ಕೋಳಾಲ: ಬೇಕರಿಗೆ ನುಗ್ಗಿದ ಖಾಸಗಿ ಬಸ್, 2 ಸಾವು

Posted By:
Subscribe to Oneindia Kannada

ಕೊರಟಗೆರೆ (ತುಮಕೂರು), ಜುಲೈ 31: ಕೊರಟಗೆರೆ ತಾಲೂಕಿನ ಕೋಳಾಲದಲ್ಲಿನ ರಸ್ತೆ ಬದಿಯ ಬೇಕರಿಗೆ ಖಾಸಗಿ ಬಸ್ಸೊಂದು ಹಠಾತ್ತಾಗಿ ನುಗ್ಗಿದ ಪರಿಣಾಮ ಬಸ್ ನಲ್ಲಿದ್ದ ಲಕ್ಷ್ಮಮ್ಮ (50) ಹಾಗೂ ಬೇಕರಿ ಮಾಲೀಕ ಕುಮಾರ್ ಎಂಬುವರು ಸಾವಿಗೀಡಾಗಿದ್ದಾರೆ.

ಬಸ್ ನ ಬ್ರೇಕ್ ವಿಫಲವಾಗಿದ್ದರಿಂದಾಗಿ, ಬಸ್ ಬನಶಂಕರಿ ಬೇಕರಿಯೊಳಕ್ಕೆ ನುಗ್ಗಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ಬಸ್ ಕೋಳಾಲದಿಂದ ಬೆಂಗಳೂರಿಗೆ ಹೊರಟಿತ್ತೆಂದು ಹೇಳಲಾಗಿದೆ.

Two died as Bus ramps into a bakery in Kolala of Tumkur district
Cybercrime Crime Attack Happen Once In Every 10 minutes In India | Oneindia Kannada

ಅಪಘಾತದ ವೇಳೆ, ಲಕ್ಷ್ಮಮ್ಮ ಅವರು ಸ್ಥಳದಲ್ಲೇ ಅಸುನೀಗಿದರೆ, ತೀವ್ರವಾಗಿ ಗಾಯಗೊಂಡಿದ್ದ ಕುಮಾರ್, ಆಸ್ಪತ್ರೆಗೆ ಸಾಗಿಸುವ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಕೋಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Private bus ramps into a Bekery in Kolala of Koratagere Taluk (Tumkur) deading two deaths. Lakshmamma (50) who was in the Bus and owner of the Bakery are the victims.
Please Wait while comments are loading...