ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಸಚಿವ ರೈ 1 ತಿಂಗಳು ಮಂಗಳೂರಿಗೆ ಹೋಗದಿದ್ದರೆ ಶಾಂತಿ ನೆಲೆಸುತ್ತದೆ'

|
Google Oneindia Kannada News

ಮಂಗಳೂರಿನಲ್ಲಿ ನಡೆದ ಕೊಲೆಗೆ ಸಚಿವ ರಮಾನಾಥ್ ರೈ ಮತ್ತು ಸಿಎಂ ಸಿದ್ದರಾಮಯ್ಯ ಜವಾಬ್ದಾರರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗಂಭೀರ ಆರೋಪ ಮಾಡಿದ್ದಾರೆ.

ಮಂಗಳೂರು: ಹಲ್ಲೆಗೊಳಗಾಗಿದ್ದ ಆರೆಸ್ಸೆಸ್ ಕಾರ್ಯಕರ್ತ ಶರತ್ ಸಾವುಮಂಗಳೂರು: ಹಲ್ಲೆಗೊಳಗಾಗಿದ್ದ ಆರೆಸ್ಸೆಸ್ ಕಾರ್ಯಕರ್ತ ಶರತ್ ಸಾವು

ಸೋಮವಾರ ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಎಸ್ ವೈ, " ಮಂಗಳೂರಿನಲ್ಲಿ ನಡೆದ ಗಲಭೆಯ ಹಿಂದೆ ಸಚಿವ ರಮಾನಾಥ್ ರೈ ಪಿತೂರಿಯಿದೆ. ಸಚಿವರಿಂದಲೇ ಗಲಭೆಗೆ ಕುಮ್ಮಕ್ಕು ನೀಡಲಾಗಿದೆ. ಸಚಿವ ರೈ ಒಂದು ತಿಂಗಳು ಮಂಗಳೂರಿಗೆ ಹೋಗದಿದ್ದರೆ ಶಾಂತಿ ನೆಲೆಸುತ್ತದೆ" ಎಂದು ವಾಗ್ದಾಳಿ ನಡೆಸಿದರು.

siddaramaiah and Ramanath rai responcible for Mangaluru murder says yeddyurappa

ಶೋಭಾ ಕರಂದ್ಲಾಜೆ ಅನ್ಯಾಯದ ವಿರುದ್ಧ ಹೋರಾಡಿದ್ದಾರೆ. ಅನ್ಯಾಯದ ವಿರುದ್ಧ ಹೋರಾಡಿದಕ್ಕೆ ಅವರ ಮೇಲೆ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಯೋಗ್ಯತೆಯಿಲ್ಲ. ಸಂಸದರ ಮೇಲೆ ಎಫ್‌ ಐಆರ್ ದಾಖಲಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಕೀಳುಮಟ್ಟಕ್ಕೆ ಇಳಿದಿದ್ದಾರೆ ಎಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.

English summary
CM Siddaramaiah and forest minister Ramanath rai responcible for Mangaluru RSS rss activist murder, said Karnataka BJP state president B S yeddyurappa in press conference in Tumkur on July 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X