ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೆ.13ರಂದು ಶೀಬಿ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ

|
Google Oneindia Kannada News

ತುಮಕೂರು, ಫೆಬ್ರವರಿ 8: ಇದೇ ತಿಂಗಳ 13ರಂದು ತಾಲೂಕಿನ ಬೆಳ್ಳಾವಿ ಹೋಬಳಿಯಲ್ಲಿರುವ ಶೀಬಿ ನರಸಿಂಹ ಸ್ವಾಮಿ ಬ್ರಹ್ಮರಥೋತ್ಸವ ಇದ್ದು, ಫೆಬ್ರವರಿ 10ರಿಂದ 13ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಫೆ.10ರಂದು ಬೆಳಗ್ಗೆ ದೇವರಿಗೆ ಅಭಿಷೇಕ ಹಾಗೂ ಅರ್ಚನೆ, ಸಂಜೆ ಅಂಕುರಾರ್ಪಣೆ, ಪ್ರಹ್ಲಾದೋತ್ಸವ ಹಾಗೂ ಬೆಳ್ಳಿ ಡೋಲೋತ್ಸವ.

11ರಂದು ಬೆಳಗ್ಗೆ ಅಭಿಷೇಕ, ಅರ್ಚನೆ, ಧ್ವಜಾರೋಹಣ, ಸಂಜೆ ಗಜೇಂದ್ರ ಮೋಕ್ಷ. 12ರಂದು ಬೆಳಗ್ಗೆ ಅಭಿಷೇಕ ಹಾಗೂ ಅರ್ಚನೆ. ಸಂಜೆ ಲೋಕಾಂಬ, ಚೆಂಚುಮಾಂಬ ಸಮೇತ ಶೀಬಿ ನರಸಿಂಹ ದೇವರ ಕಲ್ಯಾಣೋತ್ಸವ ನಡೆಯಲಿದೆ. ಫೆಬ್ರವರಿ 13ರಂದು ನರಸಿಂಹಸ್ವಾಮಿ ಬ್ರಹ್ಮರಥೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಎನ್.ಕೆ.ಮೋಹನ್ ಕುಮಾರ್ ಮತ್ತು ಇತರ ಕಲಾವಿದರಿಂದ ನಾಟ್ಯ, ಸಂಗೀತ, ಗಮಕ ಹಾಗೂ ಕೀರ್ತನೋತ್ಸವ ಇದೆ.[ಫೆ. 17ರಿಂದ ಕೊಟ್ಟೂರು ಗುರುಬಸವೇಶ್ವರ ಸ್ವಾಮಿ ಜಾತ್ರೆ ಆರಂಭ]

Seebi Narasimha swamy Brahmarathotsava on Feb 13th

ಆ ನಂತರವೂ ಧಾರ್ಮಿಕ ಕಾರ್ಯಕ್ರಮಗಳು ಮುಂದುವರಿದು, 14ರಂದು ಬೆಳಗ್ಗೆ ಅಭಿಷೇಕ- ಅರ್ಚನೆ, ಸಂಜೆ ತೆಪ್ಪೋತ್ಸವ ಅಥವಾ ಅಡ್ಡಪಲ್ಲಕ್ಕಿ ಉತ್ಸವ, ಮೃಗಯಾ ಯಾತ್ರೆ, ಶಯನೋತ್ಸವ ಇದೆ. 15ರಂದು ಲೋಕಾಂಬ, ಚೆಂಚುಮಾಂಬ ದೇವಿಗೆ ಬಾಳೆಹಣ್ಣು ಅಲಂಕಾರ, ಅವಭೃತ ಸ್ನಾನ, ಮಹಾಭಿಷೇಕ ಹಾಗೂ ಸಂಜೆ ಧ್ವಜ ಅವರೋಹಣ, ದೊಡ್ಡ ಗರುಡೋತ್ಸವ ಇದೆ.

16ಕ್ಕೆ ದೇವರಿಗೆ ಅಭಿಷೇಕ-ಅರ್ಚನೆ, ಸಂಜೆ ದವನೋತ್ಸವ, ಹೆಜ್ಜೆ ಮಂಗಳಾರತಿ. 24ರಂದು ಮಹಾಶಿವರಾತ್ರಿ ಪ್ರಯುಕ್ತ ಅರ್ಧನಾರೀಶ್ವರ ದೇವರಿಗೆ ಅಭಿಷೇಕ-ಅರ್ಚನೆ, ಸಂಜೆ ದೇವರಿಗೆ ಪೂಜಾ ಕೈಂಕರ್ಯ ನಡೆಯಲಿದೆ. ಮಾರ್ಚ್ 25ರಂದು ಗೌರಿಗಂಗಾ ಚಂದ್ರಮೌಳೀಶ್ವರ ಸ್ವಾಮಿ ರಥೋತ್ಸವ ನಡೆಯಲಿದೆ.

English summary
Tumakuru district Seebi Narasimha swamy Brahmarathotsava on Feb 13th. On the backdrop of Brahmarathotsva various rituals starts from February 10th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X