ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಮಕೂರು: ಜೆಡಿಎಸ್‌ಗೆ ಮುನ್ನಡೆ, ಪರಮೇಶ್ವರ್‌ಗೆ ಮುಖಭಂಗ

By Manjunatha
|
Google Oneindia Kannada News

Recommended Video

Karnataka Civic Poll Results : ತುಮಕೂರಿನಲ್ಲಿ ಜೆಡಿಎಸ್ ಮುನ್ನಡೆ | ಜಿ ಪರಮೇಶ್ವರ್ ಗೆ ಹಿನ್ನಡೆ

ತುಮಕೂರು, ಸೆಪ್ಟೆಂಬರ್ 03: ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು. ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್ ಮುನ್ನಡೆ ಸಾಧಿಸಿದೆ.

ತುಮಕೂರು ಮಹಾನಗರ ಪಾಲಿಕೆ ಅತಂತ್ರ ಸ್ಥಿತಿಯಾದರೆ. ಜಿಲ್ಲೆಯ ಮಧುಗಿರಿ ಕಾಂಗ್ರೆಸ್‌ ತೆಕ್ಕೆಗೆ ಬಿದ್ದಿದೆ. ಆದರೆ ಇನ್ನುಳಿದ ಕಡೆ ಜೆಡಿಎಸ್ ಪಾರುಪತ್ಯ ಸಾಧಿಸಿದೆ.

LIVE ಸ್ಥಳೀಯ ಸಂಸ್ಥೆ ಫಲಿತಾಂಶ : ನಿಪ್ಪಾಣಿ ನಗರಸಭೆ ಕ್ಲೀನ್ ಸ್ವೀಪ್ ಮಾಡಿದ ಪಕ್ಷೇತರರುLIVE ಸ್ಥಳೀಯ ಸಂಸ್ಥೆ ಫಲಿತಾಂಶ : ನಿಪ್ಪಾಣಿ ನಗರಸಭೆ ಕ್ಲೀನ್ ಸ್ವೀಪ್ ಮಾಡಿದ ಪಕ್ಷೇತರರು

ಮಧುಗಿರಿಯಲ್ಲಿ ಕಾಂಗ್ರೆಸ್ 13 ಸೀಟು ಜಯಿಸಿದ್ದರೆ. ಜೆಡಿಎಸ್‌ 9 ಹಾಗೂ ಇತರೆ 1 ಸೀಟುಗಳಲ್ಲಿ ವಿಜಯ ಸಾಧಿಸಿದ್ದಾರೆ. ಬಿಜೆಪಿ ಇಲ್ಲಿ ಖಾತೆಯನ್ನೇ ತೆರೆದಿಲ್ಲ.

Tumkur local body election jds in the lead

ಚಿಕ್ಕನಾಯಕನಹಳ್ಳಿ ಪುರಸಭೆಯಲ್ಲಿ ಜೆಡಿಎಸ್ 14 ಸೀಟು ಜಯಿಸಿ ಪುರಸಭೆಯನ್ನು ತನ್ನ ವಶಕ್ಕೆ ಪಡೆದಿದೆ. ಇಲ್ಲಿ ಕಾಂಗ್ರೆಸ್‌ಗಿಂತಲೂ ಬಿಜೆಪಿ ಹೆಚ್ಚು ಸ್ಥಾನ ಗಳಿಸಿ ಆಶ್ಚರ್ಯ ಮೂಡಿಸಿದೆ. ಚಿಕ್ಕನಾಯಕನಹಳ್ಳಿಯಲ್ಲಿ ಕಾಂಗ್ರೆಸ್ ಕೇವಲ 2 ಸೀಟು ಜಯಿಸಿದ್ದರೆ. ಬಿಜೆಪಿ 5 ಗೆದ್ದಿದೆ. ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಗೆದ್ದಿದ್ದಾರೆ.

ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಪ್ರತಿನಿಧಿಸುವ ಕೊರಟಗೆರೆಯಲ್ಲಿ ಜೆಡಿಎಸ್ ಪಕ್ಷ ಪಾರಮ್ಯ ಮೆರೆದಿದೆ. ಪರಮೇಶ್ವರ್ ಅವರಿಗೆ ಇದು ಭಾರಿ ಹಿನ್ನೆಡೆ ಎಂದೇ ವಿಶ್ಲೇಷಿಸಲಾಗಿದೆ. ಗುಬ್ಬಿ ಪುರಸಭೆಯಲ್ಲಿಯೂ ಸಹ ಜೆಡಿಎಸ್ ಪಾರಮ್ಯ ಮೆರೆದಿದೆ.

ಪುತ್ತೂರು ನಗರಸಭೆ ಬಿಜೆಪಿ ತೆಕ್ಕೆಗೆ, ಖಾತೆ ತೆರೆದ ಎಸ್ ಡಿಪಿಐಪುತ್ತೂರು ನಗರಸಭೆ ಬಿಜೆಪಿ ತೆಕ್ಕೆಗೆ, ಖಾತೆ ತೆರೆದ ಎಸ್ ಡಿಪಿಐ

ತುಮಕೂರು ಪಟ್ಟಣ ಪಂಚಾಯಿತಿ ಅತಂತ್ರವಾಗಿದ್ದು. ಇಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿ ಅಧಿಕಾರ ಹಿಡಿಯುವುದು ಖಾಯಂ ಆಗಿದೆ.

English summary
JDS took lead in Tumur district local body elections. I Koratagere muncipalty jds is in clear lead. Gubbi also jds took clear lead. Madhugiri congress took lead. Tumakur Panchayat is Intact.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X