ತುಮಕೂರಿನಲ್ಲಿ ಹೊಸವರ್ಷಕ್ಕೆ ನಕಲಿ ಡ್ರಗ್ ಮಾರಾಟ ಯತ್ನ

Posted By:
Subscribe to Oneindia Kannada

ತುಮಕೂರು, ಡಿಸೆಂಬರ್ 31: ತುಮಕೂರಿನಲ್ಲಿ ನಕಲಿ ಬ್ರೌನ್ ಶುಗರ್ ಪ್ರಕರಣವೊಂದು ಪತ್ತೆಯಾಗಿದ್ದು, ತುಮಕೂರಿನ ರಿಂಗ್‌ರೋಡಿನಲ್ಲಿರುವ ಅಶ್ವಿನಿ ಆಸ್ಪತ್ರೆ ಬಳಿಯಿರುವ ಗ್ರಾರೇಜೊಂದರಲ್ಲಿ ಡಿಸಿಬಿ ಇನ್ಸ್ ಪೆಕ್ಟರ್ ತಂಡ ಮಾಲು ಸಮೇತ ಇಬ್ಬರನ್ನು ಬಂಧಿಸಿದೆ.

ತುಮಕೂರಿನ ರಿಂಗ್‌ ರಸ್ತೆಯಲ್ಲಿರುವ ಅಶ್ವಿನಿ ಆಸ್ಪತ್ರೆಬಳಿ ಇರುವ ಕಟ್ಟಡವೊಂದರಲ್ಲಿ ಬ್ರೌನ್ ಶುಗರ್ ಮತ್ತು ಮಾದಕ ವಸ್ತುಗಳ ಇರಿಸಿ ನಗರದಲ್ಲಿ ವ್ಯಾಪಾರ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಆಧಾರದ ಮೇಲೆ ಡಿಸಿಬಿ ಇನ್ಸ್ ಪೆಕ್ಟ್ರರ್ ಗೌತಮ್ ಅವರ ತಂಡ ಜಾಗೃತವಾಗಿ ಶುಕ್ರವಾರ ದಾಳಿ ನಡೆಸಿತು. ಆದರೆ ಯೂರಿಯಾ ಮತ್ತು ಸುಣ್ಣದ ಪುಡಿಮಿಶ್ರಿತ ವಸ್ತುವನ್ನು ಸೇರಿಸಿ ನಗರದ ವಿದ್ಯಾರ್ಥಿಗಳಿಗೆ ವ್ಯಾಪಾರ ಮಾಡಲು ಮುಂದಾಗಿದ್ದರು ಎಂದು ಹೇಳಲಾಗಿದೆ.[ನಕಲಿ ವಾಚ್ ದಂಧೆ: 1.8 ಕೋಟಿ ಮೌಲ್ಯದ ಮಾಲು ವಶ, ಮೂವರ ಸೆರೆ]

fake brown sugar

ಅಜೀಜ್ ಮತ್ತು ಪವನ್ ಬಂಧಿತ ಆರೋಪಿಗಳು. ಸಣ್ಣ ಪೊಟ್ಟಣವೊಂದಕ್ಕೆ ₹ 15ರಿಂದ 20 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ತುಮಕೂರಿನ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

fack brown sugar

ಇವರೊಂದಿಗಿದ್ದ ಇನ್ನು ಇಬ್ಬರು ದಂಧೆಯಲ್ಲಿ ಭಾಗಿಯಾಗಿ ಮೋಸ ಮಾಡಲು ಮುಂದಾಗಿದ್ದರು ಎನ್ನಲಾಗಿದ್ದು ಅವರನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Tumkur into the new year trying to sell fake drugs. DCB team attack, two arrested
Please Wait while comments are loading...