ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಮಕೂರು ನಗರ ಪ್ರವೇಶದ ಮಾರ್ಗ ಬದಲಾವಣೆ, ವಿವರ

|
Google Oneindia Kannada News

ತುಮಕೂರು, ಜನವರಿ 21 : ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಅಂತಿಮ ದರ್ಶನ ಪಡೆಯಲು ಸಾವಿರಾರು ಜನರು ಮಂಗಳವಾರ ಆಗಮಿಸುವ ಸಾಧ್ಯತೆ ಇದೆ. ಆದ್ದರಿಂದ ಸಂಚಾರಿ ಪೊಲೀಸರು ವಾಹನಗಳ ಮಾರ್ಗ ಬದಲಾವಣೆ ಮಾಡಿದ್ದಾರೆ.

ತುಮಕೂರು ಬರುವ ಮತ್ತು ತುಮಕೂರು ಮೂಲಕ ಬೆಂಗಳೂರು ಮತ್ತು ಉತ್ತರ ಕರ್ನಾಟಕ ಕಡೆಗೆ ಹೋಗುವ ಮಾರ್ಗದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಈ ಮೂಲಕ ವಾಹನ ಸಂಚಾರಕ್ಕೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ.

ಸಿದ್ದಗಂಗಾ ಶ್ರೀ ಲಿಂಗೈಕ್ಯ : ಬೆಂಗಳೂರಿನ ಖಾಸಗಿ ಶಾಲೆಗಳಿಗೆ ಮಂಗಳವಾರ ರಜಾ ಘೋಷಣೆಸಿದ್ದಗಂಗಾ ಶ್ರೀ ಲಿಂಗೈಕ್ಯ : ಬೆಂಗಳೂರಿನ ಖಾಸಗಿ ಶಾಲೆಗಳಿಗೆ ಮಂಗಳವಾರ ರಜಾ ಘೋಷಣೆ

Traffic police change route of Tumakuru

ರಾಷ್ಟ್ರೀಯ ಹೆದ್ದಾರಿ 4ರ ಮಾರ್ಗದಲ್ಲಿ ಕ್ಯಾತ್ಸಂದ್ರದಿಂದ ಸರ್ಕಲ್‌ ತನಕ ಎಲ್ಲಾ ರೀತಿಯ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಹಲವು ಮಾರ್ಗಗಳನ್ನು ಬದಲಾವಣೆ ಮಾಡಿ ಸಂಚಾರಿ ಪೊಲೀಸರು ಆದೇಶ ಹೊರಡಿಸಿದ್ದಾರೆ.

ಸರ್ಕಾರವೇ ಸಿದ್ದಗಂಗಾ ಶ್ರೀಗಳ ಮುಂದೆ ಕ್ಷಮಾಪಣೆ ಕೇಳಿತ್ತು ಆಗೊಮ್ಮೆಸರ್ಕಾರವೇ ಸಿದ್ದಗಂಗಾ ಶ್ರೀಗಳ ಮುಂದೆ ಕ್ಷಮಾಪಣೆ ಕೇಳಿತ್ತು ಆಗೊಮ್ಮೆ

ಹಲವು ಗಣ್ಯರು ಸಹ ಮಂಗಳವಾರ ಮಠಕ್ಕೆ ಆಗಮಿಸುವ ಹಿನ್ನಲೆಯಲ್ಲಿ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಮಠದ ಸಮೀಪ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದ್ದು, ಗಣ್ಯರು ಅಲ್ಲಿಂದ ಮಠಕ್ಕೆ ಬರಲು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ.

ಬಯಲಿನಲ್ಲಿ ಬಯಲಾದ ನಡೆದಾಡುವ ದೇವರು : ಗದಗ ಜಗದ್ಗುರುಬಯಲಿನಲ್ಲಿ ಬಯಲಾದ ನಡೆದಾಡುವ ದೇವರು : ಗದಗ ಜಗದ್ಗುರು

* ಶಿರಾ ಕಡೆಯಿಂದ ಬೆಂಗಳೂರಿಗೆ ಹೋಗುವ ವಾಹನಗಳು ಮಧುಗಿರಿ, ಕೊರಟಗೆರೆ, ದಾಬಸ್‌ಪೇಟೆ ಮಾರ್ಗವಾಗಿ ತೆರಳಬೇಕು.

* ಶಿವಮೊಗ್ಗದಿಂದ ಬೆಂಗಳೂರಿಗೆ ಹೋಗುವ ವಾಹನಗಳು ಗುಬ್ಬಿಗೇಟ್ ರಿಂಗ್ ರಸ್ತೆ ಮೂಲಕ ಕುಣಿಗಲ್ ಜಂಕ್ಷನ್ ಬಳಿ ಬಲಕ್ಕೆ ತಿರುಗಿ ಗೂಳೂರು ಮೂಲಕ ಸಾಗಬೇಕು.

* ಬೆಂಗಳೂರಿನಿಂದ ತುಮಕೂರಿಗೆ ಆಗಮಿಸುವ ವಾಹನಗಳು ಗುಬ್ಬಿ ರಿಂಗ್ ರಸ್ತೆ ಮೂಲಕ ನಗರವನ್ನು ಪ್ರವೇಶಿಸಲು ವ್ಯವಸ್ಥೆ ಮಾಡಲಾಗಿದೆ.

* ಶಿರಾ ಕಡೆಯಿಂದ ತುಮಕೂರು ನಗರಕ್ಕೆ ಬರುವ ಸಾರ್ವಜನಿಕರು ರಂಗಾಪುರ ಬ್ರಿಡ್ಜ್ ಬಳಿ ಸರ್ವೀಸ್ ರಸ್ತೆ, ಶ್ರೀದೇವಿ ಕಾಲೇಜ್ ಮುಖಾಂತರ ತುಮಕೂರು ತಲುಪಬಹುದು.

English summary
Thousand of people may visit Tumakuru on January 22, 2019 to tribute last respect to Siddaganaga mutt Sivakumara Swamiji. Traffic police change vehicle route of Tumakuru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X