ತುಮಕೂರು: ಅರತಕ್ಷತೆ ಊಟ ಉಂಡು 40ಕ್ಕೂ ಅಧಿಕ ಮಂದಿ ಅಸ್ವಸ್ಥ

Posted By:
Subscribe to Oneindia Kannada

ತುಮಕೂರು, ಮೇ 14 : ಶನಿವಾರ ಇಲ್ಲಿನ ಮಲ್ಲೆನಳ್ಳಿಯಲ್ಲಿ ನಡೆದ ಮದುವೆ ಆರತಕ್ಷತೆಯೊಂದರಲ್ಲಿ ಆಹಾರ ಸೇವಿಸಿ ಸುಮಾರು 40ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ.

ಮಲ್ಲೆನಳ್ಳಿ ನಿವಾಸಿ ರಮೇಶ್ ಮತ್ತು ವೀಣಾ ಎಂಬವರ ಮದುವೆ ಶುಕ್ರವಾರ ನಡೆದಿತ್ತು. ಶನಿವಾರ ಇವರು ಇಟ್ಟುಕೊಂಡಿದ್ದ ಆರತಕ್ಷತೆಯಲ್ಲಿ ಊಟ ಸೇವಿಸಿದ ಸುಮಾರು 40ಕ್ಕೂ ಹೆಚ್ಚು ಜನರಿಗೆ ವಾಂದಿ ಶುರುವಾಗಿದೆ. ಕೂಡಲೇ ಅವರನ್ನು ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.

Several people unwell after eating food at a marriage recepion in tumkur

ಅರಕ್ಷತೆಯಲ್ಲಿ ಮಾಡಲಾಗಿದ್ದ ಅನ್ನ ಸಾಂಬಾರ್, ಪಾಯಸ, ಚಿತ್ರಾನ್ನ ಸೇರಿದಂತೆ ವಿವಿಧ ತರಹನಾದ ಆಹಾರ ಸೇವಿಸಿದ್ದಾರೆ. ಬಳಿಕ ಕೆಲವರಿಗೆ ವಾಂತಿ, ಹೊಟ್ಟೆ ನೋವು ಕಾಣಿಸಿಕೊಂಡಿದೆ. ಈ ಬಗ್ಗೆ ಬೆಳ್ಳಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Several people unwell after eat food at a marriage recepion in Mallenahalli Tumkur district on May 13.
Please Wait while comments are loading...