ನಂಜಾವಧೂತ ಶ್ರೀಗಳಿಗೆ 37ನೇ ಜನ್ಮದಿನ

By: ದೊಡ್ಡವೀರಪ್ಪ
Subscribe to Oneindia Kannada

ತುಮಕೂರು, ಏಪ್ರಿಲ್ 21 : ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯ ಪ್ರಸಿದ್ಧ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿ ಅವರ 37ನೇ ವರ್ಧಂತಿ ಮಹೋತ್ಸವ ಮತ್ತು ಶ್ರೀಗಳ ಪೀಠಾ ರೋಹಣದ ಬೆಳ್ಳಿ ಮಹೋತ್ಸವ ಗುರುವಾರ ನಡೆಯಿತು, ಲಕ್ಷಾಂತರ ಭಕ್ತರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ರಾಜ್ಯದಲ್ಲಿನ ತೀವ್ರ ಬರಗಾಲಯದ ಹಿನ್ನಲೆಯಲ್ಲಿ ಅದ್ದೂರಿ ಆಚರಣೆಗಳು ಬೇಡ ಎಂದು ಶ್ರೀಗಳು ಸಲಹೆ ನೀಡಿದ್ದರು. ಶ್ರೀಗಳ ಆಶಯದಂತೆ ಲೋಕ ಕಲ್ಯಾಣಾರ್ಥವಾಗಿ ಶಿವ-ಪಾರ್ವತಿ ಕಲ್ಯಾಣೋತ್ಸವ, ಸರಳ ಸಾಮೂಹಿಕ ವಿವಾಹ ಮತ್ತು ರಕ್ತದಾನ ಶಿಬಿರ, ಶ್ರೀಗಳಿಗೆ ಪುಷ್ಪಾಭಿಷೇಕ, ಗುರುವಂದನೆ ಕಾರ್ಯಕ್ರಮಗಳು ನಡೆದವು. [ಚಿತ್ರಗಳು : ಜೋಗಿ ಮಠದ ಶ್ರೀಗಳ ಪಟ್ಟಾಭಿಷೇಕ]

nanjavadutha swamiji

ಮಠದ ಕುರಿತು : ಪಟ್ಟ ನಾಯಕನಹಳ್ಳಿಯ ಶ್ರೀಮಠ ಅವಧೂತ ಗುರು ಪರಂಪರೆಗೆ ಸೇರಿದ್ದು. 19ನೇ ಶತಮಾನದಲ್ಲಿ ತಮ್ಮ ಗುರುಗಳ ನೆನಪಿನಲ್ಲಿ 1ನೇ ನಂಜಾವಧೂತ ಸ್ವಾಮೀಜಿ ಪೀಠವನ್ನು ಸ್ಥಾಪನೆ ಮಾಡಿದರು. [ಮಠದ ಫೇಸ್ ಬುಕ್ ಪುಟ]

ತಮ್ಮ ಪವಾಡಗಳಿಂದ ಭಕ್ತರ ಮನಗೆದ್ದ ಶ್ರೀಗಳು ಅಂತ್ಯ ಕಾಲದಲ್ಲಿ ಭಕ್ತರ ಮುಂದೆ ನಾನು ಶ್ರೀಮಠದ 7ನೇ ಗುರುವಾಗಿ ಮತ್ತೆ ಪೀಠಾರೋಹಣ ಮಾಡುತ್ತೇನೆ. ಅಂದು ಎಣ್ಣೆಯಿಲ್ಲದ ದೀಪ, ಎತ್ತಿಲ್ಲದ ಗಾಡಿ ಮತ್ತು ಶ್ರೀಮಠದ ಮುಂದೆ ಗಂಗೆ ಹರಿಯುತ್ತಾಳೆ ಎಂಬ ಮಾತನ್ನು ಹೇಳಿ ಲಿಂಗೈಕ್ಯರಾದರು. [ಕೊಪ್ಪಳ : ನವ ಬೃಂದಾವನ ಗಡ್ಡೆ ಪೂಜೆ ವಿವಾದಕ್ಕೆ ತೆರೆ?]

