೋ? ಇನ್ನು ಡಾ.ಜಿ.ಪರಮೇಶ್ವರ ಅವರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕೊರಟಗೆರೆ ಕ್ಷೇತ್ರ ಚಿಕ್ಕತೊಟ್ಲುಕೆರೆಗೆ ಬಹಳ ಹತ್ತಿರ. ಆದರೆ ಇಂಥ ವಿಚಾರದಲ್ಲಿ ಅಧಿಕಾರಿಗಳ ಕಿವಿ ಹಿಂಡುವವರು ಯಾರು ಹೇಳಿ?

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tumakuru taluk Chikkatotlukere Gram Panchayath office closed by dalits on Wednesday and asked, Why Tumakuru PDO does not come to dalit colonies? They protest against PDO Manjula for not coming to dalit colonies.
Please Wait while comments are loading...