ಪ್ರತ್ಯೇಕ ಧರ್ಮ ಹೋರಾಟಕ್ಕೆ ಶಿವಕುಮಾರ ಸ್ವಾಮೀಜಿ ಅಸಮಾಧಾನ?

Posted By:
Subscribe to Oneindia Kannada

ತುಮಕೂರು, ಡಿಸೆಂಬರ್ 29: ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಗಾರರಿಗೆ ಪ್ರಬಲ ಹಿನ್ನೆಡೆಯೊಂದು ಎದುರಾಗುವ ಸೂಚನೆ ತುಮಕೂರಿನಿಂದ ಬಂದಿದೆ. ರಾಜ್ಯದ ಪ್ರಮುಖ ಶ್ರೀಗಳಾದ ಸಿದ್ದಗಂಗೆ ಶಿವಕುಮಾರ ಸ್ವಾಮಿಗಳು ಪ್ರತ್ಯೇಕ ಧರ್ಮ ವಿಚಾರಕ್ಕೆ ಅಸಮಾಧಾನ ಹೊಂದಿದ್ದಾರೆ ಎನ್ನುವ ಸುದ್ದಿಗಳು ಕೇಳಿಬರುತ್ತಿವೆ.

ವೀರಶೈವ- ಲಿಂಗಾಯತ ಒಂದೇ: ಸಿದ್ದಗಂಗಾ ಮಠದ ನಿಲುವು ಪ್ರಕಟ

ಡಾ. ಶಿವಕುಮಾರ ಸ್ವಾಮೀಜಿ ಅವರು ಪ್ರತ್ಯೇಕ ಧರ್ಮ ಹೋರಾಟದ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂದು ಶ್ರೀಶೈಲ ಜಗದ್ಗುರುಗಳು ಹೇಳಿದ್ದಾರೆ. ಶ್ರೀಶೈಲ ಜಗದ್ಗುರುಗಳು ಸಿದ್ದಗಂಗಾ ಶ್ರೀಗಳೊಂದಿಗೆ ಇಂದು ಕೆಲ ಕಾಲ ಸಮಯ ಕಳೆದ ಬಳಿಕ ತಮಗೆ ಎದುರಾದ ಮಾಧ್ಯಮದವರೊಂದಿಗೆ ಈ ವಿಷಯವನ್ನು ಹೇಳಿದ್ದಾರೆ.

Siddaganga Sri allegedly unhappy with separate religion

ಧರ್ಮ ಒಡೆಯಲು ನಿಂತಿರುವವರಿಗೆ ಸಾಮುದಾಯದ ಬಗ್ಗೆ ಕಾಳಜಿ ಇಲ್ಲ ಎಂದು ಶಿವಕುಮಾರ ಸ್ವಾಮಿಗಳು ಅಭಿಪ್ರಾಯ ಪಟ್ಟಿದ್ದಾರೆ ಎಂದು ಶ್ರೀಶೈಲ ಜಗದ್ಗುರುಗಳು ಮಾಧ್ಯಮದವರೊಂದಗೆ ಹೇಳಿದ್ದಾರೆ.

ಇಷ್ಟು ದಿನ ಪ್ರತ್ಯೇಕ ಧರ್ಮ ವಿಚಾರದಲ್ಲಿ ಮೌನದಿಂದಿದ್ದ ಶ್ರೀಗಳು ತಮ್ಮ ಆಪ್ತರ ಬಳಿ ಈ ಬಗ್ಗೆ ಅಸಮಧಾನವ್ಯಕ್ತಪಡಿಸುವುದು ಪ್ರತ್ಯೇಕ ಧರ್ಮ ಹೋರಾಟಕ್ಕೆ ಹೊಸ ಆಯಾಮ ನೀಡಬಹುದು ಎನ್ನಲಾಗಿದೆ, ಶ್ರೀಗಳು ಬಹಿರಂಗವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿಲ್ಲವಾದ ಕಾರಣ ಇದನ್ನು ಅಧಿಕೃತ ಎನ್ನಲಾಗದು ಎಂಬ ವಾದವೂ ಕೇಳಿ ಬರುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Siddaganga Shivakumara swamiji is not happy with separate religion protest' said Srishyla Jagadguru in Tumakur today. Srishyla Jagadguru spent some time with Shivakumara swamiji today. and He said Swamiji is unhappy with the separation of religion.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