ತದನಂತರ ರಂಗಾವಧೂತ ಶ್ರೀ, ಶ್ರೀರಂಗಾವಧೂತ ಶ್ರೀ, ಮುದ್ದರಂಗವಧೂತ ಶ್ರೀ, ಪರಮಹಂಸವಧೂತ ಶ್ರೀಗಳು ಹಾಗೂ ಶ್ರೀ ಗುರುಕುಮಾರವಾಧೂತ ಶ್ರೀಗಳು ಪೀಠವನ್ನು ಅಲಂಕರಿಸಿ, ಮಠದ ಪರಂಪರೆಯನ್ನು ಬೆಳೆಸಿಕೊಂಡು ಬಂದರು. ಪ್ರಸುತ್ತ 7ನೇ ಪೀಠಾಧ್ಯಕ್ಷರಾಗಿರುವ ಶ್ರೀ ನಂಜಾವಧೂತರು ಭಕ್ತರ ಅಪೇಕ್ಷೆಯಂತೆ ಅನೇಕ ಸಮಾಜಸೇವೆಯ ಕೆಲಸಗಳನ್ನು ಮಾಡುತ್ತಾ, ಶ್ರೀಮಠ ವಿಶ್ವ ಪ್ರಸಿದ್ಧಿಯಾಗುವಂತೆ ಮಾಡಿದರು. [ಮಠಗಳಿಗೆ ನಿಯಂತ್ರಣ ಹಾಕುವ ವಿಧೇಯಕ ವಾಪಸ್]

ಶೇಂಗಾ, ಸೂರ್ಯಕಾಂತಿ, ರಾಗಿ ಮಾತ್ರ ಬೆಳೆಯುತ್ತಿದ್ದ ತಾಲೂಕಿನ ರೈತರಿಗೆ ಕಡಿಮೆ ನೀರು ಬಳಸಿ ತೋಟಗಾರಿಕಾ ಬೆಳೆಗಳನ್ನು ಬೆಳೆಯಬಹುದು ಎಂದು ಅರಿವು ಮೂಡಿಸುವ ಕಾರ್ಯ ಮಾಡಿದ್ದು, ಶ್ರೀಗಳು. ರೈತರಿಗಾಗಿ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಏರ್ಪಡಿಸುವ ಮೂಲಕ ನೂತನ ತಂತ್ರ ಜ್ಞಾನದ ಪರಿಚಯ ಮಾಡಿಕೊಟ್ಟಿದ್ದು ಶ್ರೀಗಳು. [ಸಿಂಹಾವಲೋಕನ 2014 : ರಾಜ್ಯದಲ್ಲಿ ಕಾವಿಧಾರಿಗಳ ಸಂಚಲನ]

ಶ್ರೀಗಳ ಸೇವಾ ಕಾರ್ಯಗಳನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ,
ಎಚ್.ಡಿ. ಕುಮಾರಸ್ವಾಮಿ, ಧರ್ಮಸಿಂಗ್, ಸದಾನಂದಗೌಡ, ಆಂಧ್ರದ ಮಾಜಿ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ್ ರೆಡ್ಡಿ ಮುಂತಾದವರು ಶ್ಲಾಘಿಸಿದ್ದಾರೆ.

ಜಲಕ್ಕಾಗಿ ಹಕ್ಕೊತ್ತಾಯ : ಯಾವ ನೀರಿನ ಸೆಲೆಯೂ ಇಲ್ಲದೆ ತತ್ತರಿಸಿರುವ ಬಯಲುಸೀಮೆಗೆ ನೀರನ್ನು ಯಾವ ಮೂಲದಿಂದ ಅದರೂ ಸರಿಯೇ ಕೂಡಿ ಎಂಬ ಹಕ್ಕೋತ್ತಾಯವನ್ನು ಸರ್ಕಾರಕ್ಕೆ ಮುಟ್ಟಿಸುವ ಶ್ರೀಗಳ ಮನದಾಳ ಅರಿತ ಸರ್ಕಾರ ಭದ್ರಾ ಮೇಲ್ಡಂಡೆ ಸೇರಿದಂತೆ ಹಲವು ನೀರಾವರಿ ಯೋಜನೆ ಜಾರಿಗೆ ಮುಂದಾಗಿರುವುದು ಶ್ರೀಗಳ ಹೋರಾಟಕ್ಕೆ ಸಿಕ್ಕ ಯಶಸ್ಸು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Sri Gurugunda Brahmeshwara mutt Nanjavadutha Swamiji turned 37 on April 21, 2016. Brahmeshwara mutt established in 19th century at Sira taluk, Tumakuru district, Karnataka.
Please Wait while comments are loading...