ತುಮಕೂರು: ಇನ್ನೇನು ತಾಳಿ ಕಟ್ಟಬೇಕಿದ್ದ ವರ ಹೃದಯಾಘಾತದಿಂದ ಸಾವು

Written By: Ramesh
Subscribe to Oneindia Kannada

ತುಮಕೂರು, ಫೆಬ್ರವರಿ. 05 : ಇನ್ನೇನು ತನ್ನ ಬಾಳ ಸಂಗಾತಿಗೆ ತಾಳಿ ಕಟ್ಟಿ ಹೊಸ ಬಾಳಿಗೆ ಕಾಲಿಡಬೇಕಿದ್ದ ವರ ಹೃದಯಾಘಾತದಿಂದ ಸಾವನ್ನಪ್ಪಿರುವ ದಾರುಣ ಘಟನೆ ಭಾನುವಾರ ತುಮಕೂರಿನ ಗವಿರಂಗ ಕಲ್ಯಾಣ ಮಂಟಪದಲ್ಲಿ ನಡೆದಿದೆ.

ಮೂಹರ್ತಕ್ಕೆ ಸಿದ್ಧವಾಗುತ್ತಿದ್ದ ವರ ವಸಂತ್ ಕುಮಾರ್ ಕಲ್ಯಾಣ ಮಂಟಪದಲ್ಲಿ ಸಾವನ್ನಪ್ಪಿದ ದುರ್ದೈವಿ. ಶನಿವಾರ ರಾತ್ರಿ ಅರಕ್ಷತೆಯ ಕಾರ್ಯಕ್ರಮ ಸುಸೂತ್ರವಾಗಿ ನಡೆದಿತ್ತು.

ಭಾನುವಾರ ಮಾಂಗಲ್ಯದಾರಣೆಗೆ ಎಲ್ಲಾ ಸಿದ್ಧತೆಗಳು ನಡೆದಿದ್ದ ವೇಳೆ ವರ ಸಾವನ್ನಪ್ಪಿದ್ದಾನೆ. ಇದರಿಂದ ವರನ ಸಂಬಂಧಿಕರ ರೋದನೆ ಮುಗಿಲು ಮುಟ್ಟಿದ್ದು ಕಲ್ಯಾಣ ಮಂಟಪದಲ್ಲಿ ನೀರವ ಮೌನ ಆವರಿಸಿದೆ.

Tumakuru: Bridegroom dies of Heart Attack on Marriage Day

ವಸಂತ್ ಕುಮಾರ್‌ ಎಂ.ಟೆಕ್‌ ಪದವೀಧರರಾಗಿ ಉನ್ನತ ಹುದ್ದೆಯಲ್ಲಿದ್ದು, ಎಂ.ಟೆಕ್‌ ಪದವೀಧರೆಯೊಂದಿಗೆ ವಿವಾಹ ನೆರವೇರಬೇಕಿತ್ತು. ಶನಿವಾರ ಸಂಜೆ ವರಪೂಜೆ ಸಂಪ್ರದಾಯಗಳು ನಡೆದಿದ್ದವು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bridegroom dies of Heart Attack on Marriage Day in gaviranga kalyana mantapa Tumkur on Sunday, Feb 05.
Please Wait while comments are loading...