ಜಿಎಸ್ ಬಿ, ಜ್ಯೋತಿಗಣೇಶ್ ಕೊಳಕುಮಂಡಲ : ಶಿವಣ್ಣ ಕೆಂಡಾಮಂಡಲ

By: ಕುಮಾರಸ್ವಾಮಿ
Subscribe to Oneindia Kannada

ತುಮಕೂರು, ಜನವರಿ 7: ಮಾಜಿ ಸಚಿವ ಸೊಗಡು ಶಿವಣ್ಣ ವಿಪರೀತ ಸಿಟ್ಟಾಗಿದ್ದಾರೆ. ತಾವು ಪಕ್ಷ ಬಿಡುವುದಾಗಿ ಯಾರ್ಯಾರೋ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಅದರ ಹಿಂದೆ ಇರೋದು ಮಾಜಿ ಸಂಸದ ಜಿ.ಎಸ್.ಬಸವರಾಜು ಹಾಗೂ ಅವರ ಮಗ-ಬಿಜೆಪಿ ಜಿಲ್ಲಾಧ್ಯಕ್ಷ ಜ್ಯೋತಿಗಣೇಶ್ ಎಂದು ಆರೋಪಿಸಿದ್ದಾರೆ.

ಮಾಜಿ ಸಚಿವ ಶಿವಣ್ಣ ಜೆಡಿಎಸ್ ಗೆ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿ ಹರಡುತ್ತಿರುವ ಹಿನ್ನೆಲೆಯಲ್ಲಿ ಅವರು ಸ್ಪಷ್ಟನೆ ನೀಡಿದರು. ನಾವು ಕಟ್ಟಿರುವ ಹುತ್ತಕ್ಕೆ ಕೊಳಕ ಮಂಡಲ ಹಾವು ಸೇರಿಕೊಂಡಂತೆ ಆಗಿದೆ ಎಂದು ಶನಿವಾರ ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.[ಅಂತ್ಯಸುಬ್ರಹ್ಮಣ್ಯ ಪಾವಗಡದ ನಾಗಲಮಡಿಕೆಯಲ್ಲಿ ರಥೋತ್ಸವ]

Sogadu Shivanna angry on GSB and Jyothi Ganesh

ಚೆನ್ನಿಗಪ್ಪ ನನ್ನ ಸ್ನೇಹಿತರು. ಹೀಗಾಗಿ ಬೇಟಿ ಮಾಡಿದ್ದೆ ವಿನಾ ಬೇರೇನೂ ವಿಚಾರ ಇಲ್ಲ. ಆದರೆ ಅಪ್ಪ-ಮಕ್ಕಳು ನನ್ನ ವಿರುದ್ಧ ಬೇಕೆಂತಲೆ ಇಂಥ ಚಿತಾವಣೆ ಮಾಡುತ್ತಿದ್ದಾರೆ. ತುಮಕೂರಿನಲ್ಲಿ ಬಿಜೆಪಿ ಒಡೆದ ಮನೆಯಾಗಲು ಜಿ.ಎಸ್.ಬಸವರಾಜು ಹಾಗೂ ಜ್ಯೋತಿಗಣೇಶ್ ಕಾರಣ ಎಂದು ಆರೋಪಿಸಿದರು.['ಜೈ ಗಂಗಾಜಲ್' ಸಿನಿಮಾ ಖ್ಯಾತಿಯ ಇಶಾ ಪಂತ್ ತುಮಕೂರು ಎಸ್ಪಿ]

ಆ ನಂತರ ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದ ಶಿವಣ್ಣ, ಕಾಂಗ್ರೆಸ್ ಸರಕಾರಕ್ಕೆ ಮಾನ-ಮರ್ಯಾದೆ ಇಲ್ಲ. ಗೃಹಸಚಿವರಿಗೆ ಇಲಾಖೆ ಮೇಲೆ ನಿಯಂತ್ರಣವೇ ಇಲ್ಲ. ಪರಮೇಶ್ವರ್ ಹೇಳಿಕೆ ಗಮನಿಸಿದರೆ ವಿದೇಶಿ ಸಂಸ್ಕೃತಿ ಅವರದು ಅನಿಸುತ್ತದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಘಟನೆಗಳಿಗೆ ನೈತಿಕ ಹೊಣೆ ಹೊತ್ತು ಗೃಹಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.[ರಾಯಣ್ಣ ಬ್ರಿಗೇಡ್: ಮಾಜಿ ಸಚಿವ ಸೊಗಡು ಶಿವಣ್ಣ ಸಂದರ್ಶನ]

ಈಗ ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರಕ್ಕೆ ಆರು ತಿಂಗಳು ಮಾತ್ರ ಆಯಸ್ಸು. ಇವರಿಗೆ ಅಕ್ರಮಕ್ಕೆ ಕಡಿವಾಣ ಹಾಕುವ ಶಕ್ತಿ ಇಲ್ಲ ಎಂದು ವ್ಯಂಗ್ಯವಾಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former minister Sogadu Shivanna angry on Ex MP G.S.Basavaraju and BJP District president Jyothi Ganesh in Tumakuru on Saturday. He denies the rumour of JDS party joining and alleges on political opponents.
Please Wait while comments are loading...