ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಮುಳುಗುತ್ತಿರುವ ಕಾಂಗ್ರೆಸ್ ಹಡಗು ಉಳಿಸಲು ಸಿದ್ದು ಶತಪ್ರಯತ್ನ'

By ಕುಮಾರಸ್ವಾಮಿ
|
Google Oneindia Kannada News

ತಿಪಟೂರು (ತುಮಕೂರು ಜಿಲ್ಲೆ), ಮಾರ್ಚ್ 26: ಸಿದ್ದರಾಮಯ್ಯ ದೆಹಲಿಗೆ ಬಂದಾಗ ನಾಟಕೀಯವಾಗಿ ಮಾತನಾಡ್ತಿದ್ದರು. ಮೋದಿಯವರೇ ನೀವು ಕರ್ನಾಟಕಕ್ಕೆ ಏನು ಮಾಡಿದ್ದೀರಿ? ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಅವರ ಸರಕಾರ ಇದ್ದಾಗ ಕರ್ನಾಟಕಕ್ಕೆ ಬಂದದ್ದು 88 ಸಾವಿರ ಕೋಟಿ. ಅದೇ ನರೇಂದ್ರ ಮೋದಿ ಸರಕಾರ ಎರಡು ಲಕ್ಷ ಕೋಟಿಗೂ ಹೆಚ್ಚು ನೀಡಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಇಲ್ಲಿ ಸೋಮವಾರ ತೆಂಗು ಬೆಳೆಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಮೊತ್ತ ಕೇಳಿಯೇ ಸಂತುಷ್ಟರಾಗಬೇಡಿ. ಈ ಪೈಕಿ ಎಷ್ಟು ಹಣ ನಿಮ್ಮನ್ನು ತಲುಪಿದೆ ಹೇಳಿ ಎಂದರು. ಅಮಿತ್ ಶಾ ಅವರ ಹಿಂದಿ ಭಾಷಣವನ್ನು ಕೇಂದ್ರ ಸಚಿವ ಅನಂತಕುಮಾರ್ ಕನ್ನಡಕ್ಕೆ ಅನುವಾದ ಮಾಡಿದರು. ಭಾಷಣದ ಪ್ರಮುಖಾಂಶಗಳು ಇಲ್ಲಿವೆ.

ಚಿತ್ರಗಳು : ಕವಿಶೈಲಕ್ಕೆ ಅಮಿತ್ ಶಾ ಭೇಟಿಚಿತ್ರಗಳು : ಕವಿಶೈಲಕ್ಕೆ ಅಮಿತ್ ಶಾ ಭೇಟಿ

* ಈ ಸರಕಾರ ಬಂದು ಐದು ವರ್ಷ ಆಗ್ತಿದೆ. ಇಷ್ಟು ಕಾಲ ಲಿಂಗಾಯತ ಪ್ರತ್ಯೇಕ ಧರ್ಮ ಏಕೆ ನೆನಪಾಗ್ತಿದೆ? ಅಲ್ಪಸಂಖ್ಯಾತ ಪಟ್ಟ ಕಟ್ಟಲು ಹೊರಟಿದ್ದಾರೆ. ಏಕೆಂದರೆ ಈಗ ಚುನಾವಣೆ ಬರ್ತಿದೆ. ಈ ಹಿಂದೆ ಯುಪಿಎ ಸರಕಾರ ಇದ್ದಾಗ ಕಳುಹಿಸಿದ ಮನವಿಯನ್ನು ಮನಮೋಹನ್ ಸಿಂಗ್, ಸೋನಿಯಾ ಗಾಂಧಿ ಅವರು ತಿರಸ್ಕರಿಸಿದ್ದರು. ಆದರೆ ಈಗ ಮನವಿ ಕಳುಹಿಸಿರುವುದು ಪ್ರೀತಿಯಿಂದ ಅಲ್ಲ. ಆದರೆ ನಾವು ಮುಖ್ಯಮಂತ್ರಿ ಆಗಿ ಯಡಿಯೂರಪ್ಪ ಅವರನ್ನು ಘೋಷಣೆ ಮಾಡಿದ್ದೇವೆ. ಚುನಾವಣೆ ನಂತರವೂ ಇದರಲ್ಲಿ ಯಾವ ಬದಲಾವಣೆಯೂ ಇಲ್ಲ. ಲಿಂಗಾಯತರಲ್ಲಿ ಮನವಿ ಮಾಡ್ತೇನೆ, ಸಿದ್ದರಾಮಯ್ಯ ಅವರ ಮಂಕುಬೂದಿ ಎರಚುವ ತಂತ್ರಕ್ಕೆ ಬಲಿಯಾಗಬೇಡಿ.

