ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಂಜಿನ್‌ಗೆ ಸಿಲುಕಿದ ಯುವಕನ ದೇಹವನ್ನು ನಿಲ್ದಾಣದವರೆಗೆ ಎಳೆದೊಯ್ದ ರೈಲು

|
Google Oneindia Kannada News

Recommended Video

ತುಮಕೂರು ರೈಲ್ವೆ ನಿಲ್ದಾಣ ಆಘಾತಕಾರಿ ಘಟನೆಗೆ ಸಾಕ್ಷಿಯಾಯ್ತು | Oneindia Kannada

ತುಮಕೂರು, ಅಕ್ಟೋಬರ್ 16: ರೈಲು ಬಂದಾಗ ಎಲ್ಲರೂ ಆತುರಾತುರವಾಗಿ ರೈಲು ಹತ್ತುವುದು ಸರ್ವೇ ಸಾಮಾನ್ಯ ಆದರೆ ತುಮಕೂರು ರೈಲ್ವೆ ನಿಲ್ದಾಣದಲ್ಲಿ ಹಾಗಾಗಲಿಲ್ಲ. ರೈಲು ಬಂದ ತಕ್ಷಣ ಎಲ್ಲರೂ ಗಾಬರಿಯಿಂದ ರೈಲನನ್ನೇ ನೋಡುತ್ತ ನಿಂತರು.

ರೈಲಿನ ಎಂಜಿನ್ ಮುಂಭಾಗಕ್ಕೆ ಸಿಲುಕಿದ ಯುವಕನ ಮೃತದೇಹದೊಂದಿಗೆ ರೈಲು ರೈಲ್ವೆ ನಿಲ್ದಾಣವನ್ನು ತಲುಪಿತ್ತು. ಯಶವಂತಪುರ ರೈಲ್ವೆ ನಿಲ್ದಾಣದಿಂದ ತುಮಕೂರಿಗೆ ಬರುವ ಮಾರ್ಗ ಮಧ್ಯದಲ್ಲಿ ಎಂಜಿನ್‌ಗೆ ಯುವಕನ ದೇಹ ಸಿಲುಕಿದೆ. ಕೆಲ ಕಾಲ ತುಮಕೂರು ರೈಲ್ವೆ ನಿಲ್ದಾಣದಲ್ಲಿ ಆತಂಕ ಸೃಷ್ಟಿಯಾಗಿತ್ತು.

ಶವವನ್ನು 70 ಕಿ.ಮೀ ಎಳೆದುಕೊಂಡು ಹೋದ ಬಸ್ ಚಾಲಕ ಶವವನ್ನು 70 ಕಿ.ಮೀ ಎಳೆದುಕೊಂಡು ಹೋದ ಬಸ್ ಚಾಲಕ

ಬೆಳಗ್ಗೆ ಬೆಂಗಳೂರಿನಿಂದ ತುಮಕೂರಿಗೆ ಬರುತ್ತಿದ್ದ ಯಶವಂತಪುರ ಎಕ್ಸ್‌ಪ್ರೆಸ್ ರೈಲು ಉಪ್ಪಾರ ಸೇತುವೆ ಬಳಿ ಬರುತ್ತಿದ್ದಂತೆ ಯುವಕನೊಬ್ಬ ರೈಲಿಗೆ ಸಿಲುಕಿ ಪ್ರಾಣಬಿಟ್ಟಿದ್ದಾನೆ.

Train tow dead body of a youth up to a kilometer

ಈ ವೇಳೆ ಆತನ ಮೃತದೇಹ ಎಂಜಿನ್ ಮುಂಭಾಗ ಸಿಲುಕಿಕೊಂಡಿತ್ತು. ಹೀಗೆ ಮೃತದೇಹ ಸುಮಾರು ಒಂದು ಕಿ,ಮೀ ಕ್ರಮಿಸಿ ನಿಲ್ದಾಣಕ್ಕೆ ಬರುತ್ತಿದ್ದಂತೆ ಪ್ರಯಾಣಿಕರು ಎಂಜಿನ್‌ನಲ್ಲಿ ಮೃತದೇಹ ನೋಡಿ ಕೂಗಿಕೊಂಡಿದ್ದಾರೆ,ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿ ಎಂಜಿನ್‌ಗೆ ಸೊಲುಕಿಕೊಂಡಿದ್ದ ದೇಹವನ್ನು ಇಳಿಸಿದ್ದಾರೆ.

ಮೈಸೂರು ದಸರಾ - ವಿಶೇಷ ಪುರವಣಿ

ಮೃತ ವ್ಯಕ್ತಿ ಯಾರೆಂಬುದು ಇದುವರೆಗೂ ತಿಳಿದುಬಂದಿಲ್ಲ. ಸುಮಾರು 20 ನಿಮಿಷಗಳಿಗೂ ಹೆಚ್ಚು ಕಾಲ ಈ ಘಟನೆಯಿಂದ ಗೊಂದಲ ಸೃಷ್ಟಿಯಾಗಿತ್ತು.

ಕೆಎಸ್ಆರ್ ಟಿಸಿ ಬಸ್- ಟೆಂಪೋ ಮುಖಾಮುಖಿ: ಐವರು ದುರ್ಮರಣ ಕೆಎಸ್ಆರ್ ಟಿಸಿ ಬಸ್- ಟೆಂಪೋ ಮುಖಾಮುಖಿ: ಐವರು ದುರ್ಮರಣ

ಇದು ಆತ್ಮಹತ್ಯೆಯೋ ಅಥವಾ ತಿಳಿಯದೇ ನಡೆದಿರುವ ಘಟನೆಯೋ ಎಂಬುದು ಇನ್ನೂ ಖಚಿತವಾಗಿಲ್ಲ. ಕೆಲವೇ ತಿಂಗಳ ಹಿಂದೆ ಬೆಂಗಳೂರಿನಲ್ಲಿ ಇಂಥದ್ದೇ ಘಟನೆಯೊಂದು ನಡೆದಿದ್ದು ಕೆಎಸ್‌ಆರ್‌ಟಿಸಿ ಬಸ್‌ವೊಂದು ವ್ಯಕ್ತಿಗೆ ಗುದ್ದಿದ್ದು ಆತನ ಮೃತದೇಹವನ್ನು ಸುಮಾರು 70 ಕಿ.ಮೀ ದೂರದವರೆಗೆ ಎಳೆದು ತಂದಿತ್ತು.

English summary
Yeshwanthpur express train towed a youth's dead body almost a kilometer near Tumkur on Monday. Passengers were noticed the body at Tumkur station which was towed in the wheels of engine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X