ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಮಕೂರಿಗೆ ಮತ್ತೊಂದು ಕೋಡು, ಎಚ್ ಎಂಟಿ ಜಾಗ ಇಸ್ರೋಗೆ ಹಸ್ತಾಂತರ

|
Google Oneindia Kannada News

ತುಮಕೂರು, ಜುಲೈ 14: ತುಮಕೂರು ಜಿಲ್ಲೆಗೆ ಮತ್ತೊಂದು ಕೋಡು ಮೂಡಿದೆ. ಇಷ್ಟು ಕಾಲ ಎಚ್ ಎಂಟಿ ಕಾರ್ಖಾನೆಯಿದ್ದ ಜಾಗವು ಶನಿವಾರ ಇಸ್ರೋಗೆ ಹಸ್ತಾಂತರವಾಗಿದೆ. ಇನ್ನು ಮುಂದೆ ಇಸ್ರೋದಿಂದ ಉಡಾವಣೆ ಆಗುವ ಉಪಗ್ರಹಗಳ ಬಿಡಿ ಭಾಗಗಳ ಉತ್ಪಾದನೆಯು ಇಲ್ಲಿ ಆಗಲಿದೆ. ಈ ಸಂದರ್ಭದಲ್ಲಿ ಯಾರು ಏನು ಮಾತನಾಡಿದರು ಎಂಬುದು ಇಲ್ಲಿದೆ.

ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್, ಎಚ್ ಎಂಟಿ ಕಾರ್ಖಾನೆ ಎರಡು ವರ್ಷಗಳ ಹಿಂದೆ ಮುಚ್ಚಲಾಗಿದೆ. ಬೆಂಗಳೂರು ಹತ್ತಿರ ಇರುವ ಪರಿಣಾಮ ತುಮಕೂರಿನ ಹೃದಯಭಾಗದ ಈ ಭೂಮಿ ಖಾಸಗಿ ಆವರ ಪಾಲಾಗದಂತೆ ಸಂಸದ ಮುದ್ದಹನುಮೇಗೌಡರು ಕೇಂದ್ರ ಸರಕಾರಕ್ಕೆ ಒತ್ತಡ ಹೇರಿ ಇಸ್ರೋ ಪಾಲಾಗುವಂತೆ ಮಾಡಿರುವದು ಶ್ಲಾಘನೀಯ. ಇಸ್ರೋ ಉಪಗ್ರಹಕ್ಕೆ ಬಳಕೆ ಅಗುವ ಉಪಕರಣಗಳನ್ನು ಇಲ್ಲಿ ಉತ್ಪಾದನೆ ಮಾಡಲಾಗುವುದು.

ತುಮಕೂರಿನಲ್ಲಿ ಇಸ್ರೋ ಘಟಕ, 5 ಸಾವಿರ ಉದ್ಯೋಗ ಸೃಷ್ಟಿತುಮಕೂರಿನಲ್ಲಿ ಇಸ್ರೋ ಘಟಕ, 5 ಸಾವಿರ ಉದ್ಯೋಗ ಸೃಷ್ಟಿ

ವಸಂತ ನರಸಾಪುರದಲ್ಲಿ ದೊಡ್ಡ ಕೈಗಾರಿಕೆಗಳು ಬರುತ್ತವೆ. ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ಎಲ್ಲಾ ಕೈಗಾರಿಕೆಯವರಿಗೆ ಷರತ್ತು ಹಾಕಲಾಗಿದೆ. ತುಮಕೂರು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. 25 ಸಾವಿರ ಮಂದಿ ಪ್ರತಿ ದಿನ ರೃಲಿನಲ್ಲಿ ಸಂಚರಿಸುತ್ತಾರೆ. ಈಗ ಮೆಟ್ರೋ ರೈಲು ತುಮಕೂರಿಗೆ ವಿಸ್ತಲಿಸುವಂತೆ ಪ್ರಸ್ತಾವನೆ ಇದೆ. ಯುವಕರಿಗಾಗಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ 25 ಎಕರೆ ಜಮೀನು ಹುಡುಕಲು ಈಗಾಗಲೇ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ.

