ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಮೇಶ್ವರ ವಿರುದ್ಧ ಕಮೆಂಟ್, ಸ್ಪಷ್ಟನೆ ಕೊಟ್ಟ ಸುಚರಿತ್ ಲಾಲ್

|
Google Oneindia Kannada News

ಬೆಂಗಳೂರು, ಅಕ್ಟೋಬರ್ 17 : ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ವಿರುದ್ಧ ಅವಹೇಳನಕಾರಿ ಕಮೆಂಟ್ ಮಾಡಿದ ಆರೋಪವನ್ನು ಸುಚರಿತ್ ಲಾಲ್ ತಳ್ಳಿ ಹಾಕಿದ್ದಾರೆ. ಕೊರಟಗೆರೆ ಶಾಸಕ ಸುಧಾಕರ್ ಲಾಲ್ ಪುತ್ರ ಸುಚರಿತ್ ಪರಮೇಶ್ವರ ವಿರುದ್ಧ ಫೇಸ್‌ ಬುಕ್‌ನಲ್ಲಿ ಕಮೆಂಟ್ ಮಾಡಿದ್ದಾರೆ ಎಂಬುದು ಆರೋಪವಾಗಿದೆ.

ಕೊರಟಗೆರೆಯಿಂದಲೇ ಅಸೆಂಬ್ಲಿಗೆ ಸ್ಪರ್ಧೆ: ಜಿ ಪರಮೇಶ್ವರಕೊರಟಗೆರೆಯಿಂದಲೇ ಅಸೆಂಬ್ಲಿಗೆ ಸ್ಪರ್ಧೆ: ಜಿ ಪರಮೇಶ್ವರ

ಸುಧಾಕರ್ ಲಾಲ್ ಪುತ್ರ ಸುಚರಿತ್ ಲಾಲ್ ತಮ್ಮ ಫೇಸ್‌‌ಬುಕ್‌‌ ಖಾತೆಯ ಮೂಲಕ ಡಾ.ಜಿ.ಪರಮೇಶ್ವರ ಅವರನ್ನು 'ಬ್ಲಡಿ ನಾನ್ ಸೆನ್ಸ್' ಎಂದು ಸಂಭೋದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಸುಚರಿತ್ ಲಾಲ್ ಮತ್ತು ಸುಧಾಕರ್ ಲಾಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Sucharith Lal clarification on FB comment against Parameshwar

ಮುಂದಿನ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಪರಮೇಶ್ವರ ಅವರು ಗೆಲ್ಲುತ್ತಾರೆ ಎಂಬ ಸಿ-ಫೋರ್‌ ಸಮೀಕ್ಷೆಯೊಂದನ್ನು ಪೋಸ್ಟ್ ಮಾಡಿದ್ದವರ ವಿರುದ್ಧ ಸುಚರಿತ್ ಲಾಲ್ ಕಮೆಂಟ್ ಮಾಡಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಇಂದು ಸುಚರಿತ್ ಲಾಲ್ ಸ್ಪಷ್ಟನೆ ನೀಡಿದ್ದಾರೆ.

ಕೊರಟಗೆರೆಯಲ್ಲಿ ಮುಂದಿನ ಚುನಾವಣೆಗೆ ಪರಂ ತಂತ್ರಗಾರಿಕೆ ಏನು?ಕೊರಟಗೆರೆಯಲ್ಲಿ ಮುಂದಿನ ಚುನಾವಣೆಗೆ ಪರಂ ತಂತ್ರಗಾರಿಕೆ ಏನು?

ಫೇಸ್‌ಬುಕ್‌ನಲ್ಲಿ ನೀಡಿರುವ ಸ್ಪಷ್ಟನೆ ಇಲ್ಲಿದೆ...

Sucharith Lal clarification on FB comment against Parameshwar

2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆದು ಕರ್ನಾಟಕದಲ್ಲಿ ಅಧಿಕಾರ ಪಡೆಯಿತು. ಆದರೆ, ತುಮಕೂರು ಜಿಲ್ಲೆಯ ಕೊರಟಗೆರೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು 54,074 ಮತಗಳನ್ನು ಪಡೆದು ಸೋಲು ಅನುಭವಿಸಿದರು.

ಡಾ.ಜಿ.ಪರಮೇಶ್ವರ ಪರಿಚಯಡಾ.ಜಿ.ಪರಮೇಶ್ವರ ಪರಿಚಯ

ಪರಮೇಶ್ವರ ವಿರುದ್ಧ ಸ್ಪರ್ಧಿಸಿದ್ದ ಜೆಡಿಎಸ್‌ನ ಸುಧಾಕರಲಾಲ್ 72,229 ಮತಗಳನ್ನುಗಳಿಸಿ ಜಯಗಳಿಸಿದರು. ಈಗ ಸುಧಾಕರಲಾಲ್ ಅವರ ಪುತ್ರ ಪರಮೇಶ್ವರ ವಿರುದ್ಧ ಕಮೆಂಟ್ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು.

English summary
Korategere JDS MLA Sudhakar Lal son Sucharith Sudhakar Lal clarification on Facebook comment against KPCC president Dr.G.Parameshwara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X