ಗ್ರಾಮಾಂತರ ಮಕ್ಕಳ ಕಣ್ಣಿಗೆ ಬೆಳಕಾಗುವ 'ಉಷಾಕಿರಣ'

Posted By:
Subscribe to Oneindia Kannada

ತುಮಕೂರು, ಜನವರಿ.05: ಅಂಗನವಾಡಿ ಮತ್ತು ಶಿಶುವಿಹಾರ ಪುಟ್ಟ ಮಕ್ಕಳ ನೇತ್ರ ತಪಾಸಣೆ ‘ಉಷಾಕಿರಣ' ಯೋಜನೆಯು ಪಾವಗಡದ ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆಯಲ್ಲಿ ಜನವರಿ 7 ರಂದು ಪಾವಗಡದ ಸ್ವಾಮಿ ವಿವೇಕಾನಂದ ಗ್ರಾಮೀಣ ಆರೋಗ್ಯಕೇಂದ್ರದ ವಿವೇಕಾನಂದ ಸಭಾಗಂಣದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಇಡೀ ರಾಜ್ಯದಲ್ಲಿಯೇ ಗ್ರಾಮಾಂತರ ಪ್ರದೇಶದಲ್ಲಿ ಪ್ರಪ್ರಥಮಬಾರಿಗೆ ಈ ಯೋಜನೆ ಆರಂಭಗೊಳ್ಳುತ್ತಿದೆ. ಪ್ಲಸ್‍ಆಪ್ಟಿಕ್ಸ್ ವಿಷನ್ ಸ್ಕ್ರೀನರ್ ಯಂತ್ರವನ್ನು ಬಳಸಿಕೊಂಡು ಅಂಗನವಾಡಿಗಳಿಂದ ಶಾಲಾ ವಿದ್ಯಾರ್ಥಿಗಳವರೆಗೆ ಎಲ್ಲ ಮಕ್ಕಳನ್ನು ತಪಾಸಣೆ ಮಾಡಲು ಪಾವಗಡ ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಉದ್ದೇಶಿಸಿದೆ. ದೃಷ್ಟಿ ದೋಷಗಳನ್ನು ಪತ್ತೆ ಹಚ್ಚಲು ಈ ವಿಧಾನವನ್ನು ಅಮೆರಿಕ, ಜರ್ಮನಿ ಸೇರಿದಂತೆ ವಿಶ್ವದೆಲ್ಲೆಡೆ ಬಳಸಲಾಗುತ್ತಿದೆ.[ಭಾರತದ ಮಾರುಕಟ್ಟೆಗೆ ಡೆಂಗ್ಯೂ ಲಸಿಕೆ ಯಾವಾಗ ಬರುತ್ತದೆ?]

Tumakuru

ಗ್ರಾಮೀಣ ಭಾರತದ ಒಂದು ಸರ್ಕಾರೇತರ ಸ್ವಯಂಸೇವಾ ಸಂಸ್ಥೆಯಲ್ಲಿ ಮುಂದುವರಿದ ತಂತ್ರಜ್ಞಾನ ಬಳಸುತ್ತಿರುವುದು ಇದೇ ಮೊದಲು. ಈ ಯೋಜನೆಗೆ ವಿಶೇಷವಾಗಿ ಅಮೆರಿಕಾ ದೇಶದ ವಿಶಿಷ್ಟ ರೀತಿಯ ನೇತ್ರ ತಪಾಸಣಾ ಯಂತ್ರ ಅರ್ಪಿಸಲಾಗುತ್ತಿದೆ. ಈ ಕಾರ್ಯಕ್ರಮದ ರೂವಾರಿಯಾಗಿ ಪ್ರಖ್ಯಾತ ಶಿಶು ನೇತ್ರ ತಜ್ಞರು, ಸಂಶೋಧಕರಾದ ಡಾ.ಅಶ್ವಿನ್ ಮಲ್ಲಿಪಟ್ಣ ರವರು ನೀಲಿನಕ್ಷೆ ತಯಾರಿಸಿ ಕಾರ್ಯಕ್ರಮದ ಮೊದಲನೆಯ ಹಂತ ಆರಂಭಿಸಿದ್ದಾರೆ.

ಉಷಾಕಿರಣ ಕಾರ್ಯಕ್ರಮಕ್ಕೆ ತುಮಕೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಬಿ.ಆರ್.ಮಮತಾ ಅಧ್ಯಕ್ಷತೆ ವಹಿಸುವರು. ಇಂಗ್ಲೆಂಡ್ ತಜ್ಞ ವೈದ್ಯರಾದ ಡಾ. ಸೂರ್ಯನಾರಾಯಣ ಶೆಟ್ಟಿ ಮುಖ್ಯ ಅತಿಥಿಗಳಾಗಿ, ವಿಶೇಷ ಆಹ್ವಾನಿತರಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎನ್.ಶಶಿಕಲಾ, ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕ ನಂಜೇಗೌಡ, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ. ಚೇತನ್, ತಹಸೀಲ್ದಾರ್ ವರದರಾಜು ಮತ್ತಿತರರು ಭಾಗವಹಿಸುವರು.[ರಿಯಾಯಿತಿ ದರದಲ್ಲಿ ಸಿಟಿ ಮತ್ತು ಎಂಐಆರ್ ಸ್ಕ್ಯಾನಿಂಗ್ ವ್ಯವಸ್ಥೆ]

ಉಷಾಕಿರಣ ಯೋಜನೆಗೆ ಕೈ ಜೋಡಿಸಿದವರು ಯಾರು?

ಈ ಯೋಜನೆಗೆ ಪ್ರಖ್ಯಾತ ಫೋರಸ್ ಕಂಪೆನಿ ಮಾಹಿತಿ ತಂತ್ರಜ್ಞಾನ ನೀಡುತ್ತಿದೆ. ಈ ಸಂಶೋಧನಾ ಯೋಜನೆಗೆ ನಾಡಿನ ಸುಪ್ರಸಿದ್ಧ ನಾರಾಯಣ ನೇತ್ರಾಲಯ ಕೈಜೋಡಿಸಿದೆ. ಸ್ವಾಮಿ ವಿವೇಕಾನಂದ ಗ್ರಾಮಾಂತರ ಆರೋಗ್ಯ ಕೇಂದ್ರವು ರೋಟರಿ ಕ್ಲಬ್ ಓಲ್ಡ್ ಹ್ಯಾಂ ರವರು ನೀಡಿರುವ ಪ್ರಸೂತಿ ಪರಿಕರಗಳನ್ನು ನೀಡಲಾಗುತ್ತಿದೆ.[ಏಡ್ಸ್ ಕುರಿತು ನೀವು ತಿಳಿದಿರಲೇಬೇಕಾದ 8 ಸಂಗತಿಗಳು]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Shree Sharadadevi Eye Hospital and research centre and Swami Vivekananda Intergrated Rural Health Centre lunch of Usha Kirana project for small kids in Pavagada, Tumakur on Thursday, January 7th at 11 AM. The function will be presided over by Dr. B.R Mamatha, CEO, Zilla Panchayath, Tumakur, Chief guests Dr R.S. Suryanarayana setty.
Please Wait while comments are loading...