Siddaramaiah dividing society like Britishers: Amit Shah

* ತಿಪಟೂರು ರೈತರ ಮೂಲಕ ಇಡೀ ಕರ್ನಾಟಕದ ಜನತೆಗೆ ಮನವಿ ಮಾಡುತ್ತಿದ್ದೇನೆ, ದಯವಿಟ್ಟು ನಮಗೆ ಆಶೀರ್ವಾದ ಮಾಡಿ. ಮೋದಿ ನೇತೃತ್ವದಲ್ಲಿ ಯಡಿಯೂರಪ್ಪ ಅವರಿಗೆ ಆಶೀರ್ವಾದ ಮಾಡಿ. ಇನ್ನು ಐದು ವರ್ಷದಲ್ಲಿ ಕರ್ನಾಟಕವನ್ನು ದೇಶದಲ್ಲೇ ನಂಬರ್ ಒನ್ ರಾಜ್ಯವಾಗಿ ಅಭಿವೃದ್ಧಿ ಮಾಡಿ ತೋರಿಸುತ್ತೇವೆ.

ಸಮಾಜವಾದಿ ಸಿದ್ದು ಕೈಗೆ 40 ಲಕ್ಷದ ವಾಚ್ ಬಂದಿದ್ದು ಹೇಗೆ?: ಅಮಿತ್ ಶಾಸಮಾಜವಾದಿ ಸಿದ್ದು ಕೈಗೆ 40 ಲಕ್ಷದ ವಾಚ್ ಬಂದಿದ್ದು ಹೇಗೆ?: ಅಮಿತ್ ಶಾ

* ಕಮಲದ ಚಿಹ್ನೆ ಮೇಲೆ ಬಟನ್ ಒತ್ತುತ್ತೀರಾ? ಬಿಜೆಪಿಎ ಮತ ಹಾಕ್ತೀರಾ ತಾನೆ? ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡ್ತೀರಿ ತಾನೆ? ನರೇಂದ್ರ ಮೋದಿ ಅವರ ಕೈ ಬಲಪಡಿಸ್ತೀರಿ ತಾನೆ?

ಚುನಾವಣಾ ಪ್ರಚಾರ ಚಿತ್ರಸಂಪುಟ : ಬಿಜೆಪಿ | ಕಾಂಗ್ರೆಸ್ | ಜೆಡಿಎಸ್

* ಹಿಂದೂ ಸಮಾಜವನ್ನು ಒಡೆಯುವ ಕೆಲಸ ಮಾಡ್ತಿದ್ದಾರೆ. ಸಿದ್ದರಾಮಯ್ಯ ಅವರು ಅಹಿಂದ ನಾಯಕ ಅಂತ ಕರೆದುಕೊಳ್ತಾರೆ. ಆದರೆ ನೀವು ಆ ಹಿಂದೂ ನಾಯಕರು. ಹಿಂದೂವಿರೋಧಿ ನಾಯಕರು.

* ಕಾಂಗ್ರೆಸ್ ಹಡಗು ಮುಳುಗ್ತಾ ಇದೆ. ಹೇಗಾದರೂ ಮಾಡಿ ಬಚಾವಾಗಲು ಸಿದ್ದರಾಮಯ್ಯ ಅವರು ಕೈ-ಕಾಲು ಬಡಿಯುತ್ತಿದ್ದಾರೆ. ಆ ಪ್ರಯತ್ನದಂತೆ ಸಮಾಜ ಒಡೆದು ಆಳುವ ನೀತಿಯನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ.

* ಇಡೀ ದೇಶದಲ್ಲಿ ನಂಬರ್ ಒನ್ ರಾಜ್ಯ ಕರ್ನಾಟಕ ಎಂದು ಬೋರ್ಡ್ ಹಾಕಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಇಂದು ಬೆಳಗ್ಗೆ ಹೇಳಿದ್ದಾರೆ: ಬೆಂಗಳೂರಿನಿಂದ ವಿಮಾನ ನಿಲ್ದಾಣ ತಲುಪುವ ಹೊತ್ತಿಗೆ ಮೂರು ವಿಮಾನವನ್ನು ತಪ್ಪಿಸಿಕೊಂಡಿರ್ತೀವಿ. ಕರ್ನಾಟಕದಲ್ಲಿ ನೀರು ಕೊಡುವುದರಲ್ಲಿ ನಂಬರ್ ಒನ್ ಅಲ್ಲ, ರಸ್ತೆಯಲ್ಲಿ ನಂಬರ್ ಒನ್ ಅಲ್ಲ, ನೀರಾವರಿಯಲ್ಲಿ ನಂಬರ್ ಒನ್ ಅಲ್ಲ. ಆದರೆ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಎಂದಿದ್ದಾರೆ.

English summary
Karnataka CM Siddaramaiah dividing society like Britishers, alleges BJP national president Amit Shah in Tumakuru district, Tiptur district convention on Monday. He is on Karnataka tour citing Assembly elections 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X