ISRO

ಕೈಗಾರಿಕಾ ಸಚಿವ ಎಸ್ ಅರ್ ಶ್ರೀನಿವಾಸ್, ಎಸ್ಸೆಸ್ಸೆಲ್ಸಿ ಬಳಿಕ ಎಚ್ ಎಂಟಿ ಕಾರ್ಖಾನೆಯ ಕೆಲಸಕ್ಕೆ ಸೇರಲು ಬಯಸಿದ್ದೆ. ಅದರೆ ನಮ್ಮ ತಂದೆ ಬೈದು ಕಳುಹಿಸಿದ್ದರು. ಗುಬ್ಬಿಯಲ್ಲಿ ಎಚ್ ಎಎಲ್ ಕಾರ್ಖಾನೆ ಕಾಮಗಾರಿ ನಿಧಾನವಾಗಿ ನಡೆಯುತ್ತಿದೆ. ಸಂಸದರು ಆ ಬಗ್ಗೆ ಗಮನ ಹರಿಸ ಬೇಕು.

ಸಂಸದ ಎಸ್.ಪಿ.ಮುದ್ದಹನುಮೇಗೌಡ, ಎಚ್ ಎಂಟಿಗೆ ವಿದಾಯ ಹೇಳುತ್ತಿರುವ ದು ದುಃಖದ ವಿಷಯ. ಕಾರ್ಖಾನೆ ಮುಚ್ಚುವ ಹಂತ ತಲುಪಿದಾಗ ಪುನರ್ಜನ್ಮಕ್ಕೆ ಒತ್ತು ಕೊಟ್ಟೆವು. ಅದರೆ ಅದು ಸಾಧ್ಯವಾಗಲಿಲ್ಲ. ಕೊನೆಗೆ ಇಲ್ಲಿನ ಕಾರ್ಮಿಕರಿಗೆ ಮೂಲ ಸೌಕರ್ಯ ನೀಡಲು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ಸಂಸದರಾದ ಚಂದ್ರಪ್ಪ ಸೇರಿದಂತೆ ಇತರರು ನನಗೆ ಬೆಂಬಲ ನೀಡಿದರು. ಕಾರ್ಖಾನೆಯ 109 ಎಕರೆ ಭೂಮಿ ಖಾಸಗಿಯವರ ಪಾಲಾಗಿಲ್ಲ.

ಕಾರ್ಮಿಕ ಸಚಿವ ವೆಂಕಟರಮಣಪ್ಪ, ಪ್ರಧಾನಿ ಮೋದಿ ಸಹಕಾರ, ಮುದ್ದಹನುಮೇಗೌಡರ ಹೋರಾಟದ ಫಲವಾಗಿ ಎಚ್ ಎಂಟಿ ಜಾಗ ಇಸ್ರೋ ಪಾಲಾಗಿದೆ. ಇಸ್ರೋದಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲ ಆಗಬೇಕು.

ಸಂಸದ ಚಂದ್ರಪ್ಪ, ಇಲ್ಲಿನ ನೌಕರರು ಬಂದು ಮನವಿ ಮಾಡಿದಾಗ ಈ ಸ್ಥಳ ಎಂಥವರಿಗೆ ಸಿಕ್ಕಿದೆ ಎಂಬ ಬಗ್ಗೆ ಮನವರಿಕೆ ಮಾಡಿಕೊಟ್ಟೆವು. ಕಳಂಕ ರಹಿತ ರಾಜಕಾರಣಿ ಪರಮೇಶ್ವರ್ ಅವರಿಗೆ ಇನ್ನು ಒಂದು ಮೆಟ್ಟಿಲಷ್ಟೇ ಬಾಕಿ ಇದೆ. ಆದರೆ ಅಧಿಕಾರದಮುಳ್ಳಿನ ಹಾಸಿಗೆ ಎಂಬುದು ನೆನಪಿರಬೇಕು. ಸುಪ್ಪತ್ತಿಗೆ ಅಂದುಕೊಂಡರೆ ಮನೆಗೆ ಕಳುಹಿಸುತ್ತಾರೆ.

English summary
Tumakuru HMT land handed over to ISRO on